ಬೆಂಗಳೂರು : ಎಲೆಕ್ಷನ್ ಹೊತ್ತಿನಲ್ಲೇ ಐಟಿ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿ, ಕಳೆದ 2 ದಿನಗಳಲ್ಲಿ 16 ಕಡೆ ರೇಡ್ ಮಾಡಿ 1 ಕೋಟಿ 33ಲಕ್ಷ ನಗದು, 16 ಕೋಟಿ ಮೌಲ್ಯದ – 22ಕೆಜಿ 923 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಉದ್ಯಮಿಗಳು, ಚಿನ್ನಾಭರಣ ಮಳಿಗೆ ಮಾಲೀಕರು ಹಾಗೂ ಕಚೇರಿಗಳ ಮೇಲೆ ರೇಡ್ ಮಾಡಿದ ಅಧಿಕಾರಿಗಳು ಬೇನಾಮಿ ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ 16 ಕಡೆ ಐಟಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಶಂಕರಪುರದಲ್ಲಿ 3 ಕೋಟಿಗೂ ಅಧಿಕ ಮೌಲ್ಯದ 4 ಕೆಜಿ 400 ಗ್ರಾಂ ಚಿನ್ನ, ಶಾರದದೇವಿ ರಸ್ತೆಯಲ್ಲಿ 3 ಕೋಟಿ 39 ಲಕ್ಷ ಮೌಲ್ಯದ 4 ಕೆಜಿ 800 ಗ್ರಾಂ ಚಿನ್ನ ಹಾಗೂ ಮರ್ಕೆಂಟೈಮ್ ಬ್ಯಾಂಕ್ ಬಳಿ 2 ಕೋಟಿ 13 ಲಕ್ಷ ಮೌಲ್ಯದ 3 ಕೆಜಿ ಚಿನ್ನ ವಶಕ್ಕೆ ಪಡೆದಿದ್ದಾರೆ.
ಇನ್ನು ಸಾರಸ್ವತ್ ಬ್ಯಾಂಕ್ ಬಳಿ ದಾಳಿ ನಡೆಸಿದ ಅಧಿಕಾರಿಗಳು 84 ಲಕ್ಷ ಮೌಲ್ಯದ 1ಕೆಜಿ 200 ಗ್ರಾಂ ಚಿನ್ನದ ಗಟ್ಟಿ , ಬಸವನಗುಡಿ ಪೋಸ್ಟ್ ಆಫೀಸ್ ಬಳಿ 3 ಲಕ್ಷ 34 ಸಾವಿರ ಮೌಲ್ಯದ 6.38 ಕ್ಯಾರೆಟ್ ವಜ್ರ ಹಾಗೂ ಮಾತಾ ಶಾರದ ದೇವಿ ರಸ್ತೆಯಲ್ಲಿ 3 ಲಕ್ಷದ 14 ಸಾವಿರ ಮೌಲ್ಯದ 5.99 ಕ್ಯಾರೆಟ್ ವಜ್ರ ಹಾಗೂ ಜಯನಗರದಲ್ಲಿ 6 ಕೋಟಿ 40 ಲಕ್ಷ ಮೌಲ್ಯದ 202.83 ಕ್ಯಾರೆಟ್ ವಜ್ರ ಸೀಜ್ ಮಾಡಿದ್ದಾರೆ.
ಇದನ್ನೂಓದಿ : ನಾಳೆಯಿಂದ ಉತ್ತರದತ್ತ ಅತಿರಥರ ದಂಡಯಾತ್ರೆ – ಕೇಸರಿ ಭದ್ರ ಕೋಟೆ ಭೇದಿಸಲು ಕಾಂಗ್ರೆಸ್ ರಣತಂತ್ರ..!