ಬಾಗಲಕೋಟೆ : ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆದ ಭ್ರೂಣ ಹತ್ಯೆ, ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆರೋಗ್ಯ ಇಲಾಖೆ ಕುಟುಂಬ ಕಲ್ಯಾಣ ಅಧಿಕಾರಿ ಡಾ ಡಿ.ಬಿ ಪುಟ್ಟಣಶೆಟ್ಟಿ ಮತ್ತು ಹಿಂದಿನ ಡಿಹೆಚ್ಓ ರಾಜಕುಮಾರ ಯರಗಲ್ ಅವರನ್ನು ಅಮಾನತು ಮಾಡಲಾಗಿದೆ.
ಮಹಾಲಿಂಗಪುರದಲ್ಲಿ ಮೇ ತಿಂಗಳಲ್ಲಿ ಮಹಾರಾಷ್ಟ್ರ ಮೂಲದ 33 ವರ್ಷದ ಸೋನಾಲಿ ಎಂಬ 4 ತಿಂಗಳ ಗರ್ಭಿಣಿ ಕವಿತಾ ಎಂಬುವವರಿಂದ ಗರ್ಭಪಾತ ಮಾಡಿಸಿಕೊಂಡು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನಲೆಯಲ್ಲಿ ಡಾ ಡಿ.ಬಿ ಪುಟ್ಟಣಶೆಟ್ಟಿ ಮತ್ತು ಯರಗಲ್ ಸಸ್ಪೆಂಡ್ ಮಾಡಲಾದೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮಖಂಡಿ ಟಿಹೆಚ್ಓ ಡಾ.ಜಿ.ಎಸ್ ಗಲಗಲಿ, ಮಹಾಲಿಂಗಪುರ ಸಮುದಾಯ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಡಾ ಅಮೋಜವ್ವ ಬಿದರಿ ಅವರನ್ನು ಪ್ರಸ್ತುತ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ. ಸಸ್ಪೆಂಡ್ ಮಾಡಿ ಆರೋಗ್ಯ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಕೆ ನದೀಮ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಮಂಸೋರೆ ನಿರ್ದೇಶನದ ‘ದೂರ ತೀರ ಯಾನ’ ಕ್ಕೆ ಜೊತೆಯಾದ ವಿಜಯ್ ಕೃಷ್ಣ-ಪ್ರಿಯಾಂಕ ಕುಮಾರ್..!