ಅಯ್ಯಪ್ಪ ಮಾಲಾಧಾರಿಗಳಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೊಟ್ಟಾಯಂನ ಘಾಟ್ ರಸ್ತೆಯಲ್ಲಿ ದೊಡ್ಡ ಪ್ರಪಾತದ ಕಡೆಗೆ ಜಾರಿದೆ. ಅದೃಷ್ಟವಶಾತ್ ರಸ್ತೆಯ ಪಕ್ಕ ಮರಗಳಿದ್ದ ಕಾರಣದಿಂದ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ.
ಓಲ್ಡ್ ಹೈದರಾಬಾದ್‌ನ ನಿವಾಸಿಗಳು ಮಾಲೆ ಧರಿಸಿ ಬಸ್‌ನಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೊರಟಿದ್ದರು. ಕೊಟ್ಟಾಯಂನಿಂದ ಶಬರಿಮಲೆಗೆ ಹೋಗುವಾಗ ಈ ಬಸ್ ಅಪಘಾತ ಸಂಭವಿಸಿದೆ. ಹೈದರಾಬಾದ್‌ನಿಂದ 30 ಅಯ್ಯಪ್ಪ ಸ್ವಾಮಿಯ ಭಕ್ತರು ಈ ಬಸ್‌ನಲ್ಲಿ ಶಬರಿಮಲೆಗೆ ಹೊರಟಿದ್ದರು. ಈ ದುರಂತದಲ್ಲಿ ಚಾಲಕ ಸಾವನ್ನಪ್ಪಿದ್ದು, ಬಸ್‌ನಲ್ಲಿದ್ದ 30 ಅಯ್ಯಪ್ಪ ಮಾಲಾಧಾರಿಗಳಿಗೆ ಗಾಯಗಳಾಗಿದೆ. ಗಾಯಾಳುಗಳಿಗೆ ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ : ಡಿಜಿಟಲ್ ಒಟಿಟಿ ಪ್ಲಾಟ್ ಫಾರ್ಮ್ಗೆ Glopixs ಲಗ್ಗೆ – ಏಕಕಾಲದಲ್ಲಿ 3 ರಾಜ್ಯಗಳಲ್ಲಿ ಲೋಗೋ ಲಾಂಚ್..!
Post Views: 943