ಶಬರಿಮಲೆಯಲ್ಲಿ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಯೊಬ್ಬರು ಆತ್ಮಹತತ್ಯೆ ಮಾಡಿಕೊಂಡಿದ್ದಾರೆ. ಮೃತ ಭಕ್ತನ್ನು ರಾಮನಗರ ಜಿಲ್ಲೆ ಕನಕಪುರದ ನಿವಾಸಿ ಕುಮಾರಸ್ವಾಮಿ ಎಂದು ಗುರುತಿಸಲಾಗಿದೆ.
ನಿನ್ನೆ ಅಯ್ಯಪ್ಪನ ದರ್ಶನ ಪಡೆದಿದ್ದ ಕುಮಾರಸ್ವಾಮಿ ಅವರು ಇದ್ದಕ್ಕಿದ್ದಂತೆ ದೇವಾಲಯದ ಸ್ಕೈವಾಕ್ ಮೇಲಿಂದ ಜಿಗಿದಿದ್ದರು. ಮೇಲಿಂದ ಬಿದ್ದ ರಭಸಕ್ಕೆ ಕೈ,ಕಾಲುಗಳಿಗೆ ಗಂಭೀರ ಗಾಯಗಳಾಗಿತ್ತು. ತಕ್ಷಣವೇ ಇವರನ್ನು ಸನ್ನಿಧಾನಂ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ದಾಖಲು ಮಾಡಲಾಗಿತ್ತು.
ಅಯ್ಯಪ್ಪ ದರ್ಶನದ ಬಳಿಕ ಕುಮಾರಸ್ವಾಮಿ ಅವರು ಶಬರಿಮಲೆ ದೇವಾಲಯದ ಮೇಲಿಂದ ಬೇಕಂತಲೇ ಜಂಪ್ ಮಾಡಿದ್ದರು. ದೇವಾಲಯದ ಮೇಲಿಂದ ಜಿಗಿಯುವ ಈ ದೃಶ್ಯ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. 40 ವರ್ಷದ ಕುಮಾರ್ ಅವರು ಈ ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ. ಸದ್ಯ ಶಬರಿಮಲೆಗೆ ಕುಮಾರ್ ಕುಟುಂಬಸ್ಥರು ತೆರಳಿದ್ದಾರೆ.
ಅಯ್ಯಪ್ಪನ ಭಕ್ತ ಕುಮಾರಸ್ವಾಮಿ ಅವರು ಕನಕಪುರದ ಮದ್ದೂರಮ್ಮ ಬೀದಿ ನಿವಾಸಿ ಆಗಿದ್ದರು. ಗಾರೆ ಕೆಲಸ ಮಾಡಿಕೊಂಡಿದ್ದ ಕುಮಾರ್, ಮೊನ್ನೆಯಷ್ಟೇ 6 ಮಂದಿ ಭಕ್ತರು ಸೇರಿ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಪಡೆದ ಬಳಿಕ ಕುಮಾರಸ್ವಾಮಿ ಅವರು ದೇವಾಲಯದ ಸ್ಕೈವಾಕ್ ಮೇಲಿಂದ ಜಂಪ್ ಮಾಡಿದ್ದಾರೆ. ಕೂಡಲೇ ಶಬರಿಮಲೆ ಸನ್ನಿಧಾನದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ರವಾನೆ ಮಾಡುವ ಮಾರ್ಗ ಮಧ್ಯೆ ಕುಮಾರ್ ಸಾವನ್ನಪ್ಪಿದ್ದಾರೆ. ಶಬರಿಮಲೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಲೋಕಸಭೆಯಲ್ಲಿ ‘ಒಂದು ದೇಶ-ಒಂದು ಚುನಾವಣೆ’ ಮಸೂದೆ ಮಂಡನೆ..!