Download Our App

Follow us

Home » ರಾಷ್ಟ್ರೀಯ » 11 ದಿನದಲ್ಲಿ 26 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ – ಸಂಗ್ರಹವಾದ ಕಾಣಿಕೆ ಎಷ್ಟು ಕೋಟಿ ಗೊತ್ತಾ? ಇಲ್ಲಿದೆ ಮಾಹಿತಿ..!

11 ದಿನದಲ್ಲಿ 26 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ – ಸಂಗ್ರಹವಾದ ಕಾಣಿಕೆ ಎಷ್ಟು ಕೋಟಿ ಗೊತ್ತಾ? ಇಲ್ಲಿದೆ ಮಾಹಿತಿ..!

ಅಯೋಧ್ಯೆ : ರಾಮಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಯಾಗಿ 11 ದಿನಗಳೇ ಕಳೆದಿದೆ. ಪ್ರತಿನಿತ್ಯ ಲಕ್ಷಾಂತರ ರಾಮನ ಭಕ್ತರು ರಾಮಮಂದಿರಕ್ಕೆ ಆಗಮಿಸುತ್ತಿದ್ದು, ಬಾಲರಾಮನ ಮೂರ್ತಿ ನೋಡಿ ಧನ್ಯರಾಗುತ್ತಿದ್ದಾರೆ. ಜನವರಿ 22ರಂದು ರಾಮಮಂದಿರವನ್ನು ಉದ್ಘಾಟನೆ ಮಾಡಲಾಗಿದ್ದುಮ ಇಲ್ಲಿಯವರೆಗೂ ಬರೋಬ್ಬರಿ 26 ಲಕ್ಷ ಜನರು ಭೇಟಿ ನೀಡಿದ್ದಾರೆ.

ಅಯೋಧ್ಯೆ ರಾಮಮಂದಿರಕ್ಕೆ ಪ್ರತಿನಿತ್ಯ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಭಕ್ತಸಾಗರ ಒಂದು ಕಡೆಯಾದ್ರೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಕೋಟ್ಯಾಂತರ ರೂಪಾಯಿ ದೇಣಿಗೆ ಕೂಡ ಹರಿದು ಬರುತ್ತಿದೆ. ಕಳೆದ 11 ದಿನದಲ್ಲಿ ರಾಮಮಂದಿರದ ಹುಂಡಿಯಲ್ಲಿ11 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ. ಭಕ್ತರು ಚೆಕ್​​ ಮೂಲಕ 3 ಕೋಟಿ ರೂಪಾಯಿ ಅನ್ನು ರಾಮನಿಗೆ ಸಮರ್ಪಿಸಿದ್ದಾರೆ.

ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಆಫೀಸ್‌ನ ಉಸ್ತುವಾರಿ ಪ್ರಕಾಶ್ ಗುಪ್ತಾ ಎಂಬುವವರು ಭಕ್ತರ ಕಾಣಿಕೆ ಬಗ್ಗೆ ಮಾಹಿತಿ ನಿಡಿದ್ದಾರೆ. ರಾಮಮಂದಿರದಲ್ಲಿ ನಾಲ್ಕು ಹುಂಡಿಗಳನ್ನು ಇಡಲಾಗಿದೆ. ರಾಮಲಲ್ಲಾ ಮೂರ್ತಿಯ ದರ್ಶನದ ಪಕ್ಕ, ಭಕ್ತರು ಕುಳಿತುಕೊಳ್ಳುವ ಪ್ರದೇಶದಲ್ಲಿ ಹುಂಡಿಗಳನ್ನು ಇಡಲಾಗಿದೆ. ಭಕ್ತರು ದೇಣಿಗೆ ನೀಡಲು 10 ಕೌಂಟರ್‌ಗಳನ್ನು ತೆರೆಯಲಾಗಿದೆ.

ದೇಣಿಗೆ ನೀಡುವ ಕೌಂಟರ್‌ಗಳಲ್ಲಿ ಟ್ರಸ್ಟ್‌ನ ಸಿಬ್ಬಂದಿ ದೇಣಿಗೆ ಸಂಗ್ರಹಿಸುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೂ ಈ ಕೌಂಟರ್‌ಗಳು ತೆರೆದಿರುತ್ತದೆ. ರಾಮಮಂದಿರ ಹುಂಡಿಯಲ್ಲಿ ಸಂಗ್ರಹವಾಗುವ ಹಣವನ್ನು ಎಣಿಕೆ ಮಾಡಲು 14 ಉದ್ಯೋಗಿಗಳನ್ನು ನೇಮಕ ಮಾಡಲಾಗಿದೆ. ಅದರಲ್ಲಿ 11 ಮಂದಿ ಬ್ಯಾಂಕ್ ಸಿಬ್ಬಂದಿಗಳಾದ್ರೆ ಮೂವರು ದೇವಸ್ಥಾನ ಟ್ರಸ್ಟ್‌ನ ಸಿಬ್ಬಂದಿಗಳಾಗಿದ್ದಾರೆ. ಸಿಸಿಟಿವಿ ಕಣ್ಗಾವಲಿನಲ್ಲಿ ಭಕ್ತರ ಕಾಣಿಕೆ ಹಣವನ್ನು ಲೆಕ್ಕ ಮಾಡಲಾಗುತ್ತಿದೆ.

ಈಗಲೂ ಪ್ರತಿದಿನ ಅಯೋಧ್ಯೆ ರಾಮಮಂದಿರಕ್ಕೆ ಲಕ್ಷ ಲಕ್ಷ ಭಕ್ತರು ಆಗಮಿಸುತ್ತಿದ್ದಾರೆ. ಲಕ್ಷಾಂತರ ಮಂದಿ ಭಕ್ತರು ರಾಮಲಲ್ಲಾ ಮೂರ್ತಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ಬಾಲರಾಮನ ಮೂರ್ತಿ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಡಿನ್ನರ್ ಮೀಟಿಂಗ್ – ಏನೆಲ್ಲಾ ಚರ್ಚೆ ನಡೆಸಿದ್ರು?

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here