ಬೆಂಗಳೂರು : ಅಭಯ್ ಖುಷಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಲತಃ ರೈತರಾಗಿರುವ ವಾಸುದೇವ ಆರ್. ದೊಡ್ಡ ಹೆಜ್ಜಾಜಿ ಅವರು ನಿರ್ಮಿಸಿರುವ, ಸಮರ್ಥ್ ಎಂ ನಿರ್ದೇಶನದೊಂದಿಗೆ ನಾಯಕನಾಗಿಯೂ ನಟಿಸಿರುವ “ಅಥಣಿ” ಚಿತ್ರದ “ಬಾರೆ ಬಾರೆ” ಎಂಬ ಹಾಡು ರಿಲೀಸ್ ಆಗಿದೆ.
ತುಮಕೂರಿನ ದಿಬ್ಬೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ “ಅಥಣಿ” ಚಿತ್ರದ “ಬಾರೆ ಬಾರೆ” ಎಂಬ ಸಾಂಗ್ ಬಿಡುಗಡೆಯಾಗಿದೆ. ಕೆ.ಪಿ.ಸಿ.ಸಿ ರಾಜ್ಯ ಉಪಾಧ್ಯಕ್ಷರಾದ ಮುರಳಿಧರ ಹಾಲಪ್ಪ ಹಾಗೂ ನಟ, ಸಂಕಲನಕಾರ ನಾಗೇಂದ್ರ ಅರಸ್ ಅವರು “ಬಾರೆ ಬಾರೆ” ಹಾಡನ್ನು ಬಿಡುಗಡೆ ಮಾಡಿ “ಅಥಣಿ” ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ರಾಜು ಚಿತ್ರಪುರ ಬರೆದಿರುವ “ಬಾರೆ ಬಾರೆ” ಹಾಡನ್ನು ಸ್ವಾತಿ ಶಂಕರ್ ಹಾಗೂ ಹರ್ಸಿವ್ ಭಘೀರ ಹಾಡಿದ್ದಾರೆ. ಹರ್ಷ ಕುಗೋಡು ಸಂಗೀತ ನೀಡಿದ್ದಾರೆ. ಅಭಯ ಖುಷಿ ಮ್ಯೂಸಿಕ್ ಚಾನಲ್ನಲ್ಲಿ ಬಿಡುಗಡೆಯಾಗಿರುವ “ಬಾರೆ ಬಾರೆ” ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಸಮರ್ಥ್ ಅವರು ಈ ಚಿತ್ರದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ಮಧು ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ನಾಗೇಂದ್ರ ಅರಸ್, ಶೋಭರಾಜ್, ಭವ್ಯ ಯತಿರಾಜ್, ಬಲರಾಜವಾಡಿ , ರಾಕೇಶ್ ಪೂಜಾರಿ, ಮೂರ್ತಿ, ವಿಷ್ಣು ಪ್ರಿಯ, ಶ್ರೀನಿಧಿ, ಇಂದ್ರ ಕುಮಾರ್, ಸಿ ಜಿ ದಿಬ್ಬೂರು ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.
ರೈತಪರ ಕಾಳಜಿಯನ್ನು ಹೊಂದಿರುವ “ಅಥಣಿ” ಚಿತ್ರದಲ್ಲಿ ಕ್ರೈಂ..ಲವ್ ..ಸಸ್ಪೆನ್ಸ್ ಮತ್ತು ಕಾಮಿಡಿ ಹೀಗೆ ಪ್ರೇಕ್ಷಕನಿಗೆ ಬೇಕಾದ ಎಲ್ಲಾ ಅಂಶಗಳು ಇವೆ.
“ಅಥಣಿ” ಚಿತ್ರದಲ್ಲಿ ಹರ್ಷ ಕೂಗೋಡು ಸಂಗೀತ ನೀಡಿರುವ ಐದು ಹಾಡುಗಳಿವೆ. ಆ ಪೈಕಿ ಮೊದಲ ಹಾಡಾಗಿ “ಬಾರೆ ಬಾರೆ” ಐಟಂ ಸಾಂಗ್ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಹಾಡುಗಳು ಕೂಡ ಅನಾವರಣವಾಗಲಿವೆ. ಸಂದೀಪ್ ಹೊನ್ನಾಳಿ ಛಾಯಾಗ್ರಹಣ ಹಾಗೂ ಸುನಯ್ ಜೈನ್ ಅವರ ಸಂಕಲನವಿರುವ ಈ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ.
ಇದನ್ನೂ ಓದಿ : ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ‘ಕೇಸರಿ’ ಬಿಗಿಪಟ್ಟು – ಜೂ.ಖರ್ಗೆ ನಿವಾಸದ ಬಳಿ ಭಾರೀ ಹೈಡ್ರಾಮಾ!