Download Our App

Follow us

Home » ರಾಜಕೀಯ » ವಿಧಾನಸಭೆ ಕಲಾಪ ಆರಂಭ ಆಗ್ತಿದ್ದಂತೆ ಮುಂದುವರೆದ ಮುಡಾ ಕೋಲಾಹಲ..!

ವಿಧಾನಸಭೆ ಕಲಾಪ ಆರಂಭ ಆಗ್ತಿದ್ದಂತೆ ಮುಂದುವರೆದ ಮುಡಾ ಕೋಲಾಹಲ..!

ಬೆಂಗಳೂರು : ಮೂಡಾ ಹಗರಣ ಸಂಬಂಧ ಬಿಜೆಪಿ-ಜೆಡಿಎಸ್ ಸದಸ್ಯರು ನಿನ್ನೆಯಿಂದ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ನಿನ್ನೆ ಸದನದಲ್ಲಿ ಬಿಜೆಪಿ ಸದಸ್ಯರು ಮೂಡಾ ಹಗರಣ ಸಂಬಂಧ ಚರ್ಚೆಗೆ ಅವಕಾಶ ನೀಡುವಂತೆ ಸ್ಪೀಕರ್​ ಅವರನ್ನು ಒತ್ತಾಯಿಸಿದ್ದರು. ಆದರೆ ಸ್ಪೀಕರ್ ಅವಕಾಶ ನೀಡದೆ ತಿರಸ್ಕರಿಸಿದ್ದರು. ಈ ಹಿನ್ನೆಲೆ ಪ್ರತಿಪಕ್ಷಗಳು ಸದನದ ಬಾವಿಗಿಳಿದು ರಾಜ್ಯ ಸರ್ಕಾರ ಹಾಗೂ ಸ್ಪೀಕರ್ ವಿರುದ್ಧ ಧರಣಿ ನಡೆಸಿದರು.

ಇಂದು ಕೂಡ ಸದನಲ್ಲಿ ಮುಡಾ ಕೋಲಾಹಲ ಮುಂದುವರೆದಿದೆ. BJP-JDS ನಾಯಕರು ಮುಡಾ ಹಗರಣ ಚರ್ಚೆಗೆ ಪಟ್ಟು ಹಿಡಿದಿದ್ದು, ವಿಧಾನಸಭೆ ಕಲಾಪ ಆರಂಭ ಆಗ್ತಿದ್ದಂತೆ ಬಿಜೆಪಿ ಧರಣಿ ನಡೆಸಿದ್ದಾರೆ. ಚರ್ಚೆಗೆ ಅವಕಾಶ ಬೇಕೇಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದಾರೆ.

ವಿಪಕ್ಷ ನಾಯಕ ಆರ್​​.ಅಶೋಕ್​ ನೇತೃತ್ವದಲ್ಲಿ ಧರಣಿ ನಡೆಸುತ್ತಿದ್ದು, ಈ ವೇಳೆ ಸ್ಪೀಕರ್​​​ ವಿಪಕ್ಷ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರೂ ಮನವೊಲಿಕೆ ಸಾಧ್ಯವಾಗದಿದ್ದರಿಂದ ಕಲಾಪ ಮುಂದೂಡಿದ್ದರು.

ಇದನ್ನೂ ಓದಿ : ಬೆಂಗಳೂರಲ್ಲಿ ಮಿತಿಮೀರಿದ ಡೆಡ್ಲಿ ವ್ಹೀಲರ್ಸ್​ಗಳ ಕಾಟ – ನಡುರಸ್ತೆಯಲ್ಲಿ ಕಾರಿಗೆ ಒದ್ದು ಚಾಲಕನಿಗೆ ಧಮ್ಕಿ ಹಾಕಿದ ಪುಂಡರು..!

Leave a Comment

DG Ad

RELATED LATEST NEWS

Top Headlines

ಸಿಎಂ ಸಿದ್ದರಾಮಯ್ಯಗೆ ಸದ್ಯಕ್ಕಿಲ್ಲ CBI ಸಂಕಷ್ಟ – ಮುಡಾ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್​!

ಧಾರವಾಡ : ಇಂದು ಧಾರವಾಡ ಹೈಕೋರ್ಟ್​ನಲ್ಲಿ ಮುಡಾ ಕೇಸ್ ತನಿಖೆ ಸಿಬಿಐಗೆ ನೀಡುವಂತೆ ಕೋರಿ​ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ವಾದ-ಪ್ರತಿವಾದ ಆಲಿಸಿದ  ಧಾರವಾಡ ಹೈಕೋರ್ಟ್​

Live Cricket

Add Your Heading Text Here