Download Our App

Follow us

Home » ಅಪರಾಧ » ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ – ಶಾಸಕ ಸತೀಶ್​ ಸೈಲ್ ಸೇರಿ 7 ಮಂದಿ ಅರೆಸ್ಟ್..!

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ – ಶಾಸಕ ಸತೀಶ್​ ಸೈಲ್ ಸೇರಿ 7 ಮಂದಿ ಅರೆಸ್ಟ್..!

ಕಾರವಾರ : ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್​ ಸೈಲ್​ನ್ನು CBI ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಇಂದು ಸತೀಶ್​ ಸೈಲ್​ ಸೇರಿ 7 ಮಂದಿಗೆ ಶಿಕ್ಷೆ ಪ್ರಕಟವಾಗಲಿದೆ.

ಶಾಸಕ ಸತೀಶ್​ ಸೈಲ್ ಸೇರಿ 7 ಮಂದಿ ಅರೆಸ್ಟ್​ ಆಗಿದ್ದು, ಮಹೇಶ್​, ಚೇತನ್​, ಕೆ.ವಿ.ನಾಗರಾಜ್​, ಗೋವಿಂದರಾಜ್, ಖಾರದಪುಡಿ ಮಹೇಶ್​, ಪ್ರೇಮ್​ ಚಂದ್​ ಬಂಧಿತ ಆರೋಪಿಗಳು. ಜನಪ್ರತಿನಿಧಿಗಳ ಕೋರ್ಟ್ 7 ಮಂದಿ ದೋಷಿ ಎಂದು ತೀರ್ಪು ನೀಡಿತ್ತು, ಬೇಲೇಕೇರಿ ಅದಿರು ನಾಪತ್ತೆ ಸಂಬಂಧ 6 ಕೇಸ್​ ದಾಖಲಾಗಿದ್ದವು. ನಿನ್ನೆ ವಿಶೇಷ ಕೋರ್ಟ್​ 7 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿದೆ. ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮಹೇಶ್ ಬಿಳೆಯಿ ಕೂಡಾ ದೋಷಿಯಾಗಿದ್ದು, ಇಂದು ಶಿಕ್ಷೆ ಘೋಷಣೆ ಆಗ್ತಿದ್ದಂತೆ ಆರೋಪಿಗಳನ್ನು ಜೈಲಿಗೆ ರವಾನಿಸಲಾಗುತ್ತದೆ.

ಸತೀಶ್​ ಸೈಲ್​​ನ್ನು ಸಿಬಿಐ ಅಧಿಕಾರಿಗಳು ಕೋರ್ಟ್​ನಲ್ಲೇ ​ಅರೆಸ್ಟ್ ಮಾಡಿದ್ದಾರೆ. ಸತೀಶ್​ ಸೈಲ್​ಗೆ 2 ವರ್ಷಕ್ಕಿಂತ ಹೆಚ್ಚು ವರ್ಷ ಶಿಕ್ಷೆ ನೀಡಿದ್ರೆ ಶಾಸಕತ್ವಕ್ಕೆ ಕುತ್ತು ಬರಲಿದೆ. 2013ರಲ್ಲಿ ಅರೆಸ್ಟ್​ ಆಗಿ ಬೇಲ್​​ ಮೇಲೆ ಹೊರ ಬಂದಿದ್ದ ಶಾಸಕ ಸತೀಶ್​ ಸೈಲ್​​ ಇದೀಗ ಎರಡನೇ ಬಾರಿ​​ ಅರೆಸ್ಟ್​ ಆಗಿದ್ದಾರೆ.

ಪ್ರಕರಣದ ಹಿನ್ನಲೆ :

2010ರಲ್ಲಿ ಬಳ್ಳಾರಿಯಿಂದ ಅದಿರು ಸಾಗಾಟ ಮಾಡಿ ಕಾರವಾರ ಬಂದರು ಮೂಲಕ ವಿದೇಶಕ್ಕೆ ರಫ್ತು ಮಾಡಲಾಗಿತ್ತು. ಈ ಸ್ಕ್ಯಾಮ್ ಅನ್ನು ಮಾಜಿ ಕರ್ನಾಟಕ ಲೋಕಾಯುಕ್ತರಾದ ಎನ್. ಸಂತೋಶ್ ಹೆಗ್ಡೆ ಬೆಳಕಿಗೆ ತಂದಿದ್ದರು. ಈ ವರದಿಯನ್ವಯ 7.74 ಮಿಲಿಯನ್ ಟನ್ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗಿತ್ತು. 2006-07 ಹಾಗೂ 2010-11ರ ನಡುವೆ ಭಾರೀ ಪ್ರಮಾಣದ ಅದಿರು ವಿದೇಶಕ್ಕೆ ರಫ್ತಾಗಿತ್ತು. ಇದರಿಂದ ಸರಕಾರದ ಖಜಾನೆಗೆ ಭಾರೀ ನಷ್ಟವುಂಟಾಗಿತ್ತು

ಮಲ್ಲಿಕಾರ್ಜುನ ಶಿಪ್ಪಿಂಗ್ ಕಾರ್ಪೊರೇಷನ್ ಮಾಲೀಕರಾಗಿದ್ದ ಸತೀಶ್ ಸೈಲ್ ವಿರುದ್ಧ ಕ್ರಿಮಿನಲ್ ಕಾನ್ಸ್ಪಿರೆಸಿ, ಚೀಟಿಂಗ್, ಪೋರ್ಜರಿ, ಟ್ರೆಸ್‌ಪಾಸ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಸಿಬಿಐ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಪ್ರಕರಣ ಸಂಬಂಧಿಸಿ 2013ರ ಸೆಪ್ಟೆಂಬರ್ ತಿಂಗಳಲ್ಲಿ ಸಿಬಿಐ ಸತೀಶ್ ಸೈಲ್ ಅವರನ್ನು ಬಂಧಿಸಿತ್ತು. ಇನ್ನು ಈ ಪ್ರಕರಣದಲ್ಲಿ ಅಂದಿನ ಬಿಎಸ್‌ಆರ್ ಕಾಂಗ್ರೆಸ್ ಕಂಪ್ಲಿ ಶಾಸಕ ಸುರೇಶ್ ಬಾಬು ಸಹ ಅರೆಸ್ಟ್ ಆಗಿದ್ದರು. ಬಳಿಕ ಸತೀಶ್ ಸೈಲ್ ಸಹ ಬಂಧನಕ್ಕೊಳಗಾಗಿದ್ದರು.

ಇದನ್ನೂ ಓದಿ : ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಿಗ್ ಶಾಕ್ – ಬಂಡಾಯವೆದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ..!

Leave a Comment

DG Ad

RELATED LATEST NEWS

Top Headlines

ಬೆಳಗಾವಿ : ಮಕ್ಕಳ ಕಳ್ಳರ ಮೇಲೆ ಅಥಣಿ ಪೋಲಿಸರ ಫೈರಿಂಗ್..!

ಬೆಳಗಾವಿ : ಮಕ್ಕಳ ಕಳ್ಳರ ಮೇಲೆ ಅಥಣಿ ಪೋಲಿಸರು ಫೈರಿಂಗ್ ಮಾಡಿ ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಮೂರು ತಂಡ ರಚಿಸಿ ಅಪಹರಣಕಾರರಿಗೆ

Live Cricket

Add Your Heading Text Here