Download Our App

Follow us

Home » ಸಿನಿಮಾ » ಸಂಕ್ರಾಂತಿ ಹಬ್ಬಕ್ಕೆ ಡಾಲಿ ಪಿಕ್ಚರ್ಸ್ ಕಡೆಯಿಂದ ಸಿಹಿ ಸುದ್ದಿ – ಏ.10ಕ್ಕೆ ತೆರೆಗೆ ಬರ್ತಿದೆ “ವಿದ್ಯಾಪತಿ”..!

ಸಂಕ್ರಾಂತಿ ಹಬ್ಬಕ್ಕೆ ಡಾಲಿ ಪಿಕ್ಚರ್ಸ್ ಕಡೆಯಿಂದ ಸಿಹಿ ಸುದ್ದಿ – ಏ.10ಕ್ಕೆ ತೆರೆಗೆ ಬರ್ತಿದೆ “ವಿದ್ಯಾಪತಿ”..!

ಕನ್ನಡ ಚಿತ್ರರಂಗದಲ್ಲಿಯೂ ಇಂದು ಸುಗ್ಗಿ ಸಂಭ್ರಮ ಜೋರಾಗಿದೆ. ತಾರೆಯರು ಅದ್ಧೂರಿ ಸಂಕ್ರಾಂತಿ ಸೆಲೆಬ್ರೆಟ್ ಮಾಡುತ್ತಿದ್ದಾರೆ. ಈ ಸುಗ್ಗಿ ಹಬ್ಬದ ವಿಶೇಷವಾಗಿ ಡಾಲಿ ಪಿಕ್ಚರ್ಸ್ ಸಿಹಿ ಸುದ್ದಿ ಕೊಟ್ಟಿದೆ. ಕಳೆದ ಸಂಕ್ರಾಂತಿ ಹಬ್ಬಕ್ಕೆ ವಿದ್ಯಾಪತಿ ಸಿನಿಮಾ ಅನೌನ್ಸ್ ಮಾಡಿದ್ದ ಡಾಲಿ ಧನಂಜಯ್ ಈ ಬಾರಿಯ ಸುಗ್ಗಿ ಹಬ್ಬಕ್ಕೆ ವಿದ್ಯಾಪತಿ ಆಗಮನದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ವಿಶೇಷವಾದ ವಿಡಿಯೋ ಮೂಲಕವೇ ವಿದ್ಯಾಪತಿ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ.

ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್‌ನ ನಾಲ್ಕನೇ ಚಿತ್ರ ವಿದ್ಯಾಪತಿ ಏಪ್ರಿಲ್ 10ಕ್ಕೆ ತೆರೆಗೆ ಬರ್ತಿದೆ. ಈ ಚಿತ್ರದಲ್ಲಿ ಟಗರು ಪಲ್ಯದಲ್ಲಿ ನಾಯಕನಾಗಿ ಮಿಂಚಿದ್ದ ನಾಗಭೂಷಣ್ ಕರಾಟೆ ಕಿಂಗ್ ಅವತಾರವೆತ್ತಿದ್ದಾರೆ. ಕರಾಟೆ ಮಾಸ್ಟರ್ ಆಗಿ ಇಲ್ಲಿ ರಂಗಾಯಣ ರಘು ಅಭಿನಯಿಸಿದ್ದಾರೆ. ನಾಯಕಿಯಾಗಿ ಮಲೈಕಾ ಟಿ ವಸುಪಾಲ್ ನಾಗಭೂಷಣ್ ಗೆ ಜೋಡಿಯಾಗಿ ಸಾಥ್ ಕೊಟ್ಟಿದ್ದು, ಅಷ್ಟೇ ಅಲ್ಲದೇ ಬಹುದೊಡ್ಡ ತಾರಾಗಣವಿದ್ದು ನಂತರದ ದಿನಗಳಲ್ಲಿ ಅದರ ವಿವರಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆ.

ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಿನಿಮಾಗೆ ಕಥೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ವಿದ್ಯಾಪತಿ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಮೊದಲು‌ ನಿಗದಿಯಾಗಿದ್ದ ದಿನದಂದು ಅಂದರೆ ಏಪ್ರಿಲ್ 10ಕ್ಕೆ ಚಿತ್ರಮಂದಿರಗಳಲ್ಲಿ ದರ್ಶನ ಕೊಡಲಿದೆ.

ಇದನ್ನೂ ಓದಿ : ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ?

Leave a Comment

DG Ad

RELATED LATEST NEWS

Top Headlines

ಅಯ್ಯಪ್ಪ ಸ್ವಾಮಿ ಜಾತ್ರೆಯಲ್ಲಿ ನೆರೆದಿದ್ದ ಭಕ್ತರ ಮೇಲೆ ಹರಿದ ಕಾರು – ಯುವತಿ ಸಾವು, 8ಕ್ಕೂ ಹೆಚ್ಚು ಮಂದಿಗೆ ಗಾಯ!

ಉತ್ತರ ಕನ್ನಡ : ಅಯ್ಯಪ್ಪ ಸ್ವಾಮಿ ದೇಗುಲದ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಮೇಲೆ ಕಾರು ಹರಿದ ಪರಿಣಾಮ ಓರ್ವ ಯುವತಿ ಸಾವನ್ನಪ್ಪಿ, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ

Live Cricket

Add Your Heading Text Here