Download Our App

Follow us

Home » ಸಿನಿಮಾ » ಆರ್ ಚಂದ್ರು ನೇತೃತ್ವದ ‘ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್’ ಸಂಸ್ಥೆಗೆ ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರಶಂಸನಾ ಪತ್ರ..!

ಆರ್ ಚಂದ್ರು ನೇತೃತ್ವದ ‘ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್’ ಸಂಸ್ಥೆಗೆ ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರಶಂಸನಾ ಪತ್ರ..!

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನಲ್ಲಿ ಮೂಡಿಬಂದ ಪ್ಯಾನ್ ಇಂಡಿಯಾ ಚಿತ್ರ “ಕಬ್ಜ” ದೇಶಾದ್ಯಂತ ಜನಮನ್ನಣೆ ಪಡೆದಿತ್ತು. ಈ ಚಿತ್ರವನ್ನು ಆರ್ ಚಂದ್ರು ನಿರ್ಮಾಣ ಮಾಡಿ ನಿರ್ದೇಶಿಸಿದ್ದಾರೆ. ಈಗ ಈ ಸಿನಿಮಾವನ್ನ ನಿರ್ಮಿಸಿದ್ದ ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆ ಅತೀ ಹೆಚ್ಚು ತೆರಿಗೆ ಪಾವತಿಸಿದ ಕೀರ್ತಿಗೆ ಭಾಜನವಾಗಿದೆ. ದಾಖಲೆ ಮೊತ್ತದ ಹಣವನ್ನು‌ “ಕಬ್ಜ” ಚಿತ್ರದ ಸಲುವಾಗಿ ಆರ್ ಚಂದ್ರು ಕೇಂದ್ರ ತೆರಿಗೆ ಇಲಾಖೆಗೆ ಪಾವತಿಸಿದ್ದಾರೆ‌.

ಯಾವುದೇ ತೆರಿಗೆ ಉಳಿಸಿಕೊಳ್ಳದೇ ಅಧಿಕ ಮೊತ್ತದ ತೆರಿಗೆಯನ್ನು ಪಾವತಿಸಿರುವುದಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರಶಂಸನಾ ಪತ್ರ ಕೂಡ ದೊರಕಿದೆ. ಸರ್ಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ಪಾವತಿಸಿದ ಸಾಲಿಗೆ ಕನ್ನಡದ “ಕಬ್ಜ” ಚಿತ್ರ ಸೇರಿದೆ. ಇತ್ತೀಚೆಗೆ ನಡೆದ ಪ್ರಜಾವಾಣಿ ಕನ್ನಡ ‌ಸಿನಿ ಸಮ್ಮಾನ ಸಮಾರಂಭದಲ್ಲಿ ‌ಅತ್ಯುತ್ತಮ ವಿಎಫ್ಎಕ್ಸ್ ಪೋಸ್ಟ್ ಪ್ರೊಡಕ್ಷನ್ ಹಾಗೂ ಅನ್ನಿಮೇಷನ್ ಚಿತ್ರ ಪ್ರಶಸ್ತಿಗೆ “ಕಬ್ಜ” ಚಿತ್ರ ಭಾಜನವಾಗಿದೆ.

ಈ ಎಲ್ಲಾ ಖುಷಿಯ ವಿಚಾರಗಳ ನಡುವೆ ಆರ್ ಚಂದ್ರು ಅವರ ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಐದು ಚಿತ್ರಗಳಲ್ಲಿ ಒಂದಾದ ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರೈ ಮುಂತಾದವರು ನಟಿಸುತ್ತಿರುವ “ಫಾದರ್” ಚಿತ್ರಕ್ಕೆ ಮೈಸೂರಿನಲ್ಲಿ‌ ಮೊದಲ ಹಂತದ ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದೆ.

ಕಬ್ಜ ಚಿತ್ರದಲ್ಲಿ ಉಪೇಂದ್ರ ಜತೆಗೆ, ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ಸಹ ನಟಿಸಿದ್ದಾರೆ. ಹಾಗೆಯೇ ನಟಿ ಶ್ರೀಯಾ ಶರಣ್, ಮುರಳಿ ಶರ್ಮಾ ಅನೇಕ ತಾರಾಬಳಗ ಈ ಸಿನಿಮಾದಲ್ಲಿ ನಟಿಸಿದೆ.

ಇದನ್ನೂ ಓದಿ : ಬಿಜೆಪಿಯವರು ಹಿಂದೂಗಳಲ್ಲ, ಮೋದಿ ಹಿಂದೂ ಅಲ್ಲ : ಲೋಕಸಭೆಯಲ್ಲಿ ಗುಡುಗಿದ ರಾಹುಲ್ ಗಾಂಧಿ..!

Leave a Comment

DG Ad

RELATED LATEST NEWS

Top Headlines

‘ನನ್ನ ನೀನು ಗೆಲ್ಲಲಾರೆ’ ಸಾಂಗ್​​ಗೆ​​ ಸಖತ್​​​ ಸ್ಟೆಪ್​​ ​​ಹಾಕಿದ ಚೈತ್ರಾ-ಸುರೇಶ್​.. ಬಿದ್ದು ಬಿದ್ದು ನಕ್ಕ ಕಿಚ್ಚ..!

ಬಿಗ್‌ ಬಾಸ್‌ ಮನೆಯಲ್ಲಿ ಶನಿವಾರ ಹಾಗೂ ಭಾನುವಾರ ಬಂದರೆ ಸ್ಪರ್ಧಿಗಳಿಗೆ ಸ್ವಲ್ಪ ತಲೆಬಿಸಿ ಆರಂಭವಾಗುತ್ತದೆ. ಈ ಬಾರಿ ನಾನೇನು ತಪ್ಪು ಮಾಡಿದ್ದೇನೆ ಎಂದು ಅವರಿಗವರೇ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ.

Live Cricket

Add Your Heading Text Here