ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಮತ್ತೊಂದು ಚಿರತೆ ಬೋನಿಗೆ ಬಿದ್ದಿರುವ ಘಟನೆ ನಡೆದಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಕಳೆದೊಂದು ವಾರದಿಂದಲೂ ಕಾರ್ಯಾಚರಣೆ ನಡೆಸುತ್ತಿತ್ತು. ಇದೀಗ ಕೊನೆಗೂ ಶಿವಗಂಗೆಯ ಮುದ್ದೀರೇಶ್ವರ ದೇವಾಲಯ ಬಳಿ ಬೋನಿಗೆ ಬಿದ್ದಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು, ನಿನ್ನೆ ಒಂದು ಚಿರತೆ ಸೆರೆ ಹಿಡಿದಿದ್ದರು. ಸಾಕಷ್ಟು ಪ್ರಮಾಣದಲ್ಲಿ ಚಿರತೆ ಇರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಅಧಿಕಾರಿಗಳು, ಕಂಬಾಳು ಸಮೀಪದ ಗೊಲ್ಲರಹಟ್ಟಿಯಲ್ಲಿ ಬೋನು ಇಟ್ಟಿದ್ದರು. ಇದೀಗ ಇತ್ತೀಚೆಗೆ ಮಹಿಳೆಯೊಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ಚಿರತೆ ದೇಗುಲದ ಬಳಿ ದೊಡ್ಡ ಬೋನಿಗೆ ಬಿದ್ದಿದೆ.
ಇದನ್ನೂ ಓದಿ : ಕಲಬುರಗಿ : ನರ್ಸ್ ಸೋಗಿನಲ್ಲಿ ಬಂದು ಹಸುಗೂಸು ಕಿಡ್ನ್ಯಾಪ್ – ಪ್ರಕರಣ ದಾಖಲು..!
Post Views: 86