Download Our App

Follow us

Home » ಅಪರಾಧ » ಶಿವಮೊಗ್ಗದ ಜ್ಯುವೆಲ್ಲರಿ ಶಾಪ್ ಮಾಲೀಕನಿಗೆ ವಂಚನೆ – ವರ್ತೂರು ಆಪ್ತೆ ಶ್ವೇತಾಗೌಡ ವಿರುದ್ಧ ಮತ್ತೊಂದು FIR..!

ಶಿವಮೊಗ್ಗದ ಜ್ಯುವೆಲ್ಲರಿ ಶಾಪ್ ಮಾಲೀಕನಿಗೆ ವಂಚನೆ – ವರ್ತೂರು ಆಪ್ತೆ ಶ್ವೇತಾಗೌಡ ವಿರುದ್ಧ ಮತ್ತೊಂದು FIR..!

ಬೆಂಗಳೂರು : ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಎಂದು ನಂಬಿಸಿ ಜ್ಯುವೆಲ್ಲರಿ ಮಾಲೀಕರೊಬ್ಬರಿಗೆ ಕೋಟಿ ಕೋಟಿ ವಂಚಿಸಿದ ಆರೋಪದ ಮೇಲೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿರುವ ಚಾಲಾಕಿ ಚೋರಿ ಶ್ವೇತಾಗೌಡ ವಿರುದ್ಧ ಎರಡನೇ ಎಫ್‌ಐಆರ್ ದಾಖಲಾಗಿದೆ.

ಚಾಲಾಕಿ ಚೋರಿ ಶ್ವೇತಾಗೌಡ ವಿರುದ್ಧ ಶಿವಮೊಗ್ಗದ ಮತ್ತೊಬ್ಬ ಜ್ಯುವೆಲ್ಲರಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಆಕೆ ರೂ. 20 ಲಕ್ಷ ಮೌಲ್ಯದ ಚಿನ್ನ ಪಡೆದು ನನಗೂ ವಂಚಿಸಿದ್ದಾಳೆ ಎಂದು ತಿಳಿಸಿದ್ದಾರೆ. ಸಾಗರದ ಪ್ರಗತಿ ಜ್ಯುವೆಲ್ಲರಿ ಅಂಗಡಿಯ ಮಾಲೀಕ ಆರ್. ಬಾಲರಾಜ್ ಸೇಠ್ ದಾಖಲಿಸಿರುವ FIRನಲ್ಲಿ ಶ್ವೇತಾ ಅವರನ್ನು ನಗರದ ಇನ್ನೊಬ್ಬ ಆಭರಣ ಅಂಗಡಿ ಮಾಲೀಕ ಸಂಜಯ್ ಎಂಬುವರು ತನಗೆ ಪರಿಚಯಿಸಿದ್ದಾಗಿ ಉಲ್ಲೇಖಿಸಿದ್ದಾರೆ.

ಡಿಸೆಂಬರ್ 11 ರಂದು ನಗರದಲ್ಲಿ ಕೆಫೆ ಶಾಪ್ ನಲ್ಲಿ ಭೇಟಿಯಾದ ತನ್ನ ಸಹೋದರನಿಂದ ರೂ. 20 ಲಕ್ಷಕ್ಕೂ ಹೆಚ್ಚು ಮೌಲ್ಯದ 250 ಗ್ರಾಂ ತೂಕದ ಆಂಟಿಕ್ ಆಭರಣಗಳನ್ನು ಶ್ವೇತಾ ಅವರು ಪಡೆದಿದ್ದಾರೆ. ರೂ. 5 ಲಕ್ಷದ ಎರಡು ಚೆಕ್ ಹಾಗೂ ರೂ. 6 ಲಕ್ಷ ಮೊತ್ತದ ಮತ್ತೊಂದು ಚೆಕ್ ನ್ನು ಆಕೆ ನೀಡಿದ್ದು, ಉಳಿದ ರೂ. 4.75 ಲಕ್ಷ ಹಣವನ್ನು RTGS ಮೂಲಕ ಕಳುಹಿಸುವುದಾಗಿ ಹೇಳಿದ್ದಾರೆ. ಆದರೆ, ಹಣವನ್ನೂ ಆಕೆ ಕಳುಹಿಸಿಲ್ಲ. ಮೂರು ಚೆಕ್​ಗಳು ಅಮಾನ್ಯವಾಗಿವೆ.

ತದನಂತರ ಆಕೆಯನ್ನು ಪ್ರಶ್ನಿಸಿದಾಗ ಬ್ಯಾಂಕ್​ನಲ್ಲಿ ಸಮಸ್ಯೆಯಿರುವುದಾಗಿ ಹೇಳಿದ್ದರು. ತದನಂತರ ಡಿಸೆಂಬರ್ 14 ರಂದು ಆಕೆಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂಜಯ್‌ಗೆ ಕರೆ ಮಾಡಿದಾಗ ಅವರಿಗೂ ಶ್ವೇತಾ ವಂಚನೆ ಮಾಡಿರುವುದು ತಿಳಿಯಿತು. ಬಳಿಕ ಡಿಸೆಂಬರ್ 18ರಂದು ದೂರು ದಾಖಲಿಸಿರುವುದಾಗಿ ಬಾಲರಾಜ್ ಸೇಠ್ ತಿಳಿಸಿದ್ದಾರೆ. ಶ್ವೇತಾಗೌಡ ಸದ್ಯ 2.4 ಕೋಟಿ ವಂಚಿಸಿದ ಆರೋಪ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಇದನ್ನೂ ಓದಿ : ಶತಾಯುಷಿ, ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌ ನಿಧನ..!

Leave a Comment

DG Ad

RELATED LATEST NEWS

Top Headlines

ಕರ್ನಾಟಕದಲ್ಲಿ ಐತಿಹಾಸಿಕ ಬೆಳವಣಿಗೆ – 6 ನಕ್ಸಲರು ಇಂದು ಶರಣಾಗತಿ.. ಚಿಕ್ಕಮಗಳೂರಲ್ಲಿ ಹೇಗಿದೆ ತಯಾರಿ?

ಚಿಕ್ಕಮಗಳೂರು : ಇಂದು (ಜ.08) ಕರ್ನಾಟಕದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡು ಮೂಲದ 6 ಮೋಸ್ಟ್‌ ವಾಂಟೆಡ್‌ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ

Live Cricket

Add Your Heading Text Here