ಬೆಂಗಳೂರು : ವರಾಹಿ ಜ್ಯುವೆಲ್ಲರ್ಸ್ ಮಾಲೀಕರಿಗೆ ವಂಚನೆ ಮಾಡಿ ಜೈಲು ಸೇರಿರುವ ಐಶ್ವರ್ಯ ಗೌಡ ವಿರುದ್ಧ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆಯಿದೆ. ಐಶ್ವರ್ಯ ಗೌಡ ವಂಚನೆ ಹಿಸ್ಟರಿ ಬಗೆದಷ್ಟು ಬಯಲಾಗುತ್ತಿದ್ದು, ಈಕೆಯಿಂದ ಕೋಟಿಗಟ್ಟಲೆ ವಂಚನೆಗೊಳಗಾದ ಮತ್ತೋರ್ವ ವ್ಯಕ್ತಿ ದೂರು ನೀಡಲು ಮುಂದಾಗಿದ್ದಾರೆ.
ವನಿತಾ ಐತಾಳ ನೀಡಿರುವ ದೂರಿನ ಮೇರೆಗೆ ವಂಚಕಿ ಐಶ್ವರ್ಯ ಗೌಡ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ವನಿತಾಗೆ ಮಾತ್ರವಲ್ಲ ಹಲವು ಜನರಿಗೆ ಐಶ್ವರ್ಯ ಗೌಡ ಕೋಟಿಗಟ್ಟಲೇ ವಂಚನೆ ಮಾಡಿರೋದು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ಬೆಂಗಳೂರಿನ ಉದ್ಯಮಿ ಸೋನು ಲಂಬಾಣಿ ಎಂಬುವವರಿಗೂ ಐಶ್ವರ್ಯ ಗೌಡ 5.5 ಕೋಟಿ ರೂಪಾಯಿ ವಂಚಿಸಿದ್ದಾರಂತೆ. ಹೀಗಾಗಿ ಜೆಪಿನಗರ ಠಾಣೆಗೆ ದೂರು ನೀಡಲು ಉದ್ಯಮಿ ಸೋನು ಲಂಬಾಣಿ ನಿರ್ಧಾರ ಮಾಡಿದ್ದಾರೆ. RR ನಗರದ ಐಶ್ವರ್ಯಗೌಡ, ಪತಿ ಹರೀಶ್ 5.5 ಕೋಟಿ ವಂಚಿಸಿದ್ದಾರೆ, ನನ್ನ ಬಳಿ ಎಲ್ಲಾ ಟ್ರಾನ್ಸಾಕ್ಷನ್ ದಾಖಲೆಗಳು ಇವೆ ಎಂದು ದಾಖಲೆಗಳ ಸಮೇತ ಉದ್ಯಮಿ ಸೋನುಲಂಬಾಣಿ ದೂರು ನೀಡಲಿದ್ದಾರೆ.
ಇದನ್ನೂ ಓದಿ : ಕಿರಣ್ ರಾಜ್ ನಟನೆಯ “ಶೇರ್” ಟೀಸರ್ ರಿಲೀಸ್ – ಖಡಕ್ ವಿಲನ್ ಆಗಿ ಎಂಟ್ರಿ ಕೊಟ್ಟ ಕ್ರಿಸ್..!