ಬೆಂಗಳೂರು : ಬೆಂಗಳೂರಿನ ಜೀವನ್ ಭೀಮಾನಗರದ 9ನೇ ಕ್ರಾಸ್ನಲ್ಲಿ ರಾತ್ರೋರಾತ್ರಿ ಕಟ್ಟಡದ ಬೃಹತ್ ಸಾರ್ವೆ ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಈ ವೇಳೆ ಆ ಸ್ಥಳದಲ್ಲಿ ಜನ ಸಂಚಾರ ಇಲ್ಲದೇ ಇದ್ದಿದ್ದರಂದ ನಡೆಯಬೇಕಿದ್ದ ಭಾರೀ ದುರಂತವೊಂದು ತಪ್ಪಿದೆ.
ಇದ್ದಕ್ಕಿದ್ದಂತೆ ನಿರ್ಮಾಣ ಹಂತದ 4 ಅಂತಸ್ತುಗಳ ಕಟ್ಟಡದ ಬೃಹತ್ ಸಾರ್ವೆ ಕುಸಿತದಿಂದಾಗಿ ಸ್ಥಳದಲ್ಲಿದ್ದ ಕಾರು ಜಖಂಗೊಂಡಿದೆ. ಇನ್ನು ವಿಷಯ ಗೊತ್ತಾಗುತ್ತಿದ್ದತಂತೆ ದುರಂಹಕಾರಿ ಕಟ್ಟಡದ ಮಾಲೀಕ ತಕ್ಷಣಕ್ಕೆ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ದಾನೆ. ಕೆಲಸಗಾರರನ್ನು ಕರೆಯಿಸಿ ಸಾರ್ವೆ ಅವಶೇಷಗಳು ತೆರವು ಮಾಡಿಸಿದ್ದು, ಕಾರು ಬಂದು ಡಿಕ್ಕಿ ಹೊಡೆದ ಪರಿಣಾಮ ಕಟ್ಟಡದ ಸಾರ್ವೆ ಬಿದ್ದಿದೆ ಎಂದು ಕಥೆ ಸೃಷ್ಟಿಸಿದ್ದಾನೆ. ಯಾರೇ ಕೇಳಿದ್ರೂ ಹೀಗೆಯೇ ಹೇಳುವಂತೆ ಅಲ್ಲಿದ್ದವರಿಗೆ ಆರ್ಡರ್ ಮಾಡಿದ್ದಾನೆ.
ಇನ್ನು ಪ್ರಕರಣ ಮುಚ್ಚಿ ಹಾಕಲು ಪ್ರಭಾವಿ ರಾಜಕಾರಣಿ ಹೆಸರನ್ನೂ ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರೊಂದಿಗೂ ಕಟ್ಟಡದ ಮಾಲೀಕ ಅಡ್ಜೆಸ್ಟ್ಮೆಂಟ್ ಮಾಡಿಕೊಂಡಿದ್ದು, ಅಕ್ರಮ ಮುಚ್ಚಿ ಹಾಕಲು ಬಿಬಿಎಂಪಿ ಅಧಿಕಾರಿಗಳಿಂದಲೂ ವ್ಯವಸ್ಥಿತ ಹುನ್ನಾರ ನಡೆದಿದೆ ಎಂದು ತಿಳಿದುಬಂದಿದೆ.
ದುರಂತ ಮುಚ್ಚಿ ಹಾಕಲು ಪೊಲೀಸ್ ಇಲಾಖೆಯೇ ಕಟ್ಟಡದ ಮಾಲೀಕನಿಗೆ ಸಾಥ್ ಕೊಟ್ಟಿದ್ದು, ಕಾಟಾಚಾರಕ್ಕೆ ಸ್ಪಾಟ್ ವಿಸಿಟ್ ಮಾಡಿದ್ದಾರೆ. ಸ್ಥಳದಲ್ಲಿ ಯಾರು ಇರಬಾರದೆಂದು ಎಲ್ಲರನ್ನು ಪೊಲೀಸರು ಕಳುಹಿಸಿದ್ದಾರೆ. ಪೊಲೀಸರ ಈ ವರ್ತನೆ ಬಗ್ಗೆಯೂ ನಾನಾ ಗುಮಾನಿ ಹರಿದಾಡುತ್ತಿದೆ. ಕಟ್ಟಡ ಮಾಲೀಕನ ಜತೆ ಅಡ್ಜೆಸ್ಟ್ಮೆಂಟ್ ಮಾಡಿಕೊಂಡು ಪೊಲೀಸರು ಸುಮ್ಮನಾದ್ರಾ?
ಕೇಸ್ ಜಡಿದು ಬಂಧಿಸೋದನ್ನು ಬಿಟ್ಟು ಕಟ್ಟಡದ ಮಾಲೀಕನ ಕೈ ಕೈ ಮಿಲಾಯಿಸಿ ತೆಪ್ಪಗಾದ್ರಾ ಎಂಬ ಅನುಮಾನ ಶುರುವಾಗಿದೆ.
ಇನ್ನು ಬಿಬಿಎಂಪಿ ಅಧಿಕಾರಿಗಳೂ ಕೂಡ ಕಟ್ಟಡ ಮಾಲೀಕನಿಗೆ ಸಾಥ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಕರಣ ನಡೆದೇ ಇಲ್ಲ. ತಮ್ಮ ಗಮನಕ್ಕೆ ಬಂದೇ ಇಲ್ಲ ಎನ್ನುವಂತೆ ಸೀನ್ ಕ್ರಿಯೇಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದುರಂತದ ಮಾಹಿತಿ ಇದ್ದರೂ ಕೇಸಿಲ್ಲ. FIR ಇಲ್ಲ. ಅರೆಸ್ಟಂತೂ ಇಲ್ಲವೇ ಇಲ್ಲ. ಕಟ್ಟಡದ ಪೂರ್ವಾಪರವನ್ನು ವಿಚಾರಿಸಿಲ್ಲ. ಕಟ್ಟಡ ಅಧೀಕೃತವೋ, ಅನಧೀಕೃತವೋ ಎಂದು ಪರೀಕ್ಷಿಸಿಲ್ಲ. ಹೀಗಾಗಿ ಪ್ರಕರಣ ಮುಚ್ಚಿ ಹಾಕೊಕೇ ಬಿಬಿಎಂಪಿ ಅಧಿಕಾರಿಗಳೂ ಕಟ್ಟಡ ಮಾಲೀಕನಿಂದ ಕಿಕ್ ಬ್ಯಾಕ್ ಪಡೆದ್ರಾ ಎಂಬ ಅನುಮಾನ ಶುರುವಾಗಿದೆ.
ಪ್ರಕರಣ ಮುಚ್ಚಿ ಹಾಕಲು ಪ್ರಭಾವಿ ರಾಜಕಾರಣಿ ಸಂಸದರೊಬ್ಬರ ಹೆಸರನ್ನು ಮದ್ಯೆ ತಪ್ಪಿಸಿಕೊಳ್ಳಲು ಕಟ್ಟಡದ ಮಾಲೀಕ ಯತ್ನಿಸಿದ್ದಾನೆ. ಸಂಸದರ ಕೃಪೆ ಇರುವವರೆಗು ಏನೂ ಆಗೊಲ್ಲ ಎಂದು ದುರಂಹಕಾರದಿಂದ ಫೋಸ್ ಕೊಟ್ಟಿದ್ದಾನೆ. ಹೀಗಾಗಿ ಸ್ಥಳಿಯರು ಕಟ್ಟಡದ ಮಾಲೀಕನ ಮೇಲೆ ಭಾರೀ ಆಕ್ರೋಶ ಹೊರಹಾಕಿದ್ದು, ಹತ್ತಿರದ ಸಿಸಿಟಿವಿ ಪರಿಶೀಲಿಸಿದ್ರೆ ಎಲ್ಲಾ ಅಸಲಿಯತ್ತು ಬಯಲಾಗಲಿದೆ. ಬಿಬಿಎಂಪಿ ಅಧಿಕಾರಿಗಳೇ ನೀವ್ ಏನ್ ಮಾಡ್ತಿದ್ದೀರಾ? ಕಟ್ಟಡದ ಮಾಲೀಕನ ವಿರುದ್ದ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ದೆಹಲಿ ವಿಧಾನಸಭೆ ಚುನಾವಣೆಗೆ ಇಂದೇ ದಿನಾಂಕ ಘೋಷಣೆ..!