Download Our App

Follow us

Home » ರಾಜ್ಯ » ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024 ಪ್ರಕಟ – ಇಲ್ಲಿದೆ ಪೂರ್ಣ ಪಟ್ಟಿ..!

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024 ಪ್ರಕಟ – ಇಲ್ಲಿದೆ ಪೂರ್ಣ ಪಟ್ಟಿ..!

ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2024 ಘೋಷಣೆಯಾಗಿದೆ. ನವೆಂಬರ್ 1ರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ. 69 ಸಾಧಕರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ 50 ಸದಸ್ಯರಿರುವ ಆಯ್ಕೆ ಸಲಹಾ ಸಮಿತಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿತ್ತು. ಒಟ್ಟು 1575 ಭೌತಿಕ ಅರ್ಜಿಗಳು ಬಂದಿದ್ದವು. ಇದಲ್ಲದೇ ಸೇವಾ ಸಿಂಧೂ ಮೂಲಕ 1309 ಜನರಿಗಾಗಿ 7,438 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಇವುಗಳನ್ನೆಲ್ಲಾ ಕೂಲಂಕುಷವಾಗಿ ಪರಿಶೀಲನೆ ಮಾಡಿ ಅರ್ಹರ ಆಯ್ಕೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಜಾನಪದ ಕ್ಷೇತ್ರ

  • ಇಮಾಮಸಾಬ ಎಂ. ವಲ್ಲೆಪನವರ
  • ಅಶ್ವ ರಾಮಣ್ಣ
  • ಕುಮಾರಯ್ಯ
  • ವೀರಭದ್ರಯ್ಯ
  • ನರಸಿಂಹಲು (ಅಂಧ ಕಲಾವಿದ)
  • ಬಸವರಾಜ ಸಂಗಪ್ಪ ಹಾರಿವಾಳ
  • ಎಸ್.ಜಿ. ಲಕ್ಷ್ಮೀದೇವಮ್ಮ
  • ಪಿಚ್ಚಳ್ಳಿ ಶ್ರೀನಿವಾಸ
  • ಲೋಕಯ್ಯ ಶೇರ (ಭೂತಾರಾಧನೆ)
ಚಲನಚಿತ್ರ-ಕಿರುತೆರೆ
  • ಹೇಮಾ ಚೌಧರಿ
  • ಎಂಎಸ್ ನರಸಿಂಹಮೂರ್ತಿ
ಸಂಗೀತ ಕ್ಷೇತ್ರ
  • ಪಿ ರಾಜಗೋಪಾಲ
  • ಎಎನ್​ ಸದಾಶಿವಪ್ಪ

ನೃತ್ಯ: ವಿದುಷಿ ಲಲಿತಾ ರಾವ್,

ಆಡಳಿ ಕ್ಷೇತ್ರ: ಎಸ್​ವಿ ರಂಗನಾಥ್( ಮಾಜಿ ಮುಖ್ಯ ಕಾರ್ಯದರ್ಶಿ)

ವೈದ್ಯಕೀಯ ಕ್ಷೇತ್ರ: ಡಾ ಜೆಬಿ ಬಿಡನಹಾಳ,  ಡಾ ಮೈಸೂರು ಸತ್ಯಾನಾರಾಯಣ. ಡಾ ಲಕ್ಷ್ಮಣ ಹನುಮಂತಪ್ಪ ಬಿದರಿ

ಸಮಾಜ ಸೇವೆ: ವೀರಸಂಗಯ್ಯ,  ಹೀರಾಚಂದ್ ವಾಗ್ಮರೆ, ಮಲ್ಲಮ್ಮ ಸೂಲಗಿತ್ತಿ, ದಿಲೀಪ್ ಕುಮಾರ್.

ಸಂಕೀರ್ಣ ಕ್ಷೇತ್ರ: ಹುಲಿಕಲ್ ನಟರಾಜ್, ಹೆಚ್​ಆರ್​ ಸ್ವಾಮಿ, ಪ್ರಹ್ಲಾದ ರಾವ್, ಕೆ ಅಜಿತ್ ಕುಮಾರ್ ರೈ, ಇರ್ಫಾನ್ ರಜಾಕ್, ವಿರೂಪಾಕ್ಷಪ್ಪ ರಾಮಚಂದ್ರಪ್ಪ ಹಾವನೂರು,

ಹೊರದೇಶ-ಹೊರನಾಡು: ಕನ್ನಯ್ಯ ನಾಯ್ಡು, ಡಾ. ತುಂಬೆ ಮೊಹಿಯುದ್ದೀನ್, ಚಂದ್ರಶೇಖರ್ ನಾಯಕ್ ಪರಿಸರ: ಆಲ್ಮಿತ್ರಾ ಪಟೇಲ್

ಕೃಷಿ: ಶಿವನಾಪುರ ರಮೇಶ, ಪುಟ್ಟೀರಮ್ಮ

ಮಾಧ್ಯಮ: ಎನ್.ಎಸ್. ಶಂಕರ್, ಸನತ್ ಕುಮಾರ್ ಬೆಳಗಲಿ, ಎ.ಜಿ. ಕಾರಟಗಿ, ರಾಮಕೃಷ್ಣ ಬಡಶೇಶಿ

ಸಾಹಿತ್ಯ ಕ್ಷೇತ್ರ: ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್

ಶಿಲ್ಪಕಲೆ ಕ್ಷೇತ್ರ: ಶಿಲ್ಪಿ ಅರುಣ್ ಯೋಗಿರಾಜ್ (ಅಯೋಧ್ಯಾ ಬಾಲರಾಮನ ಶಿಲ್ಪಿ)

ವಿಜ್ಞಾನ-ತಂತ್ರಜ್ಞಾನ: ಪ್ರೊ. ಟಿ.ವಿ. ರಾಮಚಂದ್ರ, ಸುಬ್ಬಯ್ಯ ಅರುಣನ್ ಸಹಕಾರ: ವಿರೂಪಾಕ್ಷಪ್ಪ ನೇಕಾರ ಬಯಲಾಟ: ಸಿದ್ಧಪ್ಪ ಕರಿಯಪ್ಪ(ಅಂಧ ಕಲಾವಿದ), ನಾರಾಯಣಪ್ಪ ಶಿಳ್ಳೇಕ್ಯಾತ

ಯಕ್ಷಗಾನ : ಕೇಶವ್ ಹೆಗಡೆ, ಸೀತಾರಾಮ ತೋಳ್ಪಾಡಿ ರಂಗಭೂಮಿ: ಸರಸ್ವತಿ ಜುಲೈಕ ಬೇಗಂ, ಓಬಳೇಶ್ ಹೆಚ್.ಬಿ., ಭಾಗ್ಯಶ್ರೀ ರವಿ, ಡಿ. ರಾಮು, ಜನಾರ್ಧನ್ ಹೆಚ್‌., ಹನುಮಾನದಾಸ ವ. ಪವಾರ.

ಸಾಹಿತ್ಯ: ಬಿ.ಟಿ. ಲಿಲಿತಾ ನಾಯಕ್ , ಅಲ್ಲಮಪ್ರಭು ಬೆಟ್ಟದೂರು. ಡಾ. ಎಂ. ವೀರಪ್ಪ ಮೊಯಿಲಿ. ಹನುಮಂತರಾವ್ ದೊಡ್ಡಮನಿ, ಡಾ. ಬಾಳಾಸಾಹೇಬ್ ಲೋಕಾಪುರ, ಬೈರಮಂಗಲ ರಾಮೇಗೌಡ. ಡಾ. ಪ್ರಶಾಂತ್ ಮಾಡ್ತಾ

ಶಿಕ್ಷಣ: ಡಾ. ವಿ. ಕಮಲಮ್ಮ, ಡಾ. ರಾಜೇಂದ್ರ ಶೆಟ್ಟಿ., ಡಾ. ಪದ್ಮಾ ಶೇಖರ್

ಕ್ರೀಡೆ: ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್, ಗೌತಮ್ ವರ್ಮ, ಆರ್‌. ಉಮಾದೇವಿ

ನ್ಯಾಯಾಂಗ ಕ್ಷೇತ್ರ  : ಎಸ್ ಬಾಲನ್

ಚಿತ್ರಕಲೆ: ಪ್ರಭು ಹರಸೂರು

ಕರಕುಶಲ: ಚಂದ್ರಶೇಖರ ಸಿರಿವಂತೆ

ಇದನ್ನೂ ಓದಿ : ರಾಜ್ಯೋತ್ಸವ ಪ್ರಶಸ್ತಿಗೆ ಘನತೆ ತಂದುಕೊಟ್ಟ ಹಿರಿಯ ವಕೀಲ ಎಸ್. ಬಾಲನ್..!

Leave a Comment

DG Ad

RELATED LATEST NEWS

Top Headlines

ಬಿಗ್​ಬಾಸ್ ಮನೆಯೊಳಗೆ ಜಗಳ ಆಗ್ದೇ ಇರಲಿ – ದೇವರಲ್ಲಿ ವರ ಕೇಳಿದ ಹನುಮಂತ..!

ಬಿಗ್ ಬಾಸ್‌ ಮನೆಗೆ ಕಾಲಿಡುತ್ತಿದ್ದಂತೆಯೇ ಹನುಮಂತಗೆ ಕ್ಯಾಪ್ಟನ್ ಪಟ್ಟ ನೀಡಲಾಗಿತ್ತು. ಆರಂಭದಿಂದಲೂ ತನ್ನ ಮುಗ್ಧತೆಯಿಂದಲೇ ಎಲ್ಲರ ಗಮನಸೆಳೆದಿರುವ ಹನುಮಂತಗೆ ಇದೀಗ ಎರಡನೇ ಬಾರಿಗೆ ಕ್ಯಾಪ್ಟನ್ ಪಟ್ಟ ಒಲಿದುಬಂದಿದೆ.

Live Cricket

Add Your Heading Text Here