Download Our App

Follow us

Home » ಮೆಟ್ರೋ » ಆನೇಕಲ್ : ಹೆತ್ತ ತಾಯಿಯನ್ನೇ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಮಗ..!

ಆನೇಕಲ್ : ಹೆತ್ತ ತಾಯಿಯನ್ನೇ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಮಗ..!

ಆನೇಕಲ್ : ಮಗನೇ ಹೆತ್ತ ತಾಯಿಯನ್ನು ಕೊಲೆ ಮಾಡಿ, ತಾನೂ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಸೂರ್ಯಸಿಟಿ ಸಮೀಪದ ಹಳೆ ಚಂದಾಪುರ ಬಳಿ ನಡೆದಿದೆ. 41 ವರ್ಷದ ಮಹಾಲಕ್ಷ್ಮಿ ಕೊಲೆಯಾದ ಮಹಿಳೆ. 21 ವರ್ಷದ ರಮೇಶ್ ತಾಯಿಯನ್ನ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಮಗ.

ಚಿತ್ರದುರ್ಗ ಮೂಲದ ಚಳ್ಳಕೆರೆಯ ಚಿಕ್ಕಹಳ್ಳಿ ಕುಟುಂಬ ಕಳೆದ ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬಂದಿದ್ರು. ಕೂಲಿ ಕೆಲಸ ಮಾಡಿಕೊಂಡು ಕುಟುಂಬ ಜೀವನ ಸಾಗಿಸುತ್ತಿತ್ತು. ಮಗ ಕುಡಿದು ಬಂದು ಆಗಾಗ ಗಲಾಟೆ ಮಾಡುತ್ತಿದ್ದ. ನಿನ್ನೆ ರಾತ್ರಿಯೂ ಕುಡಿದು ಬಂದು ತಾಯಿ ಮಹಾಲಕ್ಷ್ಮಿ ಜೊತೆ ಜಗಳವಾಡಿದ್ದಾನೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಮಗ ಮೊಬೈಲ್ ಚಾರ್ಜಿಂಗ್ ವೈರ್​ನಿಂದ ತಾಯಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಘಟನಾ ಸ್ಥಳಕ್ಕೆ ಸೂರ್ಯನಗರ ಪೊಲೀಸರ ಭೇಟಿ ನೀಡಿದ್ದಾರೆ. ಮೃತ ದೇಹಗಳನ್ನ ಅತ್ತಿಬೆಲೆ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ : ಧರ್ಮಸ್ಥಳದಲ್ಲೂ ತಿರುಪತಿ ಮಾದರಿ ಕ್ಯೂ ಸಿಸ್ಟಂ..!

Leave a Comment

DG Ad

RELATED LATEST NEWS

Top Headlines

ಗ್ರ್ಯಾಂಡ್​ ಫಿನಾಲೆ ಹಂತಕ್ಕೆ ತಲುಪಿದ ದೊಡ್ಮನೆ ಆಟ.. ಉಗ್ರಂ ಮಂಜು-ರಜತ್ ನಡುವೆ ಮತ್ತೆ ಕಿರಿಕ್..!

ಕನ್ನಡದ ಜನಪ್ರಿಯ​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 101ನೇ ದಿನಕ್ಕೆ ಕಾಲಿಟ್ಟಿದೆ. ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಇನ್ನೂ ವಾರಗಳು ಬಾಕಿ ಉಳಿದಿವೆ. ಸ್ಪರ್ಧಿಗಳಿಗೆ

Live Cricket

Add Your Heading Text Here