ಕನ್ನಡ ಜನಪ್ರಿಯ ನಿರೂಪಕಿ ಅನುಶ್ರೀ ಅವರಿಗೆ ಹೋದಲ್ಲಿ ಬಂದಲ್ಲಿ, ಮೊದಲು ಕೇಳುವ ಪ್ರಶ್ನೆ, ನಿಮ್ಮ ಮದುವೆ ಯಾವಾಗ ಅಂತ. ಆದರೆ ಇದೀಗ ಅನುಶ್ರೀ ಅವರೇ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು, ಕೊನೆಗೂ ಕರಾವಳಿ ಚೆಲುವೆ ಮದುವೆಯಾಗಲು ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಮಹಾನಟಿ ವೇದಿಕೆಯಲ್ಲಿ ನಾನು ಈ ವರ್ಷ ಪಕ್ಕಾ ಮದುವೆ ಆಗ್ತೀನಿ ಅಂತ ಅನುಶ್ರೀ ಹೇಳಿದ್ದರು. ಈ ಬೆನ್ನಲ್ಲೇ ತಮ್ಮದೇ ಯೂಟ್ಯೂಬ್ ಚಾನೆಲ್ನಲ್ಲಿ ಅನುಶ್ರೀ ಅವರು ಮದುವೆ ಫಿಕ್ಸ್ ಆಗಿರುವ ಬಗ್ಗೆ ಮಾತನಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನಾ, ಸೂರಜ್, ಜಗ್ಗ ಹಾಗೂ ಗಿಲ್ಲಿ ಜೊತೆ ಚಾಟ್ ಶೋ ನಡೆಸಿಕೊಟ್ಟಿದ್ದರು. ಈ ವೇಳೆ ಮದುವೆ ಟಾಪಿಕ್ ಬಂದಿತ್ತು.
ಸೂರಜ್ ಅನುಶ್ರೀ ಅವರು ಫೆಬ್ರವರಿಯಲ್ಲಿ ಮದುವೆ ಆಗ್ತಾರೆ ಅಂತ ಕಾಲ್ ಎಳಿತಾರೆ. ಆಗ ಅನುಶ್ರೀ ಅವರು ಇಲ್ಲ ಕಣ್ರೋ ನಾನು ಅಪ್ಪು ಫ್ಯಾನ್ ಆಗಿರೋದ್ರಿಂದ ಮಾರ್ಚ್ನಲ್ಲಿ ಮದುವೆ ಆಗಬಹುದು ಅಂತಾರೆ. ಹೀಗಾಗಿ ಎಲ್ಲಾ ಕಡೆ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಈ ಮಾತುಕತೆ ತಮಾಷೆಗೆ ನಡೆಯಿತೇ? ಅಥವಾ ನಿಜವೇ ಎನ್ನುವುದು ತಿಳಿದಿಲ್ಲ. ಆದರೂ ಅನುಶ್ರೀ ಮದುವೆ ವಿಚಾರವಂತೂ ಆಗಾಗ ಸುದ್ದಿಯಾಗುತ್ತಲೇ ಇದೆ. ಈ ಬಾರಿಯೂ ಸುದ್ದಿಯಾಗಿದೆ. ಹುಡುಗ ಯಾರು ಅನ್ನೋದು ಇದೀಗ ಅನುಶ್ರೀ ಅಭಿಮಾನಿಗಳಿಗೆ ತಲೆಕೆಡಿಸಿದೆ.
ಇದನ್ನೂ ಓದಿ : 5 ಭಯಾನಕ ಹಾರರ್ ಸ್ಟೋರಿ.. ಜಿಯೋಸಿನೆಮಾ, ಹಾಟ್ಸ್ಟಾರ್, ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್ನಲ್ಲಿ ಲಭ್ಯ..!