ಹೈದರಾಬಾದ್ : ಪುಷ್ಪ 2 ಚಿತ್ರದ ಪ್ರದರ್ಶನ ವೇಳೆ ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ನಿವಾಸದ ಬಳಿ ಹೈಡ್ರಾಮಾ ನಡೆದಿದ್ದು, ಕೆಲವು ಅಪರಿಚಿತ ವ್ಯಕ್ತಿಗಳು ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಕಾಲ್ತುಳಿತ ಪ್ರಕರಣ ಸಂಬಂಧ ಟಾಲಿವುಡ್ ನಟ ಅಲ್ಲು ಅರ್ಜುನ್ ಮಧ್ಯಂತರ ಜಾಮೀನಿನ ಮೂಲಕ ಹೊರಬಂದಿದ್ರು. ಆದರೆ ಈ ಪ್ರಕರಣವನ್ನು ಖಂಡಿಸಿ, ಒಯು ಜಾಕ್ ಮುಖಂಡರು ಮನೆಗೆ ತೆರಳಿ ಪ್ರತಿಭಟನೆ ನಡೆಸಿ, ಅಲ್ಲಿದ್ದ ಹೂವಿನ ಕುಂಡಗಳನ್ನು ನಾಶ ಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಘೋಷಣೆಗಳನ್ನು ಕೂಗುತ್ತಲೇ ಅವರ ಮನೆಯ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ.
ಇದನ್ನೂ ಓದಿ : ನೆಲಮಂಗಲದಲ್ಲಿ ವೊಲ್ವೊ ಕಾರು ಅಪಘಾತ ಪ್ರಕರಣ – ಚಂದ್ರಮ್ ಕುಟುಂಬ ತೆರಳುವ ಕೊನೆ ಕ್ಷಣದ ಸಿಸಿಟಿವಿ ದೃಶ್ಯ ಬಿಟಿವಿಗೆ ಲಭ್ಯ..!
Post Views: 23