ಬೆಂಗಳೂರು : ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ ಮಹಾ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. PWD ಇಲಾಖೆಯಲ್ಲಿ ನಡೀತಾ 4,400 ಕೋಟಿ ಭಾರೀ ಹಗರಣ? 4,400 ಕೋಟಿ ರೂ. ಮೊತ್ತದ ಟೆಂಡರ್ ರಾತ್ರೋರಾತ್ರಿ ಓಪನ್ ಆಗಿದೆ. ಮಿಡ್ನೈಟ್ ಪ್ರಾಜೆಕ್ಟ್ನಲ್ಲಿ 2 ಅಧಿಕಾರಿಗಳು ಕಿಕ್ಬ್ಯಾಕ್ ಪಡೆದಿರೋ ಶಂಕೆ ವ್ಯಕ್ತವಾಗಿದೆ. ರಾತ್ರೋರಾತ್ರಿ ಟೆಂಡರ್ ಓಪನ್ ಮಾಡಿದ ಆ ಅಧಿಕಾರಿಗಳು ಯಾರು?
ಟೆಂಡರ್ ಫಿಕ್ಸಿಂಗ್ ಮಾಡಿಕೊಂಡ ಆ ಸ್ಟಾರ್ ಗುತ್ತಿಗೆದಾರರು ಯಾರು? PWDಯ 4,400 ಕೋಟಿ ಹಗರಣದ ಮಹಾಸ್ಟೋರಿಯನ್ನು ಬಿಟಿವಿ ಸ್ಫೋಟಿಸಿದೆ.
2024ರ ಮಾರ್ಚ್ನಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಟೆಂಡರ್ ಕರೆದಿತ್ತು. 204 ತಾಲ್ಲೂಕಿನ ಹೆದ್ದಾರಿ ಅಭಿವೃದ್ಧಿ, 314 ಕಾಮಗಾರಿಗಳಿಗೆ ಟೆಂಡರ್ ಅನುಮೋದನೆಯಾಗಿತ್ತು. ಒಟ್ಟು 202 ಪ್ಯಾಕೇಜ್ಗಳ ಮೂಲಕ PWD ಟೆಂಡರ್ ಆಹ್ವಾನಿಸಿತ್ತು. ಆದರೆ ವಿಧಾನಸಭಾ ಕ್ಷೇತ್ರವಾರು ಕಾಮಗಾರಿಯಾದ್ರೂ ಕೆಲವರಿಗಷ್ಟೇ ಅವಕಾಶ ನೀಡಿ, ತಮಗೆ ಬೇಕಾದ ಗುತ್ತಿಗೆದಾರರನ್ನು ಸೆಲೆಕ್ಟ್ ಮಾಡಿಕೊಂಡಿರೋ ಆರೋಪ ಕೇಳಿಬಂದಿದೆ.
ಕೆಲವು ಕ್ಷೇತ್ರಗಳಲ್ಲಿ ಅನರ್ಹರಿಗೂ ಟೆಂಡರ್ನಲ್ಲಿ ಪಾಲ್ಗೊಳ್ಳುವ ಅವಕಾಶವಿತ್ತು, ಶಾಸಕರ ಬಂಧು-ಬಳಗಕ್ಕೆ ಟೆಂಡರ್ ನೀಡಲೂ ಅಧಿಕಾರಿಗಳು ಪ್ಲಾನ್ ಮಾಡಿದ್ದರು. 85 ವಿವಿಧ ಕಾಮಗಾರಿಗಳ ಟೆಂಡರ್ ಅನ್ನು ಇಬ್ಬರಿಗೆ ಮಾತ್ರ ಕೊಟ್ಟಿದ್ದಾರಂತೆ. ಅಧಿಕಾರಿಗಳು ರಾತ್ರೋರಾತ್ರಿ ಟೆಂಡರ್ ಓಪನ್ ಮಾಡಿ ಎಲ್ಲಾ ಮುಗಿಸಿದ್ದು, ತಾಂತ್ರಿಕ, ಹಣಕಾಸು ಬಿಡ್ ಎಲ್ಲಾ ಮುಗಿಸಿ ವರ್ಕ್ ಆರ್ಡರ್ ಕೊಡಲು ತಯಾರಿ ನಡೆಸಿದ್ದಾರೆ. ಕೇಂದ್ರದ SC/ST ನಿಯಮವನ್ನೂ ಉಲ್ಲಂಘಿಸಿ ಟೆಂಡರ್ ನೀಡ್ತಿರೋ ಆರೋಪ ಕೂಡ ಕೇಳಿಬಂದಿದೆ. ಇದೀಗ ಲೋಕೋಪಯೋಗಿ ಇಲಾಖೆ ವಿರುದ್ಧ ಕಾಂಟ್ರಾಕ್ಟರ್ಗಳು ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಟಿವಿ ಬಳಿ ಟೆಂಡರ್ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಪ್ರತಿಭಟನೆ ವೇಳೆ ಕುಸಿದುಬಿದ್ದು ಮಾಜಿ MLC ಭಾನುಪ್ರಕಾಶ್ ಸಾ*ವು..!