Download Our App

Follow us

Home » ಸಿನಿಮಾ » ಆಲ್ ಓಕೆ ಹೇಳಿದ ‘ಮರ್ಯಾದೆ ಪ್ರಶ್ನೆ’ಚಿತ್ರ – ಸಕ್ಕತ್ ಸ್ಟುಡಿಯೋದ ಮತ್ತೊಂದು ಪ್ರಯತ್ನ..!

ಆಲ್ ಓಕೆ ಹೇಳಿದ ‘ಮರ್ಯಾದೆ ಪ್ರಶ್ನೆ’ಚಿತ್ರ – ಸಕ್ಕತ್ ಸ್ಟುಡಿಯೋದ ಮತ್ತೊಂದು ಪ್ರಯತ್ನ..!

ಸ್ಯಾಂಡಲ್ವುಡ್ನಲ್ಲಿ ಇತ್ತೀಚೆಗೆ ಸಖತ್ ಸುದ್ದಿ ಆಗ್ತಿರೋದು ‘ಮರ್ಯಾದೆ ಪ್ರಶ್ನೆ’. ಹೌದು ‘ಸಕ್ಕತ್ ಸ್ಟುಡಿಯೋ’ ಮೂಲಕ ಆರ್ ಜೆ ಪ್ರದೀಪ್ ಅವರು ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾದ ಹೆಸರೇ ” ಮರ್ಯಾದೆ ಪ್ರಶ್ನೆ “. ಸಕ್ಕತ್ ಕಂಟೆಂಟ್ ಗಳ ಮೂಲಕವೇ ಪ್ರೇಕ್ಷಕರ ಗಮನಸೆಳೆಯುತ್ತಿರುವ ಸಕ್ಕತ್ ಸ್ಟುಡಿಯೋ ನಮ್ಮ ಚಿತ್ರರಂಗದ ಸೆಲಿಬ್ರಿಟಿಸ್ ಅವರವರ ಜೀವನದ ” ಮರ್ಯಾದೆ ಪ್ರಶ್ನೆ ” ಬಗ್ಗೆ ಪೋಸ್ಟ್ ಮಾಡುವ ಮೂಲಕ ಶೀರ್ಷಿಕೆ ಬಿಡುಗಡೆ ಮಾಡಿದ್ದರು.

ಆರ್ ಜೆ ಪ್ರದೀಪ್ ಪ್ರದೀಪ್ ಒಡೆತನದ ಸಕ್ಕತ್ ಸ್ಟುಡಿಯೋ ಬಹಳ ಕ್ರಿಯೇಟಿವ್ ಆಗಿ ಮರ್ಯಾದೆ ಪ್ರಶ್ನೆ ಸಿನಿಮಾವನ್ನು ಪ್ರಮೋಷನ್ ಮಾಡ್ತಿದೆ. RCB ಕಪ್ ಗೆಲ್ಬೇಕು ಅಂತಾ ಕೊಹ್ಲಿ ತಂಡಕ್ಕೆ ಚಿಯರ್ ಹೇಳುವ ಹಾಡು ನಿರ್ಮಿಸಿದ್ದ ಸಕ್ಕತ್ ಸ್ಟುಡಿಯೋ ಈಗ ಆಲ್ ಓಕೆ ಕಡೆಯಿಂದಲೂ ಮರ್ಯಾದೆ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದೆ. ಕನ್ನಡದ ಖ್ಯಾತ ರ್ಯಾಪರ್ ಆಲ್ ಓಕೆ ಮಿಡ್ಡ್ಲ್ ಕ್ಲಾಸ್ ಮಂದಿಯ ಸಡಗರಗಳ ಬಗ್ಗೆ ಬಹಳ ಅರ್ಥಪೂರ್ಣವಾದ ಗೀತೆಯೊಂದನ್ನು ತಯಾರಿಸಿದ್ದು ಸಕ್ಕತ್ ಸ್ಟುಡಿಯೋ ಈ ಹಾಡನ್ನು ನಿರ್ಮಿಸಿದೆ.

ಈ ಹಾಡಿನ ಮೂಲಕ ಕನ್ನಡ ಚಿತ್ರರಂಗದ ಎಲ್ರಿಗೂ “ಒಗ್ಗಟ್ಟಾಗಿ ದುಡಿಯುವ ಬೆಳೆಯುವ ಹಾಗೂ ಸ್ಟಾರ್ ಸಿನಿಮಾಗಳ ಜೊತೆಗೆ ಹೊಸ ಪ್ರಯತ್ನಗಳಿಗೂ ಜನ ಜೈ ಎನ್ನಬೇಕು. ಇದು ಬರೀ ಮರ್ಯಾದೆ ಪ್ರಶ್ನೆ ಅಲ್ಲಾ ನಮ್ಮೆಲ್ಲರ ಉಳಿವಿನ ಪ್ರಶ್ನೆ ” ಎಂಬ ಗಟ್ಟಿ ಕೂಗೊಂದನ್ನು ನೀಡಿದ್ದಾರೆ.

ಮರ್ಯಾದೆ ಪ್ರಶ್ನೆ , ನಿರ್ಮಾಣದ ಜೊತೆಗೆ ಪ್ರದೀಪ್ ಕತೆ ಬರೆದಿದ್ದಾರೆ. ಕ್ರಿಯೆಟಿವ್ ಹೆಡ್ ಕೂಡ ಆಗಿದ್ದಾರೆ. ಈ ಮೂಲಕ ಕನ್ನಡಕ್ಕೆ ಹೊಸದೊಂದು ಕಥೆ ಕೊಡೊಕೆ ರೆಡಿ ಆಗಿದ್ದಾರೆ. ಮರ್ಯಾದೆ ಪ್ರಶ್ನೆ ಚಿತ್ರವನ್ನ ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಮಾಡಿದ್ದರು. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಯಾರೆಲ್ಲ ಇದ್ದಾರೆ ಅನ್ನೋ ಕುತೂಹಲ ಇದೆ. ಕನ್ನಡದ ಅದ್ಭುತ ಕಲಾವಿದರ ದಂಡೇ ಇದರಲ್ಲಿದೆ ಎಂಬ ಮಾಹಿತಿಯಿದೆ . ಅತಿ ಶೀಘ್ರದಲ್ಲೇ ಆ ವಿವರಗಳನ್ನು ಜನರಿಗೆ ನೀಡುವ ತಯಾರಿಯಲ್ಲಿದ್ದಾರೆ . ಸದ್ಯಕ್ ಜೀವನದಲ್ಲಿ ಅಲ್ ಓಕೆ … ಮರ್ಯಾದೆ ಪ್ರಶ್ನೆ ಹಾಡನ್ನು ಎಂಜಾಯ್ ಮಾಡಿ ಶೇರ್ ಮಾಡಿ ಹಾಗು ಕನ್ನಡ ಹುಡುಗರನ್ನು ಬೆಳೆಸುವ.

ಇದನ್ನೂ ಓದಿ : ‘ರಾಬಿನ್‌ಹುಡ್‌’ಗೆ ಶ್ರೀಲೀಲಾ ಲೇಡಿಬಾಸ್ – ಮತ್ತೆ ಒಂದಾಯ್ತು ‘ಎಕ್ಸ್-ಅರ್ಡಿನರಿ ಮ್ಯಾನ್’ ಜೋಡಿ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here