Download Our App

Follow us

Home » ಅಪರಾಧ » 9 ಕೋಟಿ ವಂಚನೆ ಕೇಸ್​ಗೆ ಬಿಗ್​ ಟ್ವಿಸ್ಟ್​.. ಅಜ್ಞಾತ ಸ್ಥಳದಿಂದ ಐಶ್ವರ್ಯಾ ವಿಡಿಯೋ ರಿಲೀಸ್..!

9 ಕೋಟಿ ವಂಚನೆ ಕೇಸ್​ಗೆ ಬಿಗ್​ ಟ್ವಿಸ್ಟ್​.. ಅಜ್ಞಾತ ಸ್ಥಳದಿಂದ ಐಶ್ವರ್ಯಾ ವಿಡಿಯೋ ರಿಲೀಸ್..!

ಬೆಂಗಳೂರು : ಕಳೆದ ಮೂರು ದಿನಗಳ ಹಿಂದೆ ರಾಜ್ಯದಲ್ಲಿ ಸ್ಫೋಟಗೊಂಡ 9 ಕೋಟಿ ವಂಚನೆ ಕೇಸ್​​​ಗೆ ಇದೀಗ ಟ್ವಿಸ್ಟ್​​ ಸಿಕ್ಕಿದೆ. ಐಶ್ವರ್ಯಾ ಗೌಡ ಅಲಿಯಾಸ್​​ ನವ್ಯಶ್ರೀ ವಿಡಿಯೋ ಮಾಡಿ ಬಿಡುವ ಮೂಲಕ ಇಡೀ ಕೇಸ್​​​ಗೆ ಟ್ವಿಸ್ಟ್​​ ಕೊಟ್ಟಿದ್ದಾರೆ. ವನಿತಾಗೆ ಸಂಬಂಧಿಸಿದ ಹಲವು ಸೀಕ್ರೆಟ್​​ಗಳನ್ನ ಬಯಲು ಮಾಡಿದ್ದಾರೆ. ಇಷ್ಟು ದಿನದಿಂದ ಈ ಕೇಸ್​​ ಜಸ್ಟ್​​ ಗೋಲ್ಡ್​ ವಂಚನೆ ಕೇಸ್​​ ಅಂತಲೇ ಎಲ್ರು ಅಂದುಕೊಂಡಿರುವಾಗ, ಇಲ್ಲಾ ಇಲ್ಲಾ ಈ ಕೇಸ್​​ನ ಅಂತರಾಳದಲ್ಲಿ ಮತ್ತೊಂದು ಮಜುಲು ಇದೆ. ಅದರ ಬಗ್ಗೆ ಬಗೆದರೆ, ಇಡೀ ರಾಜ್ಯವೇ ಶೇಕ್​​ ಆಗುವಂತಹ ವಿಷಯಗಳು ಹೊರ ಬರುತ್ತೆ ಅಂತ ಹೇಳಿದ್ದಾರೆ. ಅಷ್ಟಕ್ಕೂ, ಐಶ್ವರ್ಯಾ ಅಲಿಯಾಸ್​​ ನವ್ಯಶ್ರೀ ಹೇಳಿದ್ದೇನು ಅನ್ನೋದು ಇಲ್ಲಿದೆ ನೋಡಿ.

9 ಕೋಟಿ ಗೋಲ್ಡ್​​ ವಂಚನೆ ಕೇಸ್​​​ಗೆ ಸಂಬಂಧಿಸಿದಂತೆ, ಐಶ್ವರ್ಯಾ ಗೌಡ ಅಲಿಯಾಸ್​ ನವ್ಯಶ್ರೀ ಇನ್ನೂ ಅರೆಸ್ಟ್​ ಆಗಿಲ್ಲ. ಐಶ್ವರ್ಯಾ ಗೌಡ ವಿರುದ್ಧ FIR ದಾಖಲಾಗಿದ್ದರು ಕೂಡಾ ಇನ್ನೂ ಐಶ್ವರ್ಯಾ ಅಲಿಯಾಸ್​​ ನವ್ಯಶ್ರೀ ಬಂಧನವಾಗಿಲ್ಲ. ಇದೇ ಸಮಯದಲ್ಲಿ, ಅಜ್ಞಾತ ಸ್ಥಳದಿಂದಲೇ ಐಶ್ವರ್ಯಾ ಒಂದು ವಿಡಿಯೋ ಬೈಟ್​​ ಹರಿದು ಬಿಡುವ ಮೂಲಕ ಇಡೀ ಕೇಸ್​​​ಗೆ ಟ್ವಿಸ್ಟ್​ ಕೊಟ್ಟಿದ್ದಾರೆ.

ಅಸಲಿಗೆ ಕೋಟಿ ಗೋಲ್ಡ್​​ ವಂಚನೆ ಕೇಸ್​​​ ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತಿರುವಂತಹ ಕೇಸ್​​. ಆದ್ರೆ ಈ ಕೇಸ್​​ನ ಒಳಗೆ ಮತ್ತೊಂದು ಆಯಾಮವೇ ಇದೆ ಅಂತ ಹೇಳಿದ್ದಾರೆ. ಹೌದು, ವಿಡಿಯೋದಲ್ಲಿ ವನಿತಾ ವಿರುದ್ಧ ಐಶ್ವರ್ಯಾ ಹರಿಹಾಯ್ದಿದ್ದಾರೆ. ಅಸಲಿಗೆ ದೊಡ್ಡವರ ಸಂಪರ್ಕ ನನಗಿಂತಲೂ ಹೆಚ್ಚಾಗಿ ವನಿತಾಗೇ ಹೆಚ್ಚಿದೆ. ಇನ್ನೆರಡೇ ಎರಡು ದಿನಗಳಲ್ಲಿ ಎಲ್ಲವನ್ನೂ ಸಾಕ್ಷ್ಯಾಧಾರ ಸಮೇತವಾಗಿ ಬಯಲುಮಾಡುತ್ತೇನೆ ಅಂತ ಎಚ್ಚರಿಕೆ ನೀಡಿದ್ದಾಳೆ.

ಪ್ರಭಾವಿಗಳಿಗೆ ಸನ್ಮಾನ ಮಾಡುವಾಗ, ನಾನು ಬೆಳ್ಳಿ ಗದೆ ನೀಡುವ ಫೋಟೋಸ್​​ನ್ನ ಮಾತ್ರ ವನಿತಾ ನೀಡಿದ್ದಾಳೆ. ಆದ್ರೆ, ಅದೇ ಪ್ರಭಾವಿ ರಾಜಕಾರಣಿಗೆ ವನಿತಾ ಕಿರೀಟ ತೊಡಿಸಿದ್ದಾಳೆ. ಆ ಫೋಟೋಗಳು ಎಲ್ಲೂ ಕೂಡಾ ಹೊರಬಂದಿಲ್ಲ. ಆ ಫೋಟೋಗಳೆಲ್ಲಾ ನನ್ನ ಬಳಿ ಇವೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ದೆ, ವನಿತಾಗೆ ಸಂಬಂಧಿಸಿದ ಓಂಕಾರ್ ಕೋಅಪರೇಟಿವ್​ ಸೂಸೈಟಿ ಕರ್ಮಕಾಂಡ ಬಿಚ್ಚಿಡ್ತೀನಿ. ಸೊಸೈಟಿಯಲ್ಲಿ ದೊಡ್ಡ ದೊಡ್ಡವರು, ಮಧ್ಯಮ ವರ್ಗದವರೆಲ್ಲಾ ಬಂದು ಹಣ ಹಾಕಿದ್ದಾರೆ. ಸದ್ಯ ಆ ಬ್ಯಾಂಕ್​​ನಲ್ಲಿ ಎಷ್ಟು ಹಣ ಇದೆ ಅನ್ನೋದನ್ನೊಮ್ಮೆ ನೋಡಿ, ವನಿತಾ ಅದೆಂಥಾ ವಂಚಕಿ ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದ್ದಾಳೆ.

9 ಕೋಟಿ ಗೋಲ್ಡ್​ ವಂಚನೆ ಮಾಡಿರುವ ಬಗ್ಗೆ ವನಿತಾ ನನ್ನ ಮೇಲೆ ಆರೋಪ ಮಾಡಿದ್ದಾರೆ. ಆದ್ರೆ, ಈ ಗೋಲ್ಡ್​ ಯಾರಿಗೆ ಸೇರಿದ್ದು, ಇದಕ್ಕೆ ಬಂಡವಾಳ ಹಾಕಿದ್ಯಾರು? ಅನ್ನೋದನ್ನೂ ಬಯಲು ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ, ಬ್ಲ್ಯಾಕ್​​​ ಮನಿಯನ್ನ ವೈಟ್​ ಮನಿ ಮಾಡಿಕೊಡುವುದಾಗಿ ಹೇಳಿ ರಹಸ್ಯವಾಗಿ ವನಿತಾ ಬ್ಯುಸಿನೆಸ್​​ ಶುರು ಮಾಡಿದ್ದಾಳೆ. ದೊಡ್ಡ ದೊಡ್ಡವರ ಬಳಿ ಹೋಗಿ ಬ್ಲ್ಯಾಕ್​ ಮನಿಯನ್ನ ಗೋಲ್ಡ್​ ಮೇಲೆ ಇನ್ವೆಸ್ಟ್​​ ಮಾಡಿಸುವ ಮೂಲಕ ವೈಟ್​ ಮನಿ ಮಾಡ್ತಿದ್ದಾರೆ.

ಇನ್ನೂ, ಈ ಕೇಸ್​​ನಲ್ಲಿ ನನ್ನನ್ನ ಸಿಲುಕಿಸಲೆಂದೇ ವನಿತಾ ಸೇರಿದಂತೆ ಕೆಲವು ಸುಳ್ಳು ಸಾಕ್ಷ್ಯಾಧಾರಗಳನ್ನ ನೀಡಿದ್ದಾರೆ. ಇದೀಗ ನಾನು ದೊಡ್ಡ ದೊಡ್ಡವರ ಬಂಡವಾಳವನ್ನ ಇನ್ನೆರಡೇ ಎರಡು ದಿನಗಳಲ್ಲಿ ಬಯಲು ಮಾಡುತ್ತೇನೆ ಅಂತ ಐಶ್ವರ್ಯಾ ಗೌಡ ವನಿತಾಗೆ ಚಾಟಿ ಬೀಸಿದ್ದಾಳೆ.

ಇದನ್ನೂ ಓದಿ : MLA ಹೆಚ್​ಟಿ ಮಂಜುಗೆ ಕೊಲೆ ಬೆದರಿಕೆ – JDS ಮುಖಂಡ ಕೆ.ರವಿ ವಿರುದ್ದ ಮಂಡ್ಯ ಎಸ್​ಪಿಗೆ ದೂರು..!

Leave a Comment

DG Ad

RELATED LATEST NEWS

Top Headlines

ಖ್ಯಾತ ನಟಿ ಕಾರು ಆ್ಯಕ್ಸಿಡೆಂಟ್​ – ಓರ್ವ ಸಾವು, ಮತ್ತೋರ್ವ ಸ್ಥಿತಿ ಗಂಭೀರ!

ಮುಂಬೈ: ಮರಾಠಿ ಚಿತ್ರರಂಗದ ಖ್ಯಾತ ನಟಿ ಊರ್ಮಿಲಾ ಕೊಠಾರೆ ಅಲಿಯಾಸ್​ ಊರ್ಮಿಳಾ ಕಾನೇಟ್ಕರ್ ಅವರ ಕಾರು ಹರಿದು ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ

Live Cricket

Add Your Heading Text Here