ಬೆಂಗಳೂರು : ಮಾಜಿ ಸಂಸದ ಡಿಕೆ ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ವರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ಗೆ ಕೋಟ್ಯಾಂತರ ರೂ. ವಂಚಿಸಿದ ಆರೋಪದ ಮೇಲೆ ಐಶ್ವರ್ಯಾ ಗೌಡ ಹಾಗೂ ಅವರ ಪತಿ ಹರೀಶ್ನ್ನು ಅರೆಸ್ಟ್ ಮಾಡಲಾಗಿತ್ತು. ಐಶ್ವರ್ಯಾ ಗೌಡ ಅರೆಸ್ಟ್ ಆಗ್ತಿದ್ದಂತೆ ಒಂದೊಂದೇ ಕೇಸ್ಗಳು ಬಯಲಿಗೆ ಬರುತ್ತಿದ್ದು, ಇದೀಗ ಗೋಲ್ಡ್ ಬ್ಯೂಟಿ ವಿರುದ್ದ ಮತ್ತೊಂದು ಕೇಸ್ ದಾಖಲಾಗಿದೆ.
ಸ್ತ್ರೀರೋಗ ತಜ್ಞೆ ಮಂಜುಳಾ, ಐಶ್ವರ್ಯಾ ವಿರುದ್ಧ RR ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ತಾನು ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಗೋಲ್ಡ್ ಬ್ಯೂಟಿ ಡಾಕ್ಟರ್ಗೂ ವಂಚನೆ ಮಾಡಿದ್ದಾರಂತೆ. ಪ್ರತಿ ತಿಂಗಳು 10% ಲಾಭ ಕೊಡ್ತೀನಿ ಗೋಲ್ಡ್ ಬ್ಯುಸಿನೆಸ್ಗೆ ಇನ್ವೆಸ್ಟ್ ಮಾಡಿ ಎಂದು 2022ರಲ್ಲಿ ವೈದ್ಯೆ ಮಂಜುಳಾಗೆ ಹೇಳಿದ್ದರಂತೆ. ಹಾಗಾಗಿ ಡಾಕ್ಟರ್ ಮಂಜುಳಾ ಅವರು 2 ಕೋಟಿ 52 ಲಕ್ಷ 63 ಸಾವಿರ ಇನ್ವೆಸ್ಟ್ ಮಾಡಿದ್ದರು. ಅಲ್ಲದೆ 2.350 ಕೆಜಿ ಚಿನ್ನ ಪಡೆದು ವಾಪಸ್ ನೀಡಿಲ್ಲ ಎಂದು ದೂರು ನೀಡಿದ್ದಾರೆ.
ಜನವರಿ 1 ರಂದು ಐಶ್ವರ್ಯಾ ಮನೆ ಹತ್ತಿರ ಹೋಗಿದ್ದಾಗ ಮಂಜುಳಾಗೆ ಬೆದರಿಕೆ ಹಾಕಿದ್ದಾರಂತೆ. ಡಿಕೆ ಸುರೇಶ್ ಅವ್ರಿಗೆ ಈ ವಿಚಾರಕ್ಕೆ ಕೋಪ ಬಂದಿದೆ, ಅವ್ರೇನ್ ಮಾಡ್ತಾರೋ ಗೊತ್ತಿಲ್ಲ. ಪೊಲೀಸರು ನಿಮ್ಮನ್ನು ಸಾಕ್ಷಿಗೆ ಕರೆಯಬಹುದು ಆದ್ರೆ ಹೋಗಬೇಡಿ, ಪೊಲೀಸರ ಹತ್ರ ಹೋದ್ರೆ ನಿಮಗೆ ಹಣ ಕೊಡೋದೆ ಇಲ್ಲಾ ಎಂದು ಬೆದರಿಕೆ ಹಾಕಿದ್ದಾರೆ ಎಂದು ಡಾಕ್ಟರ್ ಮಂಜುಳಾ ಈಗ RR ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ : ಪೊಲೀಸ್ ಇಲಾಖೆಗೆ ನಕಲಿ ಜನ್ಮ ದಿನಾಂಕ ನೀಡಿದ್ದ ಕೇಸ್ – PSI ಕಾಶಿಲಿಂಗೇಗೌಡ ಸಸ್ಪೆಂಡ್..!