ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಐಶ್ವರ್ಯಾ ಜೊತೆ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗ್ತಿದ್ದಂತೆ. ಇತ್ತ ನಟಿ ನಿಮ್ರತ್ ಕೌರ್ ಜೊತೆಗೆ ಡೇಟಿಂಗ್ ರೂಮರ್ಸ್ ಕೂಡ ಸಖತ್ ಸದ್ದು ಮಾಡಿತ್ತು. ನಟಿ ನಿಮ್ರತ್ ಕೌರ್ ಡೇಟಿಂಗ್ ಕುರಿತು ಬಚ್ಚನ್ ಫ್ಯಾಮಿಲಿಯಿಂದ ಮೊದಲ ಪ್ರತಿಕ್ರಿಯೆ ಹೊರಬಿದ್ದಿದೆ.
ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯಾ ರೈ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ಆದ್ರೆ ಈ ಬಗ್ಗೆ ಐಶ್ವರ್ಯಾ ಅಥವಾ ಅಭಿಷೇಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಚ್ಚೇದನಕ್ಕೆ ಕಾರಣ ಹುಡುಕುತ್ತಿದ್ದ ವೇಳೆ ಅಭಿಷೇಕ್ ಬಚ್ಚನ್ ಹೆಸರು ನಟಿ ನಿಮ್ರತ್ ಕೌರ್ ಜೊತೆ ತಳುಕು ಹಾಕಿಕೊಂಡಿತು. ಈ ವಿಚಾರವಾಗಿ ಅಭಿಷೇಕ್ ಮತ್ತು ನಿಮ್ರತ್ ಸಂಬಂಧದ ಬಗ್ಗೆ ನೆಟ್ಟಿಗರ ನಾನಾ ಕಮೆಂಟ್ ಮಾಡಿದ್ರು.
ಬಚ್ಚನ್ ಕುಟುಂಬಕ್ಕೆ ಹತ್ತಿರವಿರುವ ವ್ಯಕ್ತಿಯೊಬ್ಬರು ಈ ಬಗ್ಗೆ ವಿಶೇಷ ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ. ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಆ ವ್ಯಕ್ತಿಯು, ಅಭಿಷೇಕ್ ಮತ್ತು ನಿಮ್ರತ್ ಸಂಬಂಧದ ಬಗ್ಗೆ ತೆರೆದುಕೊಂಡಿದ್ದಾರೆ. ಅಭಿಷೇಕ್ ಮತ್ತು ನಿಮ್ರತ್ ಸಂಬಂಧದ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದರು.
ಅಷ್ಟೇ ಅಲ್ಲದೇ ವದಂತಿಗಳ ಬಗ್ಗೆ ವಿವರಿಸುವ ಅಗತ್ಯವಿಲ್ಲ. ಹೀಗಿರುವಾಗ ನಟ ನಿಮ್ರತ್ ಕೌರ್ ಈ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು.
ಅಭಿಷೇಕ್ ಬಚ್ಚನ್ ಬ್ಯುಸಿ ಆಗಿದ್ದಾರೆ. ಖಾಸಗಿತನ ಕಾಪಾಡಿಕೊಳ್ಳುತ್ತಿದ್ದು, ಯಾವುದೇ ರೂಮರ್ಸ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ವದಂತಿಗಳಲ್ಲಿ ಸತ್ಯವಿಲ್ಲ. ಆ ನಟಿ ಏಕೆ ಇದನ್ನು ನಿರಾಕರಿಸಲಿಲ್ಲ ಎಂದು ನಾವು ಆಶ್ಚರ್ಯ ಪಡುತ್ತಿದ್ದೇನೆ. ಈ ಬಗ್ಗೆ ಕ್ರಮಕೈಗೊಳ್ಳಬೇಕಿದೆ ಎಂದು ನಮ್ರಿತ್ ಕೌರ್ ವಿರುದ್ಧ ಬಚ್ಚನ್ ಫ್ಯಾಮಿಲಿ ಆಪ್ತ ಕಿಡಿಕಾರಿದ್ರು.