Download Our App

Follow us

Home » ಸಿನಿಮಾ » ಪ್ಯಾರಿಸ್ ಫ್ಯಾಶನ್ ವೀಕ್​​​ನಲ್ಲಿ ಮಿಂಚಿದ ಐಶ್ವರ್ಯ ರೈ-ಆಲಿಯಾ ಭಟ್ : ಬಾಲಿವುಡ್​​ ನಟಿಯರ ಬ್ಯೂಟಿಗೆ ಅಭಿಮಾನಿಗಳು ಫಿದಾ..!

ಪ್ಯಾರಿಸ್ ಫ್ಯಾಶನ್ ವೀಕ್​​​ನಲ್ಲಿ ಮಿಂಚಿದ ಐಶ್ವರ್ಯ ರೈ-ಆಲಿಯಾ ಭಟ್ : ಬಾಲಿವುಡ್​​ ನಟಿಯರ ಬ್ಯೂಟಿಗೆ ಅಭಿಮಾನಿಗಳು ಫಿದಾ..!

ಪ್ಯಾರಿಸ್ ಫ್ಯಾಶನ್ ವೀಕ್​​ನಲ್ಲಿ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಹಾಗೂ ಹಾಲುಗಲ್ಲದ ಚೆಲುವೆ ಆಲಿಯಾ ಭಟ್​​ ರ್‍ಯಾಂಪ್ ವಾಕ್ ಮಾಡುತ್ತಾ ಅಭಿಮಾನಿಗಳ ಹೃದಯದ ಬಡಿತ ಮತ್ತೊಮ್ಮೆ ಹೆಚ್ಚಿಸಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಆಲಿಯಾ ಭಟ್ ಪ್ಯಾರಿಸ್ ಫ್ಯಾಶನ್ ವೀಕ್​ನಲ್ಲಿ ಭಾಗವಹಿಸಿದ್ದರು. ಐಶ್ವರ್ಯ ರೈ ಅವರು ಹಿಂದೆ ಈ ವೇದಿಕೆಯ ಮೇಲೆ ಅನೇಕ ಬಾರಿ ಹೆಜ್ಜೆ ಹಾಕಿದ್ದಾರೆ.

ದೀರ್ಘಕಾಲದಿಂದಲೂ ಈ ಫ್ಯಾಶನ್ ವೀಕ್​ನ ರಾಯಭಾರಿಯಾಗಿರುವ ಐಶ್ವರ್ಯ ರೈ ಬಚ್ಚನ್ ಸ್ಯಾಟೀನ್ ರೆಡ್​ ಗೌನ್​ನಲ್ಲಿ ಸ್ಟನ್ನಿಂಗ್​ ಆಗಿ ಮಿಂಚುತ್ತಿದ್ದರು. ಗೌನ್​ಗೆ ಹೊಂದುವಂತೆತಮ್ಮ ಕೇಶರಾಶಿಯನ್ನು ಸಡಿಲವಾಗಿ ಬಿಟ್ಟಿದ್ದು, ರೆಡ್​ ಡಾರ್ಕ್​​ ಲಿಪ್​​ಸ್ಟಿಕ್​​​ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡರು. ಆತ್ಮವಿಶ್ವಾಸದಿಂದ ರನ್‌ವೇಯಲ್ಲಿ ಹೆಜ್ಜೆ ಹಾಕುತ್ತ ”ಲಾರಿಯಲ್ ಪ್ಯಾರಿಸ್” ಅನ್ನು ಬಹಳ ಸೊಬಗಿನಿಂದ ಪ್ರತಿನಿಧಿಸಿದರು. ಅಷ್ಟೇ ಅಲ್ಲದೇ ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಭಾವಸೂಚಕ ‘ನಮಸ್ತೆ’ಯೊಂದಿಗೆ ಫ್ರೆಂಚ್ ಪ್ರೇಕ್ಷಕರನ್ನು ಸ್ವಾಗತಿಸಿದ್ದು, ನಟಿಯ ಆ ಕ್ಷಣ ಸ್ಮರಣೀಯವಾಗಿಸಿದೆ.

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಏನೂ ಸರಿಯಿಲ್ಲ. ಇನ್ನೇನು ಇಬ್ಬರೂ ಡಿವೋರ್ಸ್ ಪಡೆಯುತ್ತಾರೆ. ಎಲ್ಲವೂ ಮುಗಿಯಿತು. ಹೀಗೆ ಹಲವು ತಿಂಗಳುಗಳಿಂದಲೂ ಸುದ್ದಿ ಹಬ್ಬುತ್ತಲೇ ಇದೆ. ಆದರೆ, ಈಗ ನೋಡಿದ್ರೆ, ಐಶ್ವರ್ಯ ರೈ ತಮ್ಮ ವೆಡ್ಡಿಂಗ್ ರಿಂಗ್ ಧರಿಸಿಕೊಂಡೇ ಫ್ಯಾಷನ್ ವೀಕ್‌ನಲ್ಲಿ ವಾಕ್ ಮಾಡಿದ್ದಾರೆ.

ಇನ್ನು ಬಾಲಿವುಡ್ ನಟಿ ಆಲಿಯಾ ಭಟ್ ಪ್ಯಾರಿಸ್ ಫ್ಯಾಶನ್ ವೀಕ್​​ನಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದಾರೆ. ಸಿಲ್ವರ್ ಬಣ್ಣದ ಶೋಲ್ಡರ್ ಜಂಪ್​ಸೂಟ್​ನಲ್ಲಿ ಮಿಂಚಿನಂತೆ ವೇದಿಕೆಯ ಮೇಲೆ ನಡುವಿನ ಮೇಲೆ ಕೈಯಿಟ್ಟುಕೊಂಡು ಮಾರ್ಜಾಲ ನಡೆಗೆಯಿಡುತ್ತಾ ಬಂದ ಆಲಿಯಾ, ಎಲ್ಲರ ಕಣ್ಮನ ಸೆಳೆದರು.

ಇದನ್ನೂ ಓದಿ : ನಾನು ಯಾವುದೇ ತನಿಖೆಗೆ ಹೆದರುವುದಿಲ್ಲ- ಹೈಕೋರ್ಟ್​ ತೀರ್ಪಿನ ಬೆನ್ನಲ್ಲೇ ಸಿಎಂ ಸಿದ್ದು ಫಸ್ಟ್​​ ರಿಯಾಕ್ಷನ್​​..!

Leave a Comment

DG Ad

RELATED LATEST NEWS

Top Headlines

ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ರಿಲೀಸ್​ ಡೇಟ್​​ ಅನೌನ್ಸ್..!

ಕಮಲ್ ಹಾಸನ್ ಅಭಿನಯದ ಮತ್ತು ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಚಿತ್ರ ವಿಶ್ವದಾದ್ಯಂತ 2025ರ ಜೂನ್ 5ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬದ

Live Cricket

Add Your Heading Text Here