Download Our App

Follow us

Home » ಅಪರಾಧ » ಲಂಚ ಸ್ವೀಕರಿಸುವಾಗ ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ADLR, RI ಅಧಿಕಾರಿಗಳು..!

ಲಂಚ ಸ್ವೀಕರಿಸುವಾಗ ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ADLR, RI ಅಧಿಕಾರಿಗಳು..!

ಕೋಲಾರ : ಕರ್ನಾಟಕದಲ್ಲೇ ನಂಬರ್​ ಒನ್​ ಕರೆಪ್ಟ್​ ಆಗಿದ್ದ ADLR ಅಶ್ವಿನಿ ಕೊನೆಗೂ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಶ್ವಿನಿ ಸರ್ವೆ ಹಾಗೂ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕಿಯಾಗಿದ್ದು, ಒಂದು ಫೈಲ್​​​ ಟಚ್​ ಮಾಡಬೇಕಂದ್ರೆ 50 ಸಾವಿರದಿಂದ 1 ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಈ ಹಿಂದೆ ಪೋಸ್ಟಿಂಗ್​ಗೆ 1 ಕೋಟಿ ಕೊಟ್ಟು ಬಂದಿದ್ದೀನಿ ಅಂತಾ ಅಶ್ವಿನಿ ಕೊಚ್ಚಿಕೊಂಡಿದ್ದರು.

ಲೋಕಾಯುಕ್ತ ಅಧಿಕಾರಿಗಳು ADLR ಅಶ್ವಿನಿ ಮೇಲೆ 3 ತಿಂಗಳಿಂದ ಕಣ್ಣಿಟ್ಟಿದ್ದರು. ಕೊನೆಗೂ ಬಡಾವಣೆ ಭೂ ಪರಿವರ್ತನೆಗಾಗಿ 30 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು ಸ್ವೀಕರಿಸುವಾಗ ಅಧಿಕಾರಿಗಳಿಗೆ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಭೂ ದಾಖಲೆಗಳ ವಿಭಾಗದ ಸಹಾಯಕ ನಿರ್ದೇಶಕಿ ಅಶ್ವಿನಿ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್ ಎಂಬ ಅಧಿಕಾರಿಗಳು ಲೋಕಾ ಬಲೆಗೆ ಬಿದ್ದಿದ್ದಾರೆ.

ಇವರಿಬ್ಬರು ಮಾಲೂರಿನ ಕಡತೂರು ಗ್ರಾಮದ ಕಾಮಣ್ಣ ಬಳಿ ಇರೋ ಭೂಪರಿವರ್ತನೆಗಾಗಿ KR ಪುರಂ ಬಳಿಯ A2b ರೆಸ್ಟೋರೆಂಟ್​ನಲ್ಲಿ 10 ಸಾವಿರ ಮುಂಗಡ ಲಂಚ ಪಡೆದಿದ್ದರು. ಉಳಿದ 20 ಸಾವಿರ ಹಣ RI ಮಂಜುನಾಥ್​ಗೆ ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಇದನ್ನೂ ಓದಿ  : ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ತನಿಖೆಗೆ ED ಎಂಟ್ರಿ..!

Leave a Comment

DG Ad

RELATED LATEST NEWS

Top Headlines

ಲಾಯರ್ ಜಗದೀಶ್​ ಅವರು ಹೆಣ್ಮಕ್ಕಳು ಮುಂದೆ ಡ್ರೆಸ್ ಚೇಂಜ್ ಮಾಡ್ತಾರೆ – ದೊಡ್ಮನೆ ನಾರಿಯರು ಗರಂ..!

ಬಿಗ್ ಬಾಸ್ ಮನೆಯಲ್ಲಿ 17 ಸ್ಪರ್ಧಿಗಳು ಒಂದು ವಾರ ಕಳೆದಿದ್ದಾರೆ. ಆರಂಭದ ದಿನಗಳಲ್ಲೇ ಸ್ಪರ್ಧಿಗಳು ಅಬ್ಬರಿಸಿದ್ದಾರೆ. ಕೆಲವರು ರೂಲ್ಸ್ ಬ್ರೇಕ್ ಮಾಡಿದ್ರೆ ಇನ್ನು ಕೆಲವರು ಜಗಳ ಮಧ್ಯೆ

Live Cricket

Add Your Heading Text Here