ನ್ಯೂಯಾರ್ಕ್ : ಬಾಲಿವುಡ್‌ನಲ್ಲಿ ಶಾರೂಖ್ ಖಾನ್, ಸಲ್ಮಾನ್ ಖಾನ್ ಸೇರಿ ಹಲವು ನಟರ ಜೊತೆ ಮಿಂಚಿ ಹಾಲಿವುಡ್‌ಗೆ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿ ಗಂಡ, ಮಗು, ಶೂಟಿಂಗ್ ಅಂತಾ ಫುಲ್ ಬ್ಯುಸಿ ಆಗಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ಬಹುಬೇಡಿಕೆಯಲ್ಲಿದ್ದಾಗಲೇ ಅಮೆರಿಕದ ಪಾಪ್ ಸಿಂಗರ್ ನಿಕ್ ಜೊನಾಸ್ ಜೊತೆ ಪ್ರೇಮಪಾಶದಲ್ಲಿ ಬಿದ್ದರು. ಡೇಟಿಂಗ್ ಬಳಿಕ ಮದುವೆಯೂ ಆಗಿ ಅಮೆರಿಕಾ ಸೊಸೆಯಾಗಿ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಾ ಸೆಟ್ಲ್ ಆಗಿದ್ದಾರೆ.
ಪ್ರೀತಿಸಿ ಮದುವೆಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಮದುವೆ ಬಗ್ಗೆ, ಹೆಣ್ತನದ ಬಗ್ಗೆ ಹೇಳಿರುವ ಒಂದು ಮಾತು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಆ ಬಗ್ಗೆ ಮದುವೆ ಆಗಲಿರುವ ಹಾಗೂ ಆಗಿರುವ ಹೀಗೆ ಎಲ್ಲ ಪುರುಷರೂ ಚರ್ಚೆಯಲ್ಲಿ ತೊಡಗಿದ್ದಾರೆ.
‘ಮದುವೆಯಾಗುವಾಗ ಗಂಡುಮಕ್ಕಳು ಕನ್ಯತ್ವವನ್ನು ಉಳಿಸಿಕೊಂಡಿರುವ ಹೆಂಡತಿಗಾಗಿ ಹುಡುಕಬೇಡಿ. ಏಕೆಂದರೆ ಅದು ಒಂದೇ ರಾತ್ರಿಯಲ್ಲಿ ಕಳೆದು ಹೋಗುತ್ತದೆ. ಒಳ್ಳೆಯ ನಡತೆ ಇರುವ ಹುಡುಗಿಯನ್ನು ಮದುವೆಯಾಗಿ. ಅದು ಜೀವನದ ಕೊನೆಯವರೆಗೂ ಇರುತ್ತದೆ’ ಎಂದಿದ್ದಾರೆ. ಇತ್ತೀಚೆಗೆ ಬಹಳಷ್ಟು ವಿಷಯಗಳ ಬಗ್ಗೆ ಬಿಂದಾಸ್ ಆಗಿ ಮಾತನಾಡುವ ನಟಿ ಪ್ರಿಯಾಂಕಾ ಚೋಪ್ರಾ ಹೀಗೆ ಹೇಳುವ ಮೂಲಕ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಅವರು ಆಗಾಗ ಅಮೆರಿಕಾದ ಹಲವು ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಂದರ್ಶನವೊಂದರಲ್ಲಿ ಕೇಳಲಾಗುವ ಹಲವು ಪ್ರಶ್ನೆಗಳಿಗೆ ಅನಿರೀಕ್ಷಿತ ಉತ್ತರ ಕೊಡುವ ಪ್ರಿಯಾಂಕಾ, ಅಲ್ಲಿನ ಸಂದರ್ಶಕನ್ನೇ ಹಲವು ಬಾರಿ ಬೆಚ್ಚಿ ಬೀಳಿಸಿದ್ದಾರೆ. ‘ನೀವ್ಯಾಕೆ ಈಗ ಭಾರತದ ಸಿನಿಮಾಗಳಲ್ಲಿ ಮತ್ತೆ ನಟಿಸುತ್ತಿಲ್ಲ’ ಎಂಬ ಪ್ರಶ್ನೆಗೆ ಪ್ರಿಯಾಂಕಾ ಚೋಪ್ರಾ ಅವರು ಸ್ವಲ್ಪವೂ ಯೋಚಿಸದೇ ‘ನನಗೆ ನನ್ನ ಹಸ್ಬಂಡ್ ನಿಕ್ ಬಿಟ್ಟು ಇರಲಾಗುವುದಿಲ್ಲ. ನನ್ನ ಗಂಡನೇ ನನಗೆ ಸರ್ವಸ್ವ. ನಿಕ್ ಜೊನಾಸ್ ಎಲ್ಲಿರುತ್ತಾರೋ ಅಲ್ಲಿಯೇ ಜೊತೆಗಿರಲು ನಾನು ಇಷ್ಟಪಡುತ್ತೇನೆ. ಆತನನ್ನು ಬಿಟ್ಟು ನಾನು ಇಂಡಿಯಾಗೆ ಹೋಗಲು ಬಯಸುವುದಿಲ್ಲ. ಒಮ್ಮೆ ನಾನು ಭಾರತದ ಸಿನಿಮಾ ಒಪ್ಪಿಕೊಂಡರೆ ನಾನು ಅಲ್ಲಿಯೇ ಇದ್ದು ಶೂಟಿಂಗ್ ಮುಗಿಸಬೇಕಾಗುತ್ತದೆ ಎಂದಿದ್ದಾರೆ.
ನನಗೆ ಈಗಲೂ ಇಂಡಿಯಾದಿಂದ ಸಿನಿಮಾ ಆಫರ್‌ಗಳು ಬರುತ್ತಲೇ ಇವೆ. ಮುಖ್ಯವಾಗಿ ಬಾಲಿವುಡ್ ಹಾಗೂ ತೆಲುಗು ಚಿತ್ರರಂಗಗಳು ಈಗಲೂ ನನಗೆ ಆಫರ್ ನೀಡುತ್ತಿವೆ. ಆದರೆ, ನಾನೇ ಅವರ ಕ್ಷಮೆ ಕೇಳಿ ಆ ಆಫರ್‌ಗಳನ್ನು ರಿಜೆಕ್ಟ್ ಮಾಡುತ್ತಿದ್ದೇನೆ.
ಪತಿ ನಿಕ್ ಜೊನಾಸ್ ಜೊತೆ ಇಲ್ಲದೇ ನಾನು ಒಂದು ವಾರ ಕಳೆಯಲು ಅಸಾಧ್ಯವೇ ಸರಿ. ಅವನಿಲ್ಲದ ನನ್ನ ಜೀವನವನ್ನು ನಾನು ಕಲ್ಪಿಸಿಕೊಳ್ಳಲೂ ಆಗದು. ‘ಅವನೆಲ್ಲೋ ನಾನಲ್ಲೇ ಇರುವೆ..’ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಇದನ್ನೂ ಓದಿ : ಮಲಯಾಳಂ ಚಿತ್ರರಂಗಕ್ಕೆ ಬಿಗ್ ಶಾಕ್ – ನಟ ದಿಲೀಪ್ ಶಂಕರ್ ಶವವಾಗಿ ಪತ್ತೆ!