Download Our App

Follow us

Home » ಅಪರಾಧ » ರೇವ್​​ ಪಾರ್ಟಿ ಕೇಸ್ : ಕಳ್ಳಾಟದ ನಟಿಗೆ ಎರಡನೇ ನೋಟಿಸ್ ​ಜಾರಿ..!

ರೇವ್​​ ಪಾರ್ಟಿ ಕೇಸ್ : ಕಳ್ಳಾಟದ ನಟಿಗೆ ಎರಡನೇ ನೋಟಿಸ್ ​ಜಾರಿ..!

ಬೆಂಗಳೂರು : ರೇವ್​​ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾಗೆ ಎರಡನೇ ನೋಟಿಸ್​ ಜಾರಿಯಾಗಿದೆ. ನಟಿ ಹೇಮಾ ಸೇರಿ 8 ಮಂದಿಗೆ ನೋಟಿಸ್​ ಜಾರಿಯಾಗಿದ್ದು, ಮೇ 27ರಂದು ವಿಚಾರಣೆಗೆ ಬರಲು CCB ನೋಟಿಸ್ ನೀಡಿತ್ತು, ಆದರೆ ನಟಿ ಸೋಮವಾರ ವಿಚಾರಣೆಗೆ ಗೈರಾಗಿದ್ದರು.

ಅನಾರೋಗ್ಯದ ಕಾರಣ ಹೇಳಿ ನಟಿ ಒಂದು ವಾರ ಕಾಲಾವಲಾಶ ಕೇಳಿದ್ದರು. ಇದೀಗ ಜೂನ್ 1 ರಂದು ವಿಚಾರಣೆಗೆ ಬರುವಂತೆ ಮತ್ತೊಂದು ನೋಟಿಸ್​ ಜಾರಿಯಾಗಿದೆ. ನಟಿ ಹೇಮಾ ಸೇರಿ ಒಟ್ಟು 8 ಮಂದಿಗೆ ಎರಡನೇ ನೋಟಿಸ್​ ನೀಡಿ, CCB ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ. ಎರಡನೇ ನೋಟಿಸ್​ ಉಲ್ಲಂಘನೆ ಮಾಡಿದ್ರೆ ನಟಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಪ್ರಕರಣ : ಜಿಆರ್‌ ಫಾರ್ಮ್‌ ಹೌಸ್‌ನಲ್ಲಿ ಮೇ 19ರಂದು ರಾತ್ರಿ ನಡೆದ ‘ಸನ್‌ಸೆಟ್‌ ಟು ಸನ್‌ರೈಸ್‌’ ಹೆಸರಿನ ರೇವ್‌ ಪಾರ್ಟಿಯಲ್ಲಿ ನಟಿಯರಾದ ಹೇಮಾ, ಆಶಿ ರಾಯ್‌ ಸೇರಿದಂತೆ 103 ಮಂದಿ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 103 ಮಂದಿಯ ರಕ್ತದ ಮಾದರಿ ಪರೀಕ್ಷಿಸಿದ್ದು, ನಟಿ ಹೇಮಾ ಸೇರಿದಂತೆ 86 ಮಂದಿ ಡ್ರಗ್ಸ್‌ ಸೇವಿಸಿರುವುದು ದೃಢಪಟ್ಟಿದ್ದು, ಇವರೆಲ್ಲರನ್ನೂ ವಿಚಾರಣೆ ನಡೆಸಲು ಸಿಸಿಬಿ ಮುಂದಾಗಿದೆ.

ಇದನ್ನೂ ಓದಿ : ಪ್ರಜ್ವಲ್​​​​​ ವಾಪಸ್​ ಹೊತ್ತಲ್ಲೇ SIT ತನಿಖೆ ಚುರುಕು : ಪ್ರಜ್ವಲ್​ ದಿಂಬು, ಬೆಡ್​ ವಶಕ್ಕೆ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here