ಮೈಸೂರು: ಚಾಮುಂಡಿ ಬೆಟ್ಟಕ್ಕೆ ನಟ ಡಾಲಿ ಧನಂಜಯ್ ಹಾಗೂ ಭಾವಿ ಪತ್ನಿ ಡಾ. ಧನ್ಯತಾ ಇಂದು ಬೆಳಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಡಾಲಿ ಧನಂಜಯ್ ಮದುವೆ ಹಿನ್ನೆಲೆ ಶಕ್ತಿಶಾಲಿ ದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ಬಳಿಕ ಲಗ್ನ ಪತ್ರಿಕೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅವರ ಜೊತೆ ಭಾವಿ ಪತ್ನಿ ಡಾ. ಧನ್ಯತಾ ಸಾಥ್ ನೀಡಿದ್ರು.
ದೇವಿ ದರ್ಶನದ ಬಳಿಕ ಮಾತನಾಡಿದ ನಟ ಧನಂಜಯ್, ಮದುವೆಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಲಗ್ನ ಪತ್ರಿಕೆ ಕೊಡುವುದನ್ನು ಶುರು ಮಾಡಿದ್ದೇನೆ. ಇಂದು ಚಾಮುಂಡಿ ಬೆಟ್ಟದಲ್ಲಿ ಲಗ್ನ ಪತ್ರಿಕೆಗೆ ಪೂಜೆ ಸಲ್ಲಿಸಿದ್ದೇನೆ. ಮೈಸೂರಿನಲ್ಲೇ ಮದುವೆ ನಡೆಯುತ್ತಿದೆ. ಎಲ್ಲರೂ ಬಂದು ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಮೈಸೂರಿನಲ್ಲಿ 2025ರ ಫೆಬ್ರವರಿ 15 ಮತ್ತು 16ರಂದು ಡಾಲಿ ಧನಂಜಯ್ ಮತ್ತು ಡಾ.ಧನ್ಯತಾ ಮದುವೆ ನಡೆಯಲಿದೆ. ಆ್ಯಕ್ಟರ್ & ಡಾಕ್ಟರ್ ಮದುವೆಗೆ ಬಂದು ಆಶೀರ್ವಾದ ಮಾಡಿ ಅಂತ ಡಾಲಿ ಎಲ್ಲರನ್ನೂ ಇನ್‌ವೈಟ್ ಮಾಡಿದ್ದಾರೆ. ತುಂಬಾ ವಿಭಿನ್ನವಾಗಿ ಅಂಚೆ ಪತ್ರಿಕೆ ರೀತಿ ಮದುವೆ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ. ಕೈಬರಹದ ಮೂಲಕವೂ ಮದುವೆ ಕರೆಯೋಲೆ ಸಿದ್ಧಪಡಿಸಿರೋದು ವಿಶೇಷವಾಗಿದೆ.
ಇದನ್ನೂ ಓದಿ : ಮ್ಯಾಕ್ಸ್ ಯಶಸ್ವಿ ಪ್ರದರ್ಶನ – ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ಕಿಚ್ಚ ಸುದೀಪ್..!