ಯಾದಗಿರಿ : ನಟ ದರ್ಶನ್ ಅಭಿಮಾನಿಯಿಂದ ಯುವಕನಿಗೆ ಜೀವಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಯಾದಗಿರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಜು ಬಂಧಿತ ಆರೋಪಿ.
ಯಾದಗಿರಿಯ ಗಂಗಾನಗರದ ಪಂಚರ್ ಅಂಗಡಿ ಯುವಕ ಅಭಿ ಎಂಬಾತನಿಗೆ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಜು ಕೊಲೆ ಬೆದರಿಕೆ ಹಾಕಿದ್ದನು. ಬಾಸ್ ಬಾಸ್ ಎಂದು ಯಾಕೆ ಬಕೆಟ್ ಹಿಡಿಯುತ್ತಿರಿ? ಬಕೆಟ್ ಯಾಕ್ ಹಿಡಿತೀರಿ. ತಾಯಿ-ತಂದೆಗೆ ಬಕೆಟ್ ಹಿಡಿಯಿರಿ ಎಂದು ಅಭಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಹಾಕಿದ್ದನು.
ಹೀಗಾಗಿ ಅಭಿಗೆ ಕಾಲ್ ಮಾಡಿ ಜೀವಂತವಾಗಿ ಸುಡೋದಾಗಿ ರಾಜು ಬೆದರಿಸಿದ್ದ. ನಿನ್ನ ಮನೆ ಹಾಗೂ ಅಂಗಡಿಗೆ ಬೆಂಕಿ ಹಚ್ಚಬೇಕಾಗುತ್ತದೆ ಎಂದು ಕರೆ ಮಾಡಿ ಹೆದರಿಸಿದ್ದನು. ಇನ್ನು ಆಡಿಯೋ ವೈರಲ್ ಆಗ್ತಿದ್ದಂತೆ ಯಾದಗಿರಿ ನಗರ ಠಾಣೆಯ ಪೊಲೀಸರು ಅಲರ್ಟ್ ಆಗಿ ರಾಜುನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ :ರಾಜ್ಯದ ವಾಹನ ಸವಾರರಿಗೆ ಬಿಗ್ಶಾಕ್ : ಪೆಟ್ರೋಲ್ – ಡೀಸೆಲ್ ತೆರಿಗೆ ಹೆಚ್ಚಿಸಿದ ರಾಜ್ಯ ಸರಕಾರ, ದರ ಭಾರೀ ಏರಿಕೆ..!