ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ಗೆ ರಾಜಾತಿಥ್ಯ ನೀಡಲಾಗುತ್ತಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಿದ್ದಂತೆ ಇತ್ತ ಚಿಕ್ಕಣ್ಣ ವಿಚಾರಣೆಗೆ ಹಾಜರಾಗಿದ್ದಾರೆ.
ಕೆಲ ದಿನಗಳ ಹಿಂದೆ ಸೆಕ್ಷನ್ 164ರ ಅಡಿ ಚಿಕ್ಕಣ್ಣನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಚಿಕ್ಕಣ್ಣ ಆರೋಪಿಯನ್ನ ಭೇಟಿ ಮಾಡುವಂತಿಲ್ಲ. ಆದರೆ ಚಿಕ್ಕಣ್ಣ ಕಳೆದ ವಾರ ಜೈಲಿನಲ್ಲಿದ್ದ ದರ್ಶನ್ರನ್ನು ಭೇಟಿ ಮಾಡಿದ್ದರು.
ಈ ಸಂಬಂಧ ಮಾಹಿತಿ ಕಲೆ ಹಾಕಿ ಪೊಲೀಸರು ಚಿಕ್ಕಣ್ಣಗೆ ನೋಟಿಸ್ ನೀಡಿದ್ದರು. ನೋಟಿಸ್ ಹಿನ್ನೆಲೆ ನಟ ಚಿಕ್ಕಣ್ಣ CP ಚಂದನ್ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಬಸವೇಶ್ವರ ನಗರದ ACP ಕಚೇರಿಗೆ ಹಾಜರಾದ ನಟನಿಗೆ, ದರ್ಶನ್ ಭೇಟಿ ಮಾಡಿದ್ದು ಯಾಕೆ? ಭೇಟಿ ಮಾಡಿದ ಉದ್ದೇಶವೇನು? ದರ್ಶನ್ ಜೊತೆ ಜೈಲಿನಲ್ಲಿ ನಡೆದ ಮಾತುಕತೆ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ನಟ ಚಿಕ್ಕಣ್ಣಗೆ ವಾರ್ನಿಂಗ್ ಮಾಡಿದ DCP ಗಿರೀಶ್ ಅವರು, ಯಾವುದೇ ಕಾರಣಕ್ಕೂ ದರ್ಶನ್ ಇನ್ಮುಂದೆ ಭೇಟಿ ಮಾಡುವಂತಿಲ್ಲ. ದರ್ಶನ್ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ ಎಂದು ಖಡಕ್ಕಾಗಿ ವಾರ್ನ್ ಮಾಡಿದ್ದಾರೆ.
ಇದನ್ನೂ ಓದಿ : ಬಳ್ಳಾರಿ ಜೈಲಿಗೆ ಕೊಲೆ ಆರೋಪಿ ದರ್ಶನ್ ಎಂಟ್ರಿ..!