ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡಲಾಗಿದೆ. ಜೊತೆಗೆ ಬೆಂಗಳೂರಿನ ಹೋಟೆಲ್‌ಗಳಿಗೆ ನಾಯಿ ಮಾಂಸ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಮಾಂಸ ಪೂರೈಕೆದಾರ ಅಬ್ದುಲ್ ರಜಾಕ್ ಪ್ರತಿಕ್ರಿಯಿಸಿ, ಪುನೀತ್ ಕೆರೆಹಳ್ಳಿ ನನಗೆ ಥ್ರೆಟ್ ಮಾಡಲು ಪ್ರಯತ್ನಿಸಿದ್ರು, ಹಲವು ದಿನಗಳಿಂದ ರೋಲ್ ಕಾಲ್ ಮಾಡಲು ಪ್ರಯತ್ನಿಸಿದ್ರು ಎಂದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಅಬ್ದುಲ್ ರಜಾಕ್ ಮಾತನಾಡಿ, ಥ್ರೆಟ್ ಸಂಬಂಧ ಕಾಟನ್ಪೇಟೆ ಪೊಲೀಸರಿಗೆ ದೂರು ನೀಡಿದ್ದೆ, ಕಾಟನ್ಪೇಟೆ ಠಾಣೆಯಲ್ಲಿ NCR ದಾಖಲಾಗಿತ್ತು. ಹೀಗಾಗಿ ನನ್ನ ವಿರುದ್ಧ ಪಿತೂರಿ ಮಾಡಲು ಪುನೀತ್ ಕೆರೆಹಳ್ಳಿ ಪ್ರಯತ್ನ, ಸುಖಾಸುಮ್ಮನೆ ಗಲಾಟೆ ಮಾಡಿ ಜೈಲು ಸೇರಿದ್ದಾರೆ. ನಾನು 12 ವರ್ಷದಿಂದ ಮಾಂಸದ ವ್ಯವಹಾರ ಮಾಡುತ್ತಿದ್ದೇನೆ, ರಾಜಸ್ಥಾನದ ಕುರಿಗಳಿಗೆ ಬಾಲ ದೊಡ್ಡದಾಗಿ ಇರುತ್ತೆ. ಎಲ್ಲಾ ರೀತಿಯ ದಾಖಲೆ ಇಟ್ಟುಕೊಂಡೇ ವ್ಯವಹಾರ ಮಾಡ್ತಿದ್ದೇನೆ ಎಂದಿದ್ದಾರೆ.
FSSAIನವರು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಅಂತಾ ಹೇಳಿದ್ದಾರೆ, ಜನರಲ್ಲಿ ಆತಂಕ ಸೃಷ್ಟಿಸಲು ಪುನೀತ್ ಕೆರೆಹಳ್ಳಿ ಪ್ರಯತ್ನ ಮಾಡಿದ್ರು. ಜನರು ಇದ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ.
ಇದನ್ನೂ ಓದಿ : ಪುನೀತ್ ಕೆರೆಹಳ್ಳಿಗೆ 14ದಿನ ನ್ಯಾಯಾಂಗ ಬಂಧನ..!