ದಾವಣಗೆರೆ : ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಎಲ್ಲಾ ಕ್ಷೇತ್ರದಲ್ಲೂ ಭರ್ಜರಿ ತಯಾರಿ ನಡೆಯುತ್ತಿದೆ. ಆದರೆ ದಾವಣಗೆರೆ ಬಿಜೆಪಿಯಲ್ಲಿ ಬಂಡಾಯ ಬಿರುಗಾಳಿ ಎದ್ದಿದೆ. ಅಭ್ಯರ್ಥಿ ಬದಲಿಸದೇ ಇದ್ದರೆ ಬಂಡಾಯ ಸ್ಪರ್ಧೆ ಮಾಡುವುದಾಗಿ ಸ್ಥಳೀಯ ನಾಯಕರು ಘೋಷಿಸಿದ್ದಾರೆ.
ಬಿಜೆಪಿ ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಗಾಯತ್ರಿ ಸಿದ್ದೇಶ್ವರ್ ಅವರನ್ನು ಕಣಕ್ಕಿಳಿಸಿದೆ.ಇದರಿಂದ ಸಿಡಿದೆದ್ದಿರೊ ಅಸಮಾಧಾನಿತರ ಗುಂಪು ಗಾಯತ್ರಿ ಸಿದ್ದೇಶ್ವರ್ ಬದಲಾವಣೆಗೆ ಪಟ್ಟು ಹಿಡಿದಿದೆ. ಅಭ್ಯರ್ಥಿ ಬದಲಾವಣೆ ಮಾಡದಿದ್ದರೆ. ಅಚ್ಚರಿ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಸಹ ನಿರ್ಧರಿಸಿದೆ.
ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಫ್ಯಾಮಿಲಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರು ಲೋಕಿಕೆರೆ ನಾಗರಾಜ್ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಇನ್ನೊಂದು ಸುತ್ತಿನ ಸಭೆ ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಎಸ್.ವಿ.ರವೀಂದ್ರನಾಥ್ ನೇತೃತ್ವದಲ್ಲಿ ನಡೆಯಲ್ಲಿದ್ದು, ಜಿಲ್ಲಾ ಬಿಜೆಪಿಯ ಬಹುತೇಕ ಮಾಜಿ ಸಚಿವರು, ಮಾಜಿ ಶಾಸಕರು, ಸೋತ ಅಭ್ಯರ್ಥಿಗಳು ಸೇರಿ 15 ಮುಖಂಡರು ಭಾಗಿಯಾಗಲಿದ್ದಾರೆ.
ಅಭ್ಯರ್ಥಿ ಬದಲಿಸದೇ ಇದ್ದರೆ ಮುಂದಿನ ವಾರ ಮಠಾಧೀಶರ ಭೇಟಿ ಮಾಡುತ್ತೇವೆ. ನಂತರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಚ್ಚರಿ ಅಭ್ಯರ್ಥಿ ಘೋಷಿಸುತ್ತೇವೆ ಎಂದು ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ರವೀಂದ್ರನಾಥ್ ವಾರ್ನಿಂಗ್ ಮಾಡಿದ್ದಾರೆ.
ಇದನ್ನೂ ಓದಿ : ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮರದ ಕೊಂಬೆ ಬಿದ್ದು ಬೈಕ್ ಸವಾರನ ಬೆನ್ನು ಮೂಳೆ ಮುರಿತ : ಖಾಸಗಿ ಶಾಲೆ, BBMP ವಿರುದ್ಧ FIR..!