ತುಮಕೂರು : ಲಂಚ ಸ್ವೀಕರಿಸುವಾಗ ತಹಶೀಲ್ದಾರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕನಾಯಕನಹಳ್ಳಿಯ್ಲಲಿ ನಡೆದಿದೆ. ತಹಶೀಲ್ದಾರ್ ಗೀತಾ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದ ರೈತ ಮಲ್ಲಿಕಾರ್ಜುನ್ ಗೆ ಸೇರಿದ 33 ಗುಂಟೆ ಜಮೀನನ್ನ ಭೂ ಪರಿವರ್ತನೆ ಮಾಡಿಕೊಡಲು 3 ಲಕ್ಷ ಲಂಚಕ್ಕೆ ತಹಶೀಲ್ದಾರ್ ಗೀತಾ ಬೇಡಿಕೆಯಿಟ್ಟಿದ್ದರು.
ಬಳಿಕ ನಿನ್ನೆ ಬೆಳಗ್ಗೆ ತಹಶೀಲ್ದಾರ್ ಗೀತಾ ರೈತ ಮಲ್ಲಿಕಾರ್ಜುನ್ ನಿಂದ 20 ಸಾವಿರ ಹಣವನ್ನು ಪಡೆದಿದ್ದರು. ಹಾಗೆಯೇ ಮತ್ತೊಮ್ಮೆ ನಿನ್ನೆ ಸಂಜೆ 30 ಸಾವಿರ ಹಣವನ್ನು ಸ್ವೀಕರಿಸುವಾಗ ರೇಡ್ ಹ್ಯಾಂಡ್ ಆಗಿ ಲೋಕಾಯುಕ್ತ ಕೈಯಲ್ಲಿ ಲಾಕ್ ಆಗಿದ್ದಾರೆ.
ತಹಶೀಲ್ದಾರ್ ಗೀತಾ ಮಲ್ಲಿಕಾರ್ಜುನ್ ನನ್ನು ಮನೆಗೆ ಕರೆಸಿಕೊಂಡು ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದು, ತುಮಕೂರು ಲೋಕಾಯುಕ್ತ ಡಿವೈಎಸ್ ಪಿ ರಾಮಕೃಷ್ಣ ಹಾಗೂ ಉಮಾಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆ ವೇಳೆ ಸತ್ಯ ಬಯಲಾಗಿದೆ. ಸದ್ಯ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಗೀತಾಳನ್ನ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೀಗ ಲೋಕಾಯುಕ್ತ ಅಧಿಕಾರಿಗಳಿಂದ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಎಪ್ಪತ್ತಕ್ಕೂ ಹೆಚ್ಚು ಸಿರೀಸ್ ಮತ್ತು ಸಿನಿಮಾಗಳನ್ನು ಅನಾವರಣಗೊಳಿಸಲು ರೆಡಿಯಾದ ಪ್ರೈಮ್ ವೀಡಿಯೋ..!