ಕರಾವಳಿಯ ಪ್ರತಿಭೆ ರೂಪೇಶ್ ಶೆಟ್ಟಿ ತುಳು ಚಿತ್ರರಂಗ, ಕನ್ನಡ ಚಿತ್ರರಂಗದಲ್ಲಿ ಸದ್ಯ ಮಿನುಗುತ್ತಿದ್ದಾರೆ. ಅಲ್ಲದೇ ಬಿಗ್ ಬಾಸ್ ನಲ್ಲೂ ಹವಾ ಸೃಷ್ಟಿಸಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಇದೀಗ ರೂಪೇಶ್ ಶೆಟ್ಟಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ರೂಪೇಶ್ ಶೆಟ್ಟಿ ಅವರು ತಮ್ಮ ಮೊದಲ ತಮಿಳು ಸಿನಿಮಾ ಮಾಡುತ್ತಿದ್ದು, ಮೊದಲ ಸಿನಿಮಾದಲ್ಲಿಯೇ ಕಾಲಿವುಡ್‌ನ ಖ್ಯಾತ ಹಾಸ್ಯ ಕಲಾವಿದ ಯೋಗಿ ಬಾಬು ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಈ ಚಿತ್ರದ ಬಗ್ಗೆ ರೂಪೇಶ್ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ‘ಇಂದು ತುಂಬಾ ಖುಷಿಯ ದಿವಸ ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೋತ್ಸಾಹದಿಂದ ಇಂದು ಒಂದು ಅದ್ಭುತ ತಂಡದ ಜತೆಗೆ “ಸನ್ನಿಧಾನಮ್ P. O” ಎನ್ನುವ ನನ್ನ ಮೊದಲ ತಮಿಳು ಚಿತ್ರ ಮಾಡುವ ಅವಕಾಶ ದೊರಕಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಫೋಟೋಗಳೊಂದಿಗೆ ಹಂಚಿಕೊಂಡಿದ್ದಾರೆ. ತಮಿಳಿನ ಸೂಪರ್ ಸ್ಟಾರ್ ಹಾಸ್ಯ ನಟರಾದ ಯೋಗಿ ಬಾಬು ಅವರ ಜತೆ ನಟಿಸುವ ಅವಕಾಶ ನನ್ನ ಪಾಲಿಗೆ ದೊಡ್ಡ ಹೆಮ್ಮೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ರೋಜಾ ಸಿನಿಮಾ ಖ್ಯಾತಿಯ ನಟಿ ಮಧು ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾರಥಿ ನಿರ್ದೇಶನ ಮಾಡುತ್ತಿದ್ದಾರೆ.
ಈಗಾಗಲೇ ಕನ್ನಡ, ತುಳು, ತೆಲುಗಿನಲ್ಲಿ ನಟಿಸಿರುವ ರೂಪೇಶ್ ಶೆಟ್ಟಿಗೆ ತಮಿಳಿನಲ್ಲಿಯೂ ಗುರುತಿಸಿಕೊಳ್ಳುವ ಒಂದೊಳ್ಳೆಯ ಅವಕಾಶ ಸಿಕ್ಕಿದೆ. ಇದು ರೂಪೇಶ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ರೂಪೇಶ್ ಶೆಟ್ಟಿ – ಗೀತಾ ಭಾರತಿ ಭಟ್ ನಟಿಸಿರುವ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾ ಒಒಟಿಟಿಗೆ ಬರಲು ಸಿದ್ಧವಾಗಿದೆ.
ಇದನ್ನೂ ಓದಿ : ಅಷ್ಟು ಸಿಹಿ ಮನುಷ್ಯರ ಮಧ್ಯೆ ಈ ಕಹಿ ಯಾಕೆ? – RCB ಮ್ಯಾನೇಜ್ಮೆಂಟ್ ವಿರುದ್ಧ ಫ್ಯಾನ್ಸ್ ಗರಂ..!