ಇನ್ಫೋಸಿಸ್ ಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಅವರು 4 ತಿಂಗಳ ವಯಸ್ಸಿನ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ 243 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇದರಿಂದ 4 ತಿಂಗಳ ಏಕಾಗ್ರಹ ರೋಹನ್ ಮೂರ್ತಿ ಭಾರತದ ಅತ್ಯಂತ ಕಿರಿಯ ಕೋಟ್ಯಧಿಪತಿ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. 4 ತಿಂಗಳ ಏಕಾಗ್ರಹ ರೋಹನ್ ಮೂರ್ತಿ, ಭಾರತದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸೇವೆಗಳ ಕಂಪನಿಯಲ್ಲಿ 15 ಲಕ್ಷ ಷೇರುಗಳನ್ನು ಅಂದರೆ ಶೇಕಡಾ 0.04ರಷ್ಟು ಪಾಲನ್ನು ಹೊಂದಿರುವುದಾಗಿ ಸೋಮವಾರ ಷೇರು ವಿನಿಮಯ ಕೇಂದ್ರ ಮಾಹಿತಿ ನೀಡಿದೆ.
ಮೊಮ್ಮಗನನ್ನು ಷೇರು ಪಾಲುದಾರ ಮಾಡಿಕೊಂಡ ನಂತರ ನಾರಾಯಣಮೂರ್ತಿಯವರ ಪಾಲು ಶೇ.0.36 ಆಗಿದೆ. ಕಳೆದ ನವೆಂಬರ್ ನಲ್ಲಿ ನಾರಾಯಣ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಹಾಗೂ ಅಪರ್ಣಾ ಕೃಷ್ಣನ್ ಗಂಡು ಮಗುವಿನ ಪೋಷಕರಾದರು. ಈಗಾಗಲೇ ಇಬ್ಬರು ಮೊಮ್ಮಕ್ಕಳಿದ್ದು, ಏಕಾಗ್ರಹ ಇವರಿಗೆ ಮೂರನೇ ಮೊಮ್ಮಗು. ಮೊದಲ ಎರಡು ಹೆಣ್ಣು ಮೊಮ್ಮಕ್ಕಳು ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ನಾರಾಯಣಮೂರ್ತಿ ಅವರ ಮಕ್ಕಳು.
ಇದನ್ನೂ ಓದಿ : ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಸರತ್ತು – ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ದೆಹಲಿಗೆ ಪ್ರಯಾಣ..!