Download Our App

Follow us

Home » ರಾಜ್ಯ » ಮಹಾರಾಜ ಯದುವೀರರಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು ಹೇಗೆ ? – ಬಿಟಿವಿಯಲ್ಲಿ ಸ್ಪೋಟಕ ರಹಸ್ಯ

ಮಹಾರಾಜ ಯದುವೀರರಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು ಹೇಗೆ ? – ಬಿಟಿವಿಯಲ್ಲಿ ಸ್ಪೋಟಕ ರಹಸ್ಯ

ಬೆಂಗಳೂರು : ರಾಜಕೀಯದ ಸಹವಾಸದಲ್ಲೇ ಇರದಿದ್ದ ಮೈಸೂರು ಮಹಾರಾಜ ಯದುವೀರ್ ಶ್ರೀಕಂಠದತ್ತ ರಾಜ ಒಡೆಯರ್ ದಿಢೀರ್ ರಾಜಕೀಯಕ್ಕೆ ಪ್ರವೇಶಿಸಿದ್ದು ಹೇಗೆ? ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದಿದ್ದು ಹೇಗೆ? ಹಾಲಿ ಸಂಸದ ಪ್ರತಾಪ್ ಸಿಂಹನಂತಹ ಪ್ರಭಾವಿ ಕ್ರಿಯಾಶೀಲ ಸಂಸದರನ್ನೇ ಹಿಂದಿಕ್ಕಿ ಟಿಕೆಟ್ ಗಿಟ್ಟಿಸಿದ ರಹಸ್ಯ ಇದೀಗ ಬಿಟಿವಿಯಲ್ಲಿ ಬಯಲಾಗುತ್ತಿದೆ.

ಯದುವೀರ್ ಶ್ರೀಕಂಠದತ್ತ ರಾಜ ಒಡೆಯರ್

ಯದುವೀರ್ ಶ್ರೀಕಂಠದತ್ತ ರಾಜ ಒಡೆಯರ್​ಗೆ ಮೈಸೂರು ಬಿಜೆಪಿ ಟಿಕೆಟ್ ದೊರಕಿಸಿ ಕೊಡುವಲ್ಲಿ ದೆಹಲಿ ಮಟ್ಟದಲ್ಲಿ ಭಾರಿ ಪ್ರಭಾವಿ ರಾಜಕಾರಣ ನಡೆದಿದೆ. ಮೋದಿ ಮತ್ತು ಅಮಿತ್ ಶಾ ಅವರಿಗೆ ತೀರಾ ಆಪ್ತ ವಲಯದಲ್ಲಿದ್ದಂತಹ ಮಾಜಿ ಸಂಸದರೊಬ್ಬರು ಈ ಕೆಲಸವನ್ನು ಸದ್ದಿಲ್ಲದೆ ನಡೆಸಿದ್ದಾರೆ. ಅದು ಬೇರೆ ಯಾರು ಅಲ್ಲ ಮಹಾರಾಜ ಯದುವೀರ್ ಒಡೆಯರ್ ಅವರ ಮಾವ!

ಹೌದು, ಯದುವೀರ್ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಅವರ ತಂದೆಯವರಾದ ದುಂಗಾರ್ ಪುರ್ ರಾಜಮನೆತನದ ಹರ್ಷವರ್ಧನ್ ಸಿಂಗ್ ದುಂಗಾರ್ ಪುರ್ ಅವರೇ ಈ ಕೆಲಸ ಮಾಡಿದ್ದು. ರಾಜಸ್ಥಾನದ ಬಿಕಾನೀರ್ ಸಂಸದರಾಗಿದ್ದ ಹರ್ಷವರ್ಧನ್ ಸಿಂಗ್ ಅವರು ಮೋದಿ ಮತ್ತು ಅಮಿತ್ ಶಾ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಎಷ್ಟರಮಟ್ಟಿಗೆ ಅಂದರೆ ರಾಜಸ್ಥಾನದ ಪ್ರತಿ ರಾಜಕೀಯ ಚಟುವಟಿಕೆಯಲ್ಲಿ ಹರ್ಷವರ್ಧನ್ ಅವರ ಮಾತಿನ ತೂಕವೇ ಬೇರೆಯದಾಗಿರುತ್ತಿತ್ತು. ಇಷ್ಟು ಪ್ರಭಾವಿಯಾಗಿದ್ದ ಹರ್ಷವರ್ಧನ್ ಸಿಂಗ್ ದುಂಗಾರ್ ಪುರ್ ಅವರು ಇತ್ತೀಚೆಗೆ ಸಂಸತ್ ಟಿಕೆಟ್ ಅನ್ನು ನಿರಾಕರಿಸಿದ್ದರು. ವಯಸ್ಸಿನ ಕಾರಣ ನೀಡಿದ್ದ ಅವರು ನನಗೆ ಟಿಕೆಟ್ ಬೇಡ ಎಂದು ಮೋದಿ ಅವರಿಗೆ ಸ್ಪಷ್ಟವಾಗಿ ಹೇಳಿದ್ದರು. ಹರ್ಷವರ್ಧನ್ ಮನೆಯವರಿಗಾದರೂ ಟಿಕೆಟ್ ನೀಡಬೇಕು ಎಂದು ಮೋದಿ ಬಯಸಿದ್ದರು. ಆದರೆ ತಮ್ಮ ಕುಟುಂಬದಿಂದ ಯಾರು ಸ್ಪರ್ಧಿಸುವುದಿಲ್ಲ ಎಂದು ಹರ್ಷವರ್ಧನ್ ಮೋದಿಯವರ ಮನ ಒಲಿಸಿದ್ದರು.

ಹರ್ಷವರ್ಧನ್ ಸಿಂಗ್ ದುಂಗಾರ್ ಪುರ್

ಆದರೆ ಕರ್ನಾಟಕದ ವಿಚಾರ ಚರ್ಚೆಗೆ ಬಂದಾಗ ತಮ್ಮ ಪುತ್ರಿ ತ್ರಿಷಿಕಾ ಕುಮಾರಿಯವರ ಪತಿಯಾದ ಮೈಸೂರು ಮಹಾರಾಜರನ್ನು ಕಣಕ್ಕಿಳಿಸಲು ಮಾವ ಹರ್ಷವರ್ಧನ್ ದುಂಗಾರ್ ಪುರ್ ತೀರ್ಮಾನಿಸಿದರು. ಈ ಮಾತನ್ನು ಮೋದಿಯವರ ಗಮನಕ್ಕೂ ತಂದರು.

ಹರ್ಷವರ್ಧನ್ ಸಿಂಗ್ ದುಂಗಾರ್ ಪುರ್

ತಕ್ಷಣವೇ ದುಂಗಾರ್ ಪುರ್ ಮಾತಿಗೆ ಒಪ್ಪಿದ ಮೋದಿ ನೇರವಾಗಿ ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಯದುವೀರ್ ಜೊತೆ ಮಾತನಾಡುವಂತೆ ಸೂಚಿಸಿದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಯಡಿಯೂರಪ್ಪ ಟೀಂ ಯದುವೀರ್ ಅವರನ್ನು ಸಂಪರ್ಕಿಸಿ ಬಿಜೆಪಿಯಿಂದ ಟಿಕೆಟ್ ಆಫರ್ ನೀಡಿದರು. ಇದಕ್ಕೆ ಮಾವನ ಸಲಹೆಯಂತೆ ಯದುವೀರ್ ಅವರು ಕೂಡ ಒಪ್ಪಿಕೊಂಡರು.

ಹೀಗಾಗಿ ಮೈಸೂರಿನ ಮತ್ತೊಬ್ಬ ಮಹಾರಾಜ ಈಗ ಜನಸೇವೆಗೆ ಮುಂದಾಗಿದ್ದಾರೆ. ಈಗಾಗಲೇ ಮೈಸೂರು ಜನರೊಂದಿಗೆ ಬೆರೆತು ಅವರ ಕಷ್ಟ ದುಖಗಳಲ್ಲಿ ಭಾಗಿಯಾಗುತ್ತಿರುವ ಯದುವೀರ್ ಮತ್ತು ಪತ್ನಿ ತ್ರಿಷಿಕಾ ಕುಮಾರಿ ರಾಜಕಾರಣದ ಮೂಲಕ ಮತ್ತಷ್ಟು ಸೇವೆಗೆ ಸಿದ್ದರಾಗಿದ್ದಾರೆ. ಮತದಾರರ ನಿರ್ಧಾರ ಏನು ಎನ್ನುವುದು ಚುನಾವಣೆಯ ಬಳಿಕವಷ್ಟೇ ಗೊತ್ತಾಗಲಿದೆ.

– ಪ್ರೀತಮ್ ಕೆಮ್ಮಾಯಿ, ಬಿಟಿವಿ ನ್ಯೂಸ್ desk

ಇದನ್ನೂ ಓದಿ : ಚಿತ್ರೀಕರಣದ ವೇಳೆ ನಟಿ ರಾಗಿಣಿ ದ್ವಿವೇದಿ ಕಾಲಿಗೆ ಪೆಟ್ಟು..!

Leave a Comment

DG Ad

RELATED LATEST NEWS

Top Headlines

ಪ್ರಭಾಸ್‌ ಜೊತೆಗೆ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳನ್ನು ಘೋಷಿಸಿದ ಹೊಂಬಾಳೆ ಫಿಲಂಸ್‌..!

ಕನ್ನಡ ಚಿತ್ರಂಗಕ್ಕೆ ಮಾತ್ರ ಸೀಮಿತವಾಗದ ಹೊಂಬಾಳೆ ಫಿಲಂಸ್‌ ಸಂಸ್ಥೆ ಪರಭಾಷೆ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಕೆಜಿಎಫ್‌, ಕೆಜಿಎಫ್‌ 2, ಕಾಂತಾರ, ಸಲಾರ್‌, ಈಗ

Live Cricket

Add Your Heading Text Here