ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಜಾನಪದ ಸಿಂಗಿಂಗ್ ರಿಯಾಲಿಟಿ ಶೋ “ಭಾರತ್ ಕಾ ಅಮ್ರಿತ್ ಕಲಶ್”ಗೆ ವೆಂಕಟಾಗಿರಿಕೋಟೆ ಗ್ರಾಮ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೆ.ಚಿ ಅರುಣ್ ಕುಮಾರ್ ಅವರು ಆಯ್ಕೆಯಾಗಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.
ಈ ಕಾರ್ಯಕ್ರಮ ಭಾರತದ ಖ್ಯಾತ ಗಾಯಕರಾದ ಖೈಲಾಶ್ ಖೇರ್, ದೇಬೋಜಿತ್ ಸಹಾ, ಗಾಯತ್ರಿ ಅಶೋಕನ್ ಮತ್ತು ಸ್ನೇಹಾ ಕನ್ವಾಲ್ಕರ್ ಅವರಂತಹ ಹೆಸರಾಂತ ತೀರ್ಪುಗಾರರನ್ನು ಹೊಂದಿದೆ.
ಹಿಂದಿಯ ಪ್ರತಿಭಾವಂತ ಕಲಾವಿದ ಪ್ರೀತಮ್ ಪ್ಯಾರೆ ಅವರು ಈ ಸಂಗೀತ ರಿಯಾಲಿಟಿ ಶೋನ ನಿರೂಪಕರಾಗಿ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ಭಾರತ್ ಕಾ ಅಮ್ರಿತ್ ಕಲಶ್ ರಿಯಾಲಿಟಿ ಶೋ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7 ಗಂಟೆಗೆ DD NATIONAL ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
ಇದನ್ನೂ ಓದಿ : ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಬಿಗ್ ರಿಲೀಫ್ – ED ಕೇಸ್ ವಜಾಗೊಳಿಸಿದ ಸುಪ್ರೀಂಕೋರ್ಟ್..
Post Views: 251