Download Our App

Follow us

Home » ರಾಜಕೀಯ » ಪಾಕ್​​ ಜಿಂದಾಬಾದ್​ ಕೇಸ್​ನಲ್ಲಿ ಮೂವರು ಅರೆಸ್ಟ್​ : ರಹಸ್ಯ ಸಭೆ ನಡೆಸಿದ ಕಾಂಗ್ರೆಸ್ ನಾಯಕರು..!

ಪಾಕ್​​ ಜಿಂದಾಬಾದ್​ ಕೇಸ್​ನಲ್ಲಿ ಮೂವರು ಅರೆಸ್ಟ್​ : ರಹಸ್ಯ ಸಭೆ ನಡೆಸಿದ ಕಾಂಗ್ರೆಸ್ ನಾಯಕರು..!

ಬೆಂಗಳೂರು : ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಪ್ರಕರಣ ಸಂಬಂಧವಾಗಿ ಇದೀಗ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಈ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕರು ಅಲರ್ಟ್​ ಆಗಿ ರಹಸ್ಯ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬಿಜೆಪಿಗೆ ರಾಜಕೀಯ ದಾಳ ಆಗದಂತೆ ಕಾಂಗ್ರೆಸ್ ಮಾಸ್ಟರ್​​ ಪ್ಲಾನ್​​​ ಮಾಡಿದೆ.

ಪಾಕ್ ಪರ ಘೋಷಣೆ ಕೂಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಸತತ ವಿಚಾರಣೆ ಬಳಿಕ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಮುನಾವರ್, ಇಲ್ತಾಜ್, ಮೊಹಮ್ಮದ್ ಶಫಿ ನಾಶಿಪುಡಿ ಸೇರಿ ಮೂವರನ್ನ ಬಂದಿಸಿತ್ತು. ಬಳಿಕ ಬಂಧಿತ ಆರೋಪಿಗಳನ್ನ 39ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌ ಮೂವರು ಆರೋಪಿಗಳನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ರಹಸ್ಯ ಸಭೆಯ ಮೊರೆ ಹೋಗಿದ್ದಾರೆ. ತಾಜ್ ವೆಸ್ಟ್ ಎಂಡ್ ಹೊಟೇಲ್​​​ನಲ್ಲಿ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​​ ಸುರ್ಜೆವಾಲಾ ನೇತೃತ್ವದಲ್ಲಿ ಸುದೀರ್ಘ ಸಮಾಲೋಚನೆ ನಡೆದಿದೆ.

ಸುರ್ಜೆವಾಲಾ ದೆಹಲಿ ವಿಮಾನ ರದ್ದು ಮಾಡಿ ಉಳಿದುಕೊಂಡಿದ್ದು, ಪಾಕಿಸ್ತಾನ್ ಜಿಂದಾಬಾದ್ ಹೇಳಿಕೆ ಪ್ರಕರಣದ ಡ್ಯಾಮೇಜ್​ ಕಂಟ್ರೋಲ್​​ಗೆ​​ ಯತ್ನಿಸಿದ್ದಾರೆ. ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ಹೂಡಲು ಮೂವರು ನಾಯಕರ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ : ‘ಆದಿಪರ್ವ’ದ ಮೂಲಕ ಖ್ಯಾತಿ ಪಡೆದ ನಟ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮೀ ಕನ್ನಡಕ್ಕೆ ಎಂಟ್ರಿ..!

Leave a Comment

DG Ad

RELATED LATEST NEWS

Top Headlines

ಕಾಫಿನಾಡಲ್ಲಿ ಭೀಕರ ರಸ್ತೆ ಅಪಘಾತ – ಬೈಕ್​​ಗೆ ಡಿಕ್ಕಿ ಹೊಡೆದು ಸವಾರನನ್ನು 60 ಮೀಟರ್ ಎಳೆದೊಯ್ದ ಕಾರು..!

ಚಿಕ್ಕಮಗಳೂರು : ಕಾಫಿನಾಡಲ್ಲಿ ಎದೆ ಝಲ್ ಅನ್ನಿಸುವಂತಹ ಅಪಘಾತವೊಂದು ಸಂಭವಿಸಿದೆ. ಕಾರು ಮತ್ತು ಬೈಕ್​ ನಡುವೆ ನಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿಗೆ ಬೈಕ್​

Live Cricket

Add Your Heading Text Here