Download Our App

Follow us

Home » ಸಿನಿಮಾ » ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ – ನಮ್ರತಾಗೆ ಮದುವೆ ಆಯ್ತಾ…? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ನಮ್ರತಾ-ಕಾರ್ತಿಕ್ ಮದುವೆ ಫೋಟೋಸ್..!

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ – ನಮ್ರತಾಗೆ ಮದುವೆ ಆಯ್ತಾ…? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ನಮ್ರತಾ-ಕಾರ್ತಿಕ್ ಮದುವೆ ಫೋಟೋಸ್..!

ಬಿಗ್‌ಬಾಸ್‌ ಸೀಸನ್ 10ರ ವಿನ್ನರ್‌ ಕಾರ್ತಿಕ್‌ ಮಹೇಶ್‌ ಮತ್ತು ಬಿಗ್‌ಬಾಸ್‌ ಸ್ಪರ್ಧಿ ನಮ್ರತಾ ಗೌಡ ಮದುವೆ ಫೋಟೋಸ್ ಇದೀಗ ಸಖತ್ ವೈರಲ್ ಆಗುತ್ತಿದೆ. ಕಾರ್ತಿಕ್-ನಮ್ರತಾ ಡ್ರೆಡಿಷನಲ್ ಡ್ರೆಸ್‌ನಲ್ಲಿರುವ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಈ ಫೋಟೋಗಳ ಹಿಂದಿನ ಅಸಲಿಯತ್ತೇನು ಗೊತ್ತಾ? ಇವರಿಬ್ಬರು ಜಾಹೀರಾತಿನ ಚಿತ್ರೀಕರಣಕ್ಕಾಗಿ ಹೀಗೆ ಮದುವೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಜಾಹೀರಾತಿನಲ್ಲಿ ಮದುಮಗಳಾಗಿ ನಮ್ರತಾ ಗೌಡ ಮಿಂಚಿದರೆ, ವರನಾಗಿ ಕಾರ್ತಿಕ್‌ ಕಾಣಿಸಿಕೊಂಡಿದ್ದಾರೆ. ಸದ್ಯ ಇವರಿಬ್ಬರ ಮುದ್ದಾದ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಬಿಗ್‌ಬಾಸ್‌ ಕನ್ನಡ ಮನೆಯಲ್ಲಿ ಆರಂಭದಲ್ಲಿ ಇವರಿಬ್ಬರು ಸಾಕಷ್ಟು ಅನ್ಯೋನ್ಯವಾಗಿದ್ದರು. ಇದೇ ಕಾರಣಕ್ಕೆ ಇವರ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್‌ಗಳು, ಚರ್ಚೆಗಳು ನಡೆದಿದ್ದವು. ಇದೀಗ ಜಾಹೀರಾತಿಗಾಗಿ ಈ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

ಅಂದಹಾಗೆ ಈ ಜಾಹೀರಾತಿನಲ್ಲಿ ಕನ್ನಡದ ಪ್ರಖ್ಯಾತ ನಟಿ ಪ್ರೇಮಾ ಕೂಡ ಇದ್ದು, ಅವರ ಜೊತೆ ಕಾರ್ತಿಕ್ ಮತ್ತು ನಮ್ರತಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಿಗ್ ಬಾಸ್’ನಿಂದಲೇ ಕಾರ್ತಿಕ್ ಮತ್ತು ನಮ್ರತಾ ನಡುವೆ ಉತ್ತಮ ಸ್ನೇಹ ಇತ್ತು. ಒಂದೊಮ್ಮೆ, ನನಗೆ ಕಾರ್ತಿಕ್’ನಿಂದ ಯಾವತ್ತೂ ಅನ್’ಕಂಫರ್ಟೇಬಲ್ ಫೀಲ್ ಆಗಿಲ್ಲ ಎಂದು ಸ್ವತಃ ನಮ್ರತಾನೇ ಹೇಳಿಕೊಂಡಿದ್ದರು. ಇದೀಗ ಜ್ಯುವೆಲ್ಲರಿ ಶಾಪ್​​ನ ಪ್ರಚಾರಕ್ಕಾಗಿ ಇವರಿಬ್ಬರು ರೀಲ್‌ನಲ್ಲಿ ಜೋಡಿಯಾಗಿ ಮಿಂಚಿದ್ದಾರೆ.

ಇದನ್ನೂ ಓದಿ : ರಾಜಾಜಿನಗರ ಮೆಟ್ರೋದಲ್ಲಿ ರೈತನಿಗೆ ಅಪಮಾನ ಪ್ರಕರಣ : ಮಾನವ ಹಕ್ಕುಗಳ ಆಯೋಗದಿಂದ BMRCLಗೆ ನೋಟಿಸ್​..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here