ಕೇರಳ : ಕೇರಳದ ವಯನಾಡಿನಲ್ಲಿ ಆನೆ ತುಳಿತಕ್ಕೆ ಬಲಿಯಾದ ಕೇರಳ ವ್ಯಕ್ತಿಗೆ ಕರ್ನಾಟಕದಿಂದ ಪರಿಹಾರ ನೀಡಲಾಗಿದೆ. ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಆನೆ ತುಳಿತಕ್ಕೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ಕರ್ನಾಟಕದ ಸರ್ಕಾರದಿಂದ ಪರಿಹಾರ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಕೇರಳದಲ್ಲಿ ಆನೆ ದಾಳಿಗೆ ಕರ್ನಾಟಕದಿಂದ ಪರಿಹಾರ ಯಾಕೆ ಎಂದು ಪ್ರಶ್ನಿಸಲಾಗಿದೆ. ಟ್ವೀಟ್ -X ಮೂಲಕ ರಾಜ್ಯ ಬಿಜೆಪಿ ಈ ವಿರುದ್ಧ ಕಿಡಿಕಾರಿದೆ. ಕೇರಳ ಸರ್ಕಾರ ನಂದಿನಿ ಹಾಲು ಮಾರಾಟಕ್ಕೆ ಅವಕಾಶ ಕೊಟ್ಟಿಲ್ಲ, KSRTC ಹೆಸರನ್ನೂ ಕಿತ್ತುಕೊಳ್ಳಲು ಕೇರಳ ಪ್ರಯತ್ನಿಸಿತ್ತು. ಹೀಗಿದ್ದರೂ ಕನ್ನಡಿಗರ ತೆರಿಗೆ ಹಣ ಕೇರಳಕ್ಕೆ ಕೊಡಲು ಹೊರಟಿದೆ.
ರಾಹುಲ್ ಗಾಂಧಿಯವರ ಕ್ಷೇತ್ರಕ್ಕೆ ಅಷ್ಟೊಂದು ಕಾಳಜಿಯೇ..? ಕೆಪಿಸಿಸಿ ಕಚೇರಿಯಿಂದ ಬೌನ್ಸ್ ಆಗದ ಚೆಕ್ ಕೊಡಬಹುದಿತ್ತು. ಕೈ ನಾಯಕರ ಅಕ್ರಮ ಹಣವನ್ನಾದರೂ ಕೊಡಬಹುದಿತ್ತು, ವರ್ಗಾವಣೆ ದಂಧೆಯ ಕಮಾಯಿಯಲ್ಲಿ ಸ್ವತಃ ಸಿಎಂ ದಾನ ಮಾಡಬಹುದಿತ್ತು. ಬರಗಾಲ ಬಂದು ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ನಯಾ ಪೈಸೆ ಕೊಟ್ಟಿಲ್ಲ, ಈಗ ರಾಹುಲ್ ಗಾಂಧಿ ಮೆಚ್ಚಿಸಲು ಕೇರಳ ವ್ಯಕ್ತಿಗೆ ಹಣ ಕೊಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಮಣಿಪಾಲ : ವಿದ್ಯಾರ್ಥಿ ಕಟ್ಟಡದಿಂದ ಜಿಗಿದು ಆ*ತ್ಮಹ*ತ್ಯೆ ಮಾಡಿಕೊಂಡ ವಿಡಿಯೋ ವೈರಲ್..!