ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ಸೇನೆ ಪರವಾಗಿ ಹೋರಾಡುತ್ತಿದ್ದ 12 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ. ಇನ್ನು 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ರಷ್ಯಾ ಪರವಾಗಿ ಹೋರಾಡುತ್ತಿರುವ ಒಟ್ಟು 126 ಭಾರತೀಯರಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ ಮತ್ತು 16 ಭಾರತೀಯರು ಕಾಣೆಯಾಗಿದ್ದಾರೆ. ಇದುವರೆಗೂ 96 ಮಂದಿ ಭಾರತಕ್ಕೆ ವಾಪಾಸ್ ಬಂದಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಅಲ್ಲದೇ 18 ಮಂದಿ ರಷ್ಯಾ ಸೇನೆಯಲ್ಲಿ ಉಳಿದುಕೊಂಡಿದ್ದು, ಈ ಪೈಕಿ 16 ಮಂದಿ ಎಲ್ಲಿದ್ದಾರೆ ಅನ್ನೋ ಮಾಹಿತಿ ತಿಳಿದಿಲ್ಲ. ರಷ್ಯಾದ ಸೇನಾಧಿಕಾರಿಗಳು ಅವರು ಕಾಣೆಯಾಗಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಉಳಿದ ಭಾರತೀಯರನ್ನ ಶೀಘ್ರವೇ ಭಾರತಕ್ಕೆ ಕಳುಹಿಸುವಂತೆ ಹೇಳಿದ್ದೇವೆ ಎಂದು ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ – ಆದೇಶ ಕಾಯ್ದಿರಿಸಿದ ಹೈಕೋರ್ಟ್..!
Post Views: 51