ಮೈಸೂರು : ಆಸ್ತಿ ಕಬಳಿಸಲು ಸುಳ್ಳು ವಿಲ್ಗಳನ್ನು ಸೃಷ್ಟಿಸಿದ ಆರೋಪ ಸಂಬಂಧ ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಶಿವಮೂರ್ತಿ ಪುತ್ರ ಪ್ರತೀಪ್ ಪತ್ನಿ ನೇಹಾ ಮಾವನ ವಿರುದ್ಧ ದೂರು ನೀಡಿದ್ದಾರೆ. 2021ರ ಡಿಸೆಂಬರ್ 24ರಂದು ಪ್ರತೀಪ್ ಆತ್ಮಹತ್ಯೆಗೆ ಶರಣಾಗಿದ್ದು, ಪ್ರತೀಪ್ ಮೃತಪಡುವ ನಾಲ್ಕು ದಿನದ ಹಿಂದೆ ಶಿವಮೂರ್ತಿ ಅವರು ಕೋಟ್ಯಂತರ ರೂಪಾಯಿ ಮೌಲ್ಯದ 39 ಆಸ್ತಿಗೆ ಸುಳ್ಳು ವಿಲ್ ಸೃಷ್ಟಿಸಿದ ಆರೋಪವಿದೆ. ಶಿವಮೂರ್ತಿ ಹಾಗೂ ಇಬ್ಬರ ಹೆಣ್ಣು ಮಕ್ಕಳ ಸಹಿತ ಐವರ ವಿರುದ್ದ ದೂರು ದಾಖಲಾಗಿದೆ. ಶಿವಮೂರ್ತಿ ಮಕ್ಕಳಾದ ಪದ್ಮಿನಿ, ಕವಿತಾ, ತಂಗಿ ಮಗ ರವಿಕಿರಣ್ ಹಾಗೂ ಸಹಕರಿಸಿದ ವಕೀಲ ಕುಮಾರ್ ವಿರುದ್ದ ಸೊಸೆ ನೇಹಾ ದೂರು ನೀಡಿದ್ದಾರೆ.
ಸೊಸೆಗೆ ಸಿಗಬೇಕಾದ ಆಸ್ತಿ ಸಿಗದಂತೆ ಮಾಡಲು ಜೆಡಿಎಸ್ ಮುಖಂಡ ಸುಳ್ಳು ವಿಲ್ಗಳನ್ನು ಸೃಷ್ಟಿಸಿದ್ದು, ಈ ಸಂಬಂಧ ಜೆಡಿಎಸ್ ಮುಖಂಡ ಶಿವಮೂರ್ತಿ ಬಂಧನದ ಭೀತಿ ಎದುರಿಸುತ್ತಿದ್ದಾರೆ. FIR ದಾಖಲಾಗುತ್ತಿದ್ದಂತೆ ಶಿವಮೂರ್ತಿ ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ : ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ..!