Download Our App

Follow us

Home » ರಾಜ್ಯ » ಏಕಕಾಲದಲ್ಲಿ ಎರಡೆರಡು ಪರೀಕ್ಷೆಗಳು – ಬೆಂಗಳೂರು ವಿವಿ ಯಡವಟ್ಟಿಗೆ ಶಾಸಕ ಸುರೇಶ್ ಕುಮಾರ್​ ಅಸಮಾಧಾನ!

ಏಕಕಾಲದಲ್ಲಿ ಎರಡೆರಡು ಪರೀಕ್ಷೆಗಳು – ಬೆಂಗಳೂರು ವಿವಿ ಯಡವಟ್ಟಿಗೆ ಶಾಸಕ ಸುರೇಶ್ ಕುಮಾರ್​ ಅಸಮಾಧಾನ!

ಬೆಂಗಳೂರು : ಏಕಕಾಲದಲ್ಲಿ ಬಿ.ಕಾಂ ಪರೀಕ್ಷೆ ಹಾಗೂ ಸಿಎ ಪರೀಕ್ಷೆಗಳು ನಡೆಯುತ್ತಿದ್ದು ಬೆಂಗಳೂರು ವಿವಿ ಯಡವಟ್ಟಿಗೆ ವಿದ್ಯಾರ್ಥಿಗಳು ಥಂಡಾ ಹೊಡೆದಿದ್ದಾರೆ. ಸಿಎ ಎಕ್ಸಾಂ ದಿನವೇ ಬಿಕಾಂ ಪರೀಕ್ಷೆ ನಡೆಸುತ್ತಿರುವ ಬೆಂಗಳೂರು ವಿವಿ ನಿರ್ಧಾರಕ್ಕೆ ಶಾಸಕ ಸುರೇಶ್ ಕುಮಾರ್​ ಅಸಮಾಧಾನ ಹೊರಹಾಕಿದ್ದಾರೆ. ಇಂದುಸಿಎ ಪರೀಕ್ಷೆ ಬರೆಯುವುದೋ ಅಥವಾ ಬಿಕಾಂ ಪರೀಕ್ಷೆ ಬರೆಯೋದೋ ಎನ್ನುವ ಆತಂಕದಲ್ಲಿ ವಿದ್ಯಾರ್ಥಿಗಳು ಇದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುರೇಶ್ ಕುಮಾರ್ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ನನ್ನ ಮನೆಗೆ ಸಂಜೆ ಓರ್ವ ಫಸ್ಟ್ ಬಿಕಾಂ ವಿದ್ಯಾರ್ಥಿನಿ ತನ್ನ ತಂದೆಯ ಜೊತೆ ಬಂದಿದ್ದರು. ಇಂದು ಬೆಳಗ್ಗೆ (16.1.2025, ಗುರುವಾರ) 9.30 ಗಂಟೆಗೆ ಅವರಿಗೆ ಮೊದಲನೇ ಬಿಕಾಂನ ಪರೀಕ್ಷೆ ನಿಗದಿಯಾಗಿತ್ತು. ಆಕೆ ಸಿಎ ಶಿಕ್ಷಣವನ್ನು ಸಹ ಪಡೆಯುತ್ತಿರುವುದರಿಂದ, ಸಿಎ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದೆ. ಆದರೆ ಸಂಜೆ 4:30ಗೆ ಆಕೆಯ ಮೊಬೈಲ್​ಗೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದಿಂದ ಈ ಕೆಳಕಂಡ ಮೆಸೇಜ್ ಬಂದು “ಬೆಳಗ್ಗೆ ಒಂಬತ್ತು ಗಂಟೆಗೆ ನಿಗದಿಯಾಗಿದ್ದ ಪರೀಕ್ಷೆಯನ್ನು ಮಧ್ಯಾಹ್ನ 2.00 ಗಂಟೆಗೆ (ಧಿಡೀರನೆ ಯಾವುದೇ ಕಾರಣವನ್ನೂ ನೀಡದೆ) ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.

ಸುರೇಶ್ ಕುಮಾರ್, ಶಾಸಕ
ಸುರೇಶ್ ಕುಮಾರ್, ಶಾಸಕ

ವಿದ್ಯಾರ್ಥಿನಿ ಮತ್ತು ತಂದೆ ಗಾಬರಿಯಿಂದ ನನ್ನ ಬಳಿ ಬಂದರು. ನಾನು ತಕ್ಷಣ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಎಂಸಿ ಸುಧಾಕರ್ ಜೊತೆಗೆ ಮಾತನಾಡಿ ಈ ಗೊಂದಲವನ್ನು ವಿದ್ಯಾರ್ಥಿಗಳ ದೃಷ್ಟಿಯಿಂದ ಪರಿಹರಿಸಬೇಕೆಂದು ಕೋರಿಕೊಂಡೆ. ಅವರು ದೆಹಲಿಯಲ್ಲಿದ್ದಿದ್ದರಿಂದ ಅವರ ಆಪ್ತ ಕಾರ್ಯದರ್ಶಿ ನನ್ನ ಜೊತೆ ಮಾತನಾಡಿ ಯುನಿವರ್ಸಿಟಿಯ ಕುಲಸಚಿವರೊಂದಿಗೆ ಕಾನ್ಫರೆನ್ಸ್ ಕಾಲ್ ತೆಗೆದುಕೊಂಡರು.

ಕುಲಸಚಿವರು ತಮ್ಮದೇ ಆದ ರೀತಿಯಲ್ಲಿ ಇಂದು ಬೆಳಗ್ಗೆ ಪರೀಕ್ಷೆಯ ಮುಂದೂಡಿಕೆ ಅವಶ್ಯಕವೆಂದು ವಾದಿಸಿದರು. ಹಾಗಾದರೆ ಈ ವಿದ್ಯಾರ್ಥಿನಿ ಮತ್ತು ಇಂತಹ ಹಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದೇ ಸಮಯದಲ್ಲಿ ನಡೆಯಲಿರುವ ಯಾವ ಪರೀಕ್ಷೆಯನ್ನು ತೆಗೆದುಕೊಳೋದು ಎಂಬುದಾಗಿ ಪ್ರಶ್ನಿಸಿದ್ದಾರೆ.

ಒಟ್ಟಾರೆಯಾಗಿ ಬೆಂಗಳೂರು ವಿವಿಯಿಂದ ಇಂದು ಮಧ್ಯಾಹ್ನ ದಿಢೀರ್ ನಾಳೆ 9 ಗಂಟೆಗೆ ನಿಗದಿಯಾಗಿದ್ದಂತ ಬಿಕಾಂ ಪರೀಕ್ಷೆಯನ್ನು ಸಿಎ ಪರೀಕ್ಷೆಯ ಮಧ್ಯಾಹ್ನ 2 ಗಂಟೆಯ ಸಮಯಕ್ಕೇ ಬದಲಾವಣೆ ಮಾಡಿ ಮಹಾ ಎಡವಟ್ಟು ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಆ ಮೂಲಕ ಗೊಂದಲಕ್ಕೆ ದೂಡಿ, ಭವಿಷ್ಯದ ಜೊತೆಗೆ ಚೆಲ್ಲಾಟ ಆಡುವಂತ ಕೆಲಸ ಮಾಡಿದೆ. ಈ ಕೂಡಲೇ ಪರೀಕ್ಷೆಯ ಸಮಯವನ್ನು ಬದಲಾವಣೆ ಮಾಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಯಾವುದೇ ವಿಶ್ವವಿದ್ಯಾನಿಲಯ ಈ ಕೇವಲ 24 ಗಂಟೆ ಮುಂಚೆ ಮೊದಲೇ ನಿಗದಿಯಾಗಿರುವ ಪರೀಕ್ಷೆಯನ್ನು ಹಿಂದೆ ಮುಂದೆ ನೋಡದೆ ಮುಂದೂಡುವುದು ವಿಶ್ವವಿದ್ಯಾನಿಲಯದ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಈ ವಿದ್ಯಾರ್ಥಿನಿ ಮತ್ತು ಇಂಥ ವಿದ್ಯಾರ್ಥಿನಿಯರಿಗೆ ಪರ್ಯಾಯ ದಿನಾಂಕದಲ್ಲಿ ಸಿಎ ಪರೀಕ್ಷೆ ತೆಗೆದುಕೊಳ್ಳಲು ಅನುಮತಿ ಕೊಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಬೇಕು ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದೇನೆ ಎಂದು ಶಾಸಕ ಸುರೇಶ್ ಕುಮಾರ್​ ಆಗ್ರಹಿಸಿದ್ದಾರೆ. 

ಇದನ್ನೂ ಓದಿ : ಕಾಫಿನಾಡಲ್ಲಿ ಭೀಕರ ರಸ್ತೆ ಅಪಘಾತ – ಬೈಕ್​​ಗೆ ಡಿಕ್ಕಿ ಹೊಡೆದು ಸವಾರನನ್ನು 60 ಮೀಟರ್ ಎಳೆದೊಯ್ದ ಕಾರು..!

 

Leave a Comment

DG Ad

RELATED LATEST NEWS

Top Headlines

ನನ್ನ ವಿಡಿಯೋ, ಫೋಟೋ ನನಗೆ ಕೊಡಿ – ಕೋರ್ಟ್​ನಲ್ಲಿ ಪ್ರಜ್ವಲ್ ರೇವಣ್ಣ ಮನವಿ..!

ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪದ ಪ್ರಕರಣದಡಿ ಜೈಲಿನಲ್ಲಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದ ಪ್ರಮುಖ ಸಾಕ್ಷಿ ಆಗಿರುವ ವಿಡಿಯೋ

Live Cricket

Add Your Heading Text Here