ಚಿಕ್ಕಮಗಳೂರು : ಕಾಫಿನಾಡಲ್ಲಿ ಎದೆ ಝಲ್ ಅನ್ನಿಸುವಂತಹ ಅಪಘಾತವೊಂದು ಸಂಭವಿಸಿದೆ. ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರಿಗೆ ಬೈಕ್ ಸಿಲುಕಿ 60 ಮೀಟರ್ ಎಳೆದೊಯ್ದಿದ್ದು, ಅಷ್ಟೇ ಅದಲ್ಲದೇ ರಸ್ತೆಗೆ ಬೈಕ್ ಎಳೆದೊಯ್ದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿರುವ ಘಟನೆ ನಗರದ ಕುರುವಂಗಿ ರಸ್ತೆಯ ಬಳಿ ಘಟನೆ ನಡೆದಿದೆ. ರೇಷನ್ ಅಂಗಡಿ ಕೆಲಸಗಾರ ರಾಜಶೇಖರ್ ಕೆಲಸ ಮುಗಿಸಿ ಹೋಗುವಾಗ ಈ ದುರ್ಘಟನೆ ನಡೆದಿದೆ.
ಅಪಘಾತದ ಬಳಿಕ ಕಾರು ನಿಲ್ಲಿಸದೇ ಹೋದ ಜೆನ್ ಕಾರು ಚಾಲಕ ಪರಾರಿಯಾಗಿದ್ದು, ಈ ಅಪಘಾತದಿಂದ ಸೊಂಟದ ಮೂಳೆ ಮುರಿದುಕೊಂಡಿರೋ ರಾಜಶೇಖರ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ‘ಲಕ್ಷ್ಮೀಪುತ್ರ’ನಾದ ಸ್ಯಾಂಡಲ್ವುಡ್ ಉಪಾಧ್ಯಕ್ಷ ಚಿಕ್ಕಣ್ಣ – ಸಾಥ್ ಕೊಟ್ಟ ಎ.ಪಿ ಅರ್ಜುನ್..!
Post Views: 459