Download Our App

Follow us

Home » ಸಿನಿಮಾ » ಬಿಗ್​​ಬಾಸ್​​ನಲ್ಲಿ ಮಿಡ್​​ನೈಟ್ ಎಲಿಮಿನೇಷನ್ – ಸ್ಟ್ರಾಂಗ್ ಕಂಟೆಸ್ಟ್ ಗೌತಮಿ ಜಾಧವ್ ಔಟ್ ಆದ್ರಾ?

ಬಿಗ್​​ಬಾಸ್​​ನಲ್ಲಿ ಮಿಡ್​​ನೈಟ್ ಎಲಿಮಿನೇಷನ್ – ಸ್ಟ್ರಾಂಗ್ ಕಂಟೆಸ್ಟ್ ಗೌತಮಿ ಜಾಧವ್ ಔಟ್ ಆದ್ರಾ?

ಬಿಗ್‌ಬಾಸ್ ಕನ್ನಡ ಸೀಸನ್‌ 11ರ ಗ್ಯ್ರಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಕಳೆದ ವಾರ ಟಿಕೆಟ್‌ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ನಡೆಸಿದ್ದ ಸ್ಪರ್ಧಿಗಳು ಈ ವಾರ ಮಧ್ಯರಾತ್ರಿ ಎಲಿಮಿನೇಷನ್​​ನಿಂದ ಪಾರಾಗಲು ಹೋರಾಡಿದ್ದಾರೆ. ಟಿಕೆಟ್‌ ಟು ಫಿನಾಲೆಗೆ ಹನುಮಂತ ಆಯ್ಕೆಯಾಗಿದ್ದರೆ, ಮಧ್ಯರಾತ್ರಿ ಎಲಿಮಿನೇಷನ್​​ನಿಂದ ಧನರಾಜ್​​ ಬಚಾವ್​ ಆಗಿದ್ದಾರೆ. ಇದೀಗ ಬಿಗ್‌ಬಾಸ್‌ ಮನೆಯಿಂದ ಪ್ರಬಲ ಸ್ಪರ್ಧಿಯಾದ ಗೌತಮಿ ಜಾಧವ್ ಆಚೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಬಿಗ್​ಬಾಸ್ ಈ ಮೊದಲೇ ಮಿಡ್​ವೀಕ್ ಎಲಿಮಿನೇಷನ್ ಖಚಿತ ಅನ್ನೋದನ್ನ ಘೋಷಿಸಿತ್ತು. ಮೊದಲೇ ಸುಳಿವು ಕೊಟ್ಟಂತೆ ಇಂದು ಬಿಗ್​ಬಾಸ್ ಮನೆಯಲ್ಲಿ ಮಧ್ಯರಾತ್ರಿ ಎಲಿಮಿನೇಷನ್ ನಡೆಯಲಿದೆ. ಗೌತಮಿ, ಮಂಜು, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ ಹಾಗೂ ರಜತ್ ಈ 6 ಮಂದಿಯಲ್ಲಿ ಗೌತಮಿಗೆ ಬಿಗ್​ಬಾಸ್ ಮನೆಯಲ್ಲಿ ಈ ದಿನ ಕಟ್ಟ ಕಡೆಯ ರಾತ್ರಿಯಾಗುವ ಸಾಧ್ಯತೆಯಿದೆ.

ಇಂದು ಮಿಡ್​ನೈಟ್ ಎಲಿಮಿನೇಷನ್​​ನಲ್ಲಿ ಬಿಗ್‌ ಬಾಸ್‌ ಮನೆಯಿಂದ ಸತ್ಯ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್‌ ಔಟ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಇದು ನಿಜಾನಾ? ಸುಳ್ಳಾ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಇದನ್ನೂ ಓದಿ : ಸ್ಯಾಂಡಲ್​ವುಡ್​​ನಲ್ಲಿ ‘ಮಲ್ಟಿ’ ಸ್ಟಾರ್ಸ್​ ಹಂಗಾಮಾ – ಸ್ವಾತಂತ್ರ್ಯ ದಿನಾಚರಣೆಗೆ ಬಹುನಿರೀಕ್ಷಿತ ‘45’ ಸಿನಿಮಾ ರಿಲೀಸ್..!

Leave a Comment

DG Ad

RELATED LATEST NEWS

Top Headlines

ಕಾಫಿನಾಡಲ್ಲಿ ಭೀಕರ ರಸ್ತೆ ಅಪಘಾತ – ಬೈಕ್​​ಗೆ ಡಿಕ್ಕಿ ಹೊಡೆದು ಸವಾರನನ್ನು 60 ಮೀಟರ್ ಎಳೆದೊಯ್ದ ಕಾರು..!

ಚಿಕ್ಕಮಗಳೂರು : ಕಾಫಿನಾಡಲ್ಲಿ ಎದೆ ಝಲ್ ಅನ್ನಿಸುವಂತಹ ಅಪಘಾತವೊಂದು ಸಂಭವಿಸಿದೆ. ಕಾರು ಮತ್ತು ಬೈಕ್​ ನಡುವೆ ನಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿಗೆ ಬೈಕ್​

Live Cricket

Add Your Heading Text Here