ಬೆಂಗಳೂರು : ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಾನುವಾರುಗಳ ಮಾಲೀಕರಿಗೆ ಇಂದು ಮೂರು ಹಸುಗಳನ್ನು ನೀಡಿದ್ದಾರೆ.
ಗಾಯಗೊಂಡಿದ್ದ ಹಸುವಿನ ಮಾಲೀಕರಾಗಿರುವ ಕರ್ಣನ ತಾಯಿ, ಸವಾರಿ ಅಮ್ಮಾಳ್ ಮತ್ತು ಅವರ ಸಹೋದರಿ ಅಮುದಾ ಅವರಿಗೆ 3 ಲಕ್ಷ ರೂಪಾಯಿ ಮೌಲ್ಯದ 3 ಹೊಸ ಹಸುಗಳನ್ನು ಜಮೀರ್ ಅಹ್ಮದ್ ಖಾನ್ ಕೊಟ್ಟಿದ್ದಾರೆ.
ಚಾಮರಾಜಪೇಟೆಯ ವಿನಾಯಕನಗರ ಪ್ರದೇಶದಲ್ಲಿ ಬಿಹಾರದ ಚಂಪಾರಣ್ ಮೂಲದ ಶೇಖ್ ನಸ್ರು ಎಂಬಾತ ಹಸು ಕೆಚ್ಚಲು ಕತ್ತರಿಸಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಶೇಖ್ ನಸ್ರು ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023ರ ಸೆಕ್ಷನ್ 325 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ : “ಬಲರಾಮನ ದಿನಗಳು” ಚಿತ್ರದಲ್ಲಿ ಬಹುಭಾಷಾ ನಟ ಅತುಲ್ ಕುಲಕರ್ಣಿ – ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ..!
Post Views: 143