Download Our App

Follow us

Home » ಅಪರಾಧ » ಬೆಂಗಳೂರು : ಸ್ನೇಹಿತನ ಜೊತೆ ಮಾಲ್​​ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಮಹಿಳೆ ಮನೆ ಮೇಲೆ ದಾಳಿ..!

ಬೆಂಗಳೂರು : ಸ್ನೇಹಿತನ ಜೊತೆ ಮಾಲ್​​ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಮಹಿಳೆ ಮನೆ ಮೇಲೆ ದಾಳಿ..!

ಬೆಂಗಳೂರು : ಸ್ನೇಹಿತನ ಜೊತೆ ಮಾಲ್​​ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಮಹಿಳೆಯ ಮನೆ ಮೇಲೆ ದಾಳಿ ಮಾಡಿರುವ ಘಟನೆ ನಗರದ ಕೊತ್ತನೂರು ಬಳಿಯ ಬಿಳಿಶಿವಾಲೆ ಬಳಿ ನಡೆದಿದೆ.



ಮಹಿಳೆ ಮನೆ ಮೇಲೆ ಮೂವರು ದಾಳಿ ನಡೆಸಿ ಕಿಟಕಿ ಗಾಜು ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಎರಡು ಕಾರಿನ ಗಾಜು, ಬೈಕ್ ಜಖಂಗೊಳಿಸಿದ್ದಾರೆ. ಫೆಬ್ರುವರಿ 2ರಂದು ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದೆ.

ಶರಣ್ ಎಂಬಾತನ ಜೊತೆ ಮಹಿಳೆ ಆತ್ಮೀಯವಾಗಿದ್ದು, ಶರಣ್ ಹಾಗೂ ಮಹಿಳೆ ಫೆಬ್ರುವರಿ 2ರಂದು ಮಾಲ್ ನಲ್ಲಿ ಜೊತೆಯಲ್ಲಿದ್ದರು. ಹಾಗಾಗಿ ಮಹಿಳೆಯ ಮನೆ ಮೇಲೆ ದಾಳಿ ಮಾಡಿರುವ ಆರೋಪ ವ್ಯಕ್ತವಾಗಿದೆ.

ಇಬ್ಬರು ವ್ಯಕ್ತಿಗಳು ಹಾಗೂ ಓರ್ವ ಮಹಿಳೆಯಿಂದ ದಾಳಿ ಆರೋಪ ಕೇಳಿಬಂದಿದ್ದು, ರಾತ್ರೋರಾತ್ರಿ ಮೂವರು ಮನೆಗೆ ನುಗ್ಗಿ ದೊಣ್ಣೆಗಳಿಂದ ಹೊಡೆದು ಕಿಟಕಿ ಗಾಜು, ಕಾರು ಬೈಕ್ ಜಖಂ ಮಾಡಿದ್ದಾರೆ. ಜಖಂಗೊಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ

ಈ ಬಗ್ಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದು, ದೂರು ಪಡೆದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಗಲಾಟೆಯ ನಿಖರ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ವಿಜಯಪುರ, ದೇವನಹಳ್ಳಿಯಲ್ಲಿ ಸಚಿವ ಕೆ.ಹೆಚ್​.ಮುನಿಯಪ್ಪ ನೇತೃತ್ವದಲ್ಲಿ ಬೃಹತ್​ ಗ್ಯಾರಂಟಿ ಸಮಾವೇಶ..!

Leave a Comment

DG Ad

RELATED LATEST NEWS

Top Headlines

ಪ್ರಭಾಸ್‌ ಜೊತೆಗೆ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳನ್ನು ಘೋಷಿಸಿದ ಹೊಂಬಾಳೆ ಫಿಲಂಸ್‌..!

ಕನ್ನಡ ಚಿತ್ರಂಗಕ್ಕೆ ಮಾತ್ರ ಸೀಮಿತವಾಗದ ಹೊಂಬಾಳೆ ಫಿಲಂಸ್‌ ಸಂಸ್ಥೆ ಪರಭಾಷೆ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಕೆಜಿಎಫ್‌, ಕೆಜಿಎಫ್‌ 2, ಕಾಂತಾರ, ಸಲಾರ್‌, ಈಗ

Live Cricket

Add Your Heading Text Here