ಶಿರಸಿ : ಶಿರಸಿಯ ನರಬೈಲ್ ಸೋಮೇಶ್ವರ ಶಿವಲಿಂಗದ ಮೇಲೆ ಬಳಪದಿಂದ ಇಂಗ್ಲೀಷ್ ಅಕ್ಷರ ಬರೆದು ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಗರ್ಭಗುಡಿಯಲ್ಲಿನ ಶಿವಲಿಂಗದ ಮೇಲೆ ಜೆ.ಇ. ಎಸ್ 2024 ,2026 ಎಂಬ ಇಂಗ್ಲಿಷ್ ಅಕ್ಷರ ಬರೆಯಲಾಗಿದೆ.
ಪೂಜೆಗೆ ಬಂದ ಪುರೋಹಿತರು ಇದನ್ನು ಗಮನಿಸಿದ್ದಾರೆ. ಗರ್ಭಗುಡಿಯ ಬಾಗಿಲು ಮುರಿದು ಚಾಕ್ ಪೀಸ್ ನಿಂದ ಬರೆದು ಹೋಗಲಾಗಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ರು. ಸ್ಥಳೀಯರು ಪೊಲೀಸ್ ಗಮನಕ್ಕೆ ತಂದಿದ್ದು ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ದೇವಸ್ಥಾನದಲ್ಲಿ ಯಾವುದೇ ಕಳ್ಳತನವಾಗಿಲ್ಲ, ಯಾರೂ ಇಲ್ಲದ ವೇಳೆ ಈ ರೀತಿ ವಿರೂಪ ಮಾಡಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಭೂ ವಿಜ್ಞಾನಿ ಕೊಲೆ ಪ್ರಕರಣ : ನ್ಯಾಯಾಲಯಕ್ಕೆ 600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ..!
Post Views: 294