Download Our App

Follow us

Home » ರಾಷ್ಟ್ರೀಯ » ಭಾರತದಲ್ಲೂ ಜೋರಾಯ್ತು ಹೊಸ ವೈರಸ್​ ಕಾಟ – ಒಂದಲ್ಲ..ಎರಡಲ್ಲ 6 HMPV ಕೇಸ್ ಪತ್ತೆ..!

ಭಾರತದಲ್ಲೂ ಜೋರಾಯ್ತು ಹೊಸ ವೈರಸ್​ ಕಾಟ – ಒಂದಲ್ಲ..ಎರಡಲ್ಲ 6 HMPV ಕೇಸ್ ಪತ್ತೆ..!

ಬೆಂಗಳೂರು : ಚೀನಾದಲ್ಲಿ HMPV ಹರಡುತ್ತಿರುವ ಸುದ್ದಿಗಳು ಎಲ್ಲೆಡೆ ಆತಂಕ ಮೂಡಿಸುತ್ತಿದ್ದಂತೆ ಇದೀಗ ಭಾರತಕ್ಕೂ ಈ ಮಾರಣಾಂತಿಕ ವೈರಸ್ ಕಾಲಿಟ್ಟಿದೆ. ಇದೀಗ ಭಾರತದಲ್ಲಿ ಒಂದಲ್ಲ.. ಎರಡಲ್ಲ 6 HMPV ಪ್ರಕರಣಗಳು ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿದೆ.

ಕರ್ನಾಟಕದಲ್ಲಿ-2, ತಮಿಳುನಾಡಿನಲ್ಲಿ 2 ಕೇಸ್​ ಹಾಗೂ ಗುಜರಾತ್​​​, ಪಶ್ಚಿಮ ಬಂಗಾಳದಲ್ಲಿ ತಲಾ 1 ಕೇಸ್​ ಪತ್ತೆಯಾಗಿದೆ. ಒಂದು ವರ್ಷದ ಒಳಗಿನ ಮಕ್ಕಳಲ್ಲೇ ವೈರಸ್​ ಹೆಚ್ಚಾಗ್ತಿದ್ದು, ಎಲ್ಲಾ ರಾಜ್ಯಗಳಲ್ಲೂ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈಗಾಗಲೇ ಮಹಾರಾಷ್ಟ್ರ, ಕೇರಳ ಸೇರಿ ಹಲವೆಡೆ ಅಲರ್ಟ್​ ಆಗಿದ್ದಾರೆ.

ಒಂದೂ ಕೇಸ್​ ಬರದೇ ಇದ್ರೂ ಕೇರಳದಲ್ಲಿ ಮಾಸ್ಕ್ ಧರಿಸಲು​​​​ ಸೂಚನೆ ನೀಡಿದ್ದಾರೆ. ಇನ್ನು ಆಸ್ಪತ್ರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಾಸ್ಕ್​​ ಜಾರಿಯಾಗಿದ್ದು, ಕರ್ನಾಟಕದಲ್ಲೂ ಆರೋಗ್ಯ ಸಚಿವರು ಎಮರ್ಜೆನ್ಸಿ ಮೀಟಿಂಗ್​​ ಕರೆದು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ‘ಗೋಲ್ಡ್ ಬ್ಯೂಟಿ’ಯಿಂದ ಸಂಕಷ್ಟಕ್ಕೆ ಸಿಲುಕಿದ್ರಾ MLA ವಿನಯ್ ಕುಲಕರ್ಣಿ? ಯಾವುದೇ ಕ್ಷಣ ನೋಟಿಸ್ ಸಾಧ್ಯತೆ!

Leave a Comment

DG Ad

RELATED LATEST NEWS

Top Headlines

ಕಾಂಗ್ರೆಸ್‌ನಲ್ಲಿ ಕೋಲಾಹಲ ಎಬ್ಬಿಸಿದ ಡಿನ್ನರ್ ಪಾಲಿಟಿಕ್ಸ್ – ದಿಢೀರ್ CLP ಮೀಟಿಂಗ್ ಕರೆದಿದ್ದೇಕೆ ಸಿಎಂ?

ಬೆಂಗಳೂರು : ಮೊದಲ ಕ್ಯಾಬಿನೆಟ್ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿದ್ದರಾಮಯ್ಯ, ಹೆಚ್‌ಸಿ ಮಹಾದೇವಪ್ಪ, ಕೆ.ಎನ್ ರಾಜಣ್ಣ ಹಾಗೂ

Live Cricket

Add Your Heading Text Here