Download Our App

Follow us

Home » ಸಿನಿಮಾ » ಸುಪ್ರೀಂ ಕೋರ್ಟ್ ಕಟಕಟೆಯಲ್ಲಿ ದರ್ಶನ್​​ ಬೇಲ್​ ಭವಿಷ್ಯ -​ ಮತ್ತೆ ಬಳ್ಳಾರಿ ಜೈಲು​ ಸೇರ್ತಾರಾ ದಾಸ​?

ಸುಪ್ರೀಂ ಕೋರ್ಟ್ ಕಟಕಟೆಯಲ್ಲಿ ದರ್ಶನ್​​ ಬೇಲ್​ ಭವಿಷ್ಯ -​ ಮತ್ತೆ ಬಳ್ಳಾರಿ ಜೈಲು​ ಸೇರ್ತಾರಾ ದಾಸ​?

ಬೆಂಗಳೂರು : ಕೆಲವು ದಿನಗಳ ಹಿಂದಷ್ಟೇ ನಿಟ್ಟುಸಿರು ಬಿಟ್ಟಿದ ನಟ ದರ್ಶನ್ ಹಾಗೂ 7 ಮಂದಿ ಆರೋಪಿಗಳಿಗೆ ಮತ್ತೆ ನಡುಕ ಶುರುವಾಗಿದೆ. ರೇಣುಕಾಸ್ವಾಮಿ ಪ್ರಕರಣದ ಎಲ್ಲಾ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಆಚೆ ಇದ್ದಾರೆ. ಈಗ ಹೈಕೋರ್ಟ್​ ನೀಡಿರುವ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಕೆಯಾಗಿದ್ದು, ದರ್ಶನ್​ಗೆ ಮತ್ತೆ ಸಂಕಷ್ಟ ಆರಂಭವಾದಂತಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೇಸಲ್ಲಿ ನಟ ದರ್ಶನ್​ಗೆ ಕೋರ್ಟ್ ರೆಗ್ಯೂಲರ್ ಜಾಮೀನು ಏನೋ ಕೊಟ್ಟಿದೆ. ಆದರೆ ಅದರ ಜೊತೆ ಜೊತೆಗೆ ಹಲವು ಷರತ್ತುಗಳನ್ನು ಕೊಟ್ಟಿತ್ತು. ಮೈಸೂರಿಗೆ ಹೋಗೋದಕ್ಕೆ ದರ್ಶನ್ ಪಡೆದಿರೋ ಅನುಮತಿ ಮುಕ್ತಾಯವಾಗಿದ್ದು, ದಾಸ ಬೆಂಗಳೂರಿಗೆ ವಾಪಾಸ್ ಆಗಬೇಕಿದೆ. ಈ ಬೆನ್ನಲ್ಲೇ ದಾಸನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ದರ್ಶನ್‌ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಪೊಲೀಸರು ನಿನ್ನೆ ಮೇಲ್ಮನವಿ ಸಲ್ಲಿಸಿದ್ದಾರೆ. ದರ್ಶನ್ ಅಷ್ಟೇ ಅಲ್ಲದೇ 7 ಮಂದಿ ಆರೋಪಿಗಳ ಜಾಮೀನು ರದ್ದು ಮಾಡುವಂತೆ ಅರ್ಜಿಯನ್ನ ಸಲ್ಲಿಸಲಾಗಿದೆ.

ವಕೀಲ ಅನಿಲ್.ಸಿ ನಿಶಾನಿಯಿಂದ ಅರ್ಜಿ ಸಲ್ಲಿಕೆ : ರೇಣುಕಾಸ್ವಾಮಿ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ವಕೀಲ ಅನಿಲ್.ಸಿ ನಿಶಾನಿಯಿಂದ ಅರ್ಜಿ ಸಲ್ಲಿಕೆಯಾಗಿದ್ದು, ನಟ ದರ್ಶನ್, ಪವಿತ್ರಾಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಆರೋಪಿಗಳ ಜಾಮೀನು ರದ್ದು ಮಾಡಿವಂತೆ ಮನವಿ ಮಾಡಿದ್ದಾರೆ. ಈ ಜಾಮೀನು ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇನ್ನೊಂದು ವಾರದೊಳಗೆ ನಡೆಯಲಿದೆ. ಸದ್ಯ ಈ ಬೆಳವಣಿಗೆ ಆರೋಪಿಗಳಿಗೆ ನಡುಕ ಹುಟ್ಟಿಸಿದ್ದು, ಸುಪ್ರೀಂಕೋರ್ಟ್​ ಹೈಕೋರ್ಟ್​ ಆದೇಶವನ್ನ ಎತ್ತಿ ಹಿಡಿಯುತ್ತಾ ಅಥವಾ ಜಾಮೀನು ರದ್ದು ಮಾಡಿ ಆದೇಶ ಹೊರಡಿಸುತ್ತ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ : ‘ಗೋಲ್ಡ್ ಬ್ಯೂಟಿ’ಯಿಂದ ಸಂಕಷ್ಟಕ್ಕೆ ಸಿಲುಕಿದ್ರಾ MLA ವಿನಯ್ ಕುಲಕರ್ಣಿ? ಯಾವುದೇ ಕ್ಷಣ ನೋಟಿಸ್ ಸಾಧ್ಯತೆ!

Leave a Comment

DG Ad

RELATED LATEST NEWS

Top Headlines

‘ನಾನು ಕಪ್ ಗೆಲ್ಲೋಕೆ ಆಡ್ತಿಲ್ಲ’ – ಅಸಲಿ ಕಾರಣ​ ರಿವೀಲ್​​ ಮಾಡಿದ ಹನುಮಂತ..!

ಹಳ್ಳಿ ಹೈದ​ ಹನುಮಂತ ಅವರು ಬಹಳ ಚಾಲಾಕಿತನದಿಂದ ದೊಡ್ಮನೆ​ ಆಟವನ್ನು ಆಡುತ್ತಿದ್ದಾರೆ. ಬೇರೆ ಬಿಗ್​ಬಾಸ್​ ಸ್ಪರ್ಧಿಗಳೆಲ್ಲ ಸಖತ್ ಟೆನ್ಷನ್ ಮಾಡಿಕೊಂಡು ಟಾಸ್ಕ್​ ಆಡಿದರೆ ಹನುಮಂತ ಮಾತ್ರ ಎಲ್ಲವನ್ನೂ

Live Cricket

Add Your Heading Text Here